ಬೆಂಗಳೂರು ಹೈದರಾಬಾದ್ ಪ್ರಯಾಣ ಇನ್ನು 2 ಗಂಟೆ ಮಾತ್ರ, ಬುಲೆಟ್ ರೈಲು ಡಿಪಿಆರ್ ಸಿದ್ಧತೆ ನಡೆಯುತ್ತಿದೆ. ಸದ್ಯ 16 ಗಂಟೆ ಇರುವ ರೈಲು ಪ್ರಯಾಣ ಇನ್ನು ಕೇವಲ 2 ಗಂಟೆಯಲ್ಲಿ ದಕ್ಷಿಣ ಭಾರತದ 2 ನಗರಗಳನ್ನ ಸಂಪರ್ಕ ಸಾಧ್ಯವಾಗುತ್ತಿದೆ. 

ನವದೆಹಲಿ (ಸೆ.15) ಭಾರತದಲ್ಲಿ ಬುಲೆಟ್ ರೈಲು ಯೋಜನೆ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ವಿಶೇಷ ಅಂದರೆ ಬೆಂಗಳೂರು ಹೈದರಾಬಾದ್ ನಡುವೆ ಬುಲೆಟ್ ರೈಲು ಯೋಜನೆ ಆರಂಭಗೊಂಡಿದೆ. ಡಿಪಿಆರ್ ಸಿದ್ಧತೆಗಳು ನಡೆಯುತ್ತಿದೆ. ಸದ್ಯ ಬೆಂಗೂರು ಹಾಗೂ ಹೈದರಾಬಾದ್ ನಡುವಿನ ರೈಲು ಪ್ರಯಾಣದ ಅವಧಿ ಸರಿಸುಮಾರು 10 ಗಂಟೆ. ವಂದೇ ಭಾರತ್ ಸಮಯ ಕೊಂಚ ಕಡಿಮೆಯಾಗಲಿದೆ. ಆದರೆ ಬುಲೆಟ್ ರೈಲಿನಲ್ಲಿ ಕೇವಲ 2 ಗಂಟೆ ಮಾತ್ರ. ಈ ಮೂಲಕ ದಕ್ಷಿಣ ಭಾರತದ ಎರಡು ಟೆಕ್ ನಗರಗಳ ನಡುವಿನ ಸಂಪರ್ಕ ಸಮಯ ಇಳಿಕೆಯಾಗಲಿದೆ.

ದಕ್ಷಿಣ ಕೇಂದ್ರ ರೈಲ್ವೇಯಿಂದ ಭರ್ಜರಿ ಸಿದ್ಧತೆ

ದಕ್ಷಿಣ ಕೇಂದ್ರ ರೈಲ್ವೈ( SCR) ಈಗಾಗಲೇ ಬೆಂಗಳೂರು ಹೈದರಾಬಾದ್ ಬುಲೆಟ್ ರೈಲಿಗೆ ಡಿಪಿಆರ್ ತಯಾರಿ ನಡೆಯುತ್ತಿದೆ. 626 ಕಿಲೋಮೀಟರ್ ಉದ್ದ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ತಯಾರಿಗಳು ಆರಂಭಗೊಂಡಿದೆ. ದಕ್ಷಿಣ ಕೇಂದ್ರ ರೈಲ್ವೈ ಈಗಾಗಲೇ ಹೈಸ್ಪೀಡ್ ರೈಲು ಕಾರಿಡಾರ್ ಹಾದು ಹೋಗುವ ಸ್ಥಳಗಳ ಕುರಿತು ಅಧ್ಯಯನ ನಡೆಸುತ್ತಿದೆ.ಲೋಕೋಶನ್ ಸರ್ವೆಗಳು ನಡೆಯುತ್ತಿದೆ. ಸ್ಥಳ ಸಮೀಕ್ಷೆ, ಕಾರಿಡಾರ್ ಯೋಜನೆಯ ಸಂಪೂರ್ಣ ಸರ್ವೆಗಳು ಮುಗಿದ ಬಳಿಕ ಮಾರ್ಚ್ 2026ಕ್ಕೆ ಬೆಂಗಳೂರು ಹೈದರಾಬಾದ್ ಬುಲೆಟ್ ರೈಲಿನ ಡಿಪಿಆರ್ ಸಲ್ಲಿಕೆಯಾಗಲಿದೆ. ದಕ್ಷಿಣ ಕೇಂದ್ರ ರೈಲ್ವೈ ಇಲಾಖೆ ಭಾರತೀಯ ರೈಲ್ವೇಗೆ ಈ ಡಿಪಿಆರ್ ಸಲ್ಲಿಕೆ ಮಾಡಲಿದೆ. ರೈಲ್ವೇ ಮಂಡಳಿ ಈ ಡಿಪಿಆರ್ ವರದಿಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಕಳುಹಿಸಲಿದೆ. ಸಚಿವ ಸಂಪುಟದ ಏಕಾನಾಮಿಕ್ ಅಫೈರ್ಸ್ ಕಮಿಟಿ ಅನುಮೋದನೆ ನೀಡಿದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.

