ಭಾರತದ ಮುಂದೆ ಮಂಡಿಯೂರಿದ್ರಾ ಟ್ರಂಪ್? ನ.30ಕ್ಕೆ ತೆರಿಗೆ ನೀತಿ ವಾಪಸ್ ಪಡೆಯಲು ತಯಾರಿ, ಭಾರತದ ಮೇಲೆ ಶೇಕಡಾ 50 ರಷ್ಟು ತೆರಿಗೆ ಹೇರಿಕೆ ಮಾಡಿ ಕೈಸುಟ್ಟುಕೊಂಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇದೀಗ ಈ ನಿರ್ಧಾರ ವಾಪಸ್ ಪಡೆಯಲು ಮುಂದಾಗಿದ್ದಾರೆ.
ನವದೆಹಲಿ (ಸೆ.18) ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬೆಳವಣಿಗೆ, ವಿಶ್ವದಲ್ಲೇ ಭಾರತ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಅಮರಿಕಗೆ ಸಹಿಸಿಕೊಳ್ಳಲುಸಾಧ್ಯವಾಗುತ್ತಿಲ್ಲ. ರಷ್ಯಾದಿಂದ ತೈಲ ಆಮದು ನಿಲ್ಲಿಸಲು ತಾಕೀತು, ಅಮರಿಕದ ಕೃಷಿ ಬೀಜ, ಸಲಕರಣೆ ಖರೀದಿಸುವಂತೆ ಭಾರತಕ್ಕೆ ಒತ್ತಡ ಹೇರಿದ್ದ ಅಮೆರಿಕ, ಕೊನೆಗೆ ಯಾವೂದಕ್ಕೂ ಬಗ್ಗದ ಕಾರಣ ಶೇಕಡಾ 50ರಷ್ಟು ತೆರಿಗೆ ಹೇರಿಕೆ ಮಾಡಿತ್ತು. ದುಬಾರಿ ತೆರಿಗೆಯಿಂದ ಭಾರತ, ತಾನು ಹೇಳಿದಂತೆ ನಡೆದುಕೊಳ್