ದೀಪಾವಳಿ ಸಮಯಕ್ಕೆ ಭಾರತದ ಮೊಟ್ಟಮೊದಲ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಪ್ರಯಾಣ ಆರಂಭ!

ಬುಲೆಟ್ ರೈಲು ವೇಗ

ಅಹಮ್ಮದಾಬಾದ್ ಮುಂಬೈ ಬುಲೆಟ್ ರೈಲು ಯೋಜನೆ ಪ್ರಗತಿಯಲ್ಲಿದೆ. ಈಗಾಗೇ ಪರೀಕ್ಷಾರ್ಥಗಳು ನಡೆಯಲಿದೆ. ಕೆಲ ಪ್ರದೇಶದಲ್ಲಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯತ್ತಿದೆ. ಈ ರೈಲು ವೇಗ 350 ಕಿಲೋಮೀಟರ್ ಪ್ರತಿ ಗಂಟೆಗೆ. ಇನ್ನು ಸರಾರಯಾಗಿ ಭಾರತದ ಬುಲೆಟ್ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.

ಕಾರಿಡಾರ್ ಹಾದು ಹೋಗುವ ಭೂ ಸ್ವಾಧೀನ ಪಡೆಯುವುದೇ ಸವಾಲು

ಬೆಂಗಳೂರು ಹೈದರಾಹಾದ್ ಬುಲೆಟ್ ರೈಲು ಯೋಜನೆಯಲ್ಲಿ ಭೂಸ್ವಾಧಿನ ಪಡಿಸಿಕೊಳ್ಳವುದೇ ಅತೀ ದೊಡ್ಡ ಸವಾಲಾಗಿದೆ. ಹೈ ಸ್ಪೀಡ್ ರೈಲು ಕಾರಿಡಾರ್ ಯೋಜನೆ ಹಲವು ಪ್ರದೇಶಗಳ ಮೂಲಕ ಹಾದೋ ಹೋಗಲಿದೆ. ಈ ಭೂಪ್ರದೇಶಗಳನ್ನು ವಶಕ್ಕೆ ಪಡೆದು ಯೋಜನೆ ಕಾರ್ಯಗತಗೊಳಿಸುವುದು ಸವಾಲಾಗಲಿದೆ.

ಕರ್ನಾಟಕ ಮುಖ್ಯ ಕಾರ್ಯದರ್ಶಿ ಜೊತೆ ಮಹತ್ವದ ಸಭೆ

ದಕ್ಷಿಣ ಕೇಂದ್ರ ರೈಲ್ವೇ ಅಧಿಕಾರಿಗಳ ತಂಡ ಈಗಾಗಲೇ ಕರ್ನಾಟಕ ಮುಖ್ಯ ಕಾರ್ಯದರ್ಶಿ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಬುಲೆಟ್ ರೈಲು ಯೋಜನೆ ಕುರಿತು ಸಂಪೂರ್ಣವಿವರಣೆ ನೀಡಿದ್ದಾರೆ. ಇದೇ ವೇಳೆ ಕರ್ನಾಟಕದ ಭಾಗದ ಭೂ ವಶಕ್ಕೆ ಪಡೆಯುವ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ ತೆಲಂಗಾಣ ಸರ್ಕಾರದ ಜೊತೆಗೂ ಮಾತುಕತೆ ನಡೆದಿದೆ. ಮೊದಲ ಹಂತದ ಮಾತುಕತೆ ಫಲಪ್ರದವಾಗಿದೆ ಎಂದು ವರದಿಗಳು ಹೇಳುತ್ತಿದೆ.

"ಯಾರಿವನು ಈ ಮನ್ಮಥನು.." ಟಿಸಿ ಮೇಲೆಯೇ ಕ್ರಶ್; ರಾತ್ರೋರಾತ್ರಿ ವೈರಲ್ ಆದ ಟಿಕೆಟ್ ಕಲೆಕ್ಟರ್

ಶೀಘ್ರದಲ್ಲೇ ಯೋಜನೆ ಆರಂಭಿಸಲು ತೆಲಂಗಾಣ ಒತ್ತಾಯ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬೆಂಗಳೂರು ಹೈದರಾಬಾದ್ ಬುಲೆಟ್ ರೈಲು ಯೋಜನೆ ಶೀಘ್ರದಲ್ಲೇ ಆರಂಭಿಸಲು ಒತ್ತಾಯಿಸಿದ್ದಾರೆ. ಇದೇ ವೇಳೆ ಹೈದರಾಬಾದ್ ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಕುರಿತು ಪ್ರಸ್ತಾಪಿಸಿದ್ದಾರೆ. ಇತ್ತ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಕೂಡ ದಕ್ಷಿಣ ರಾಜ್ಯಗಳು ಶೀಘ್ರದಲ್ಲೇ ಹೈಸ್ಪೀಡ್ ರೈಲು ಯೋಜನೆ ಕಾರ್ಯಗತಗೊಳಿಸಲಿದೆ ಎಂದಿದ್ದಾರೆ.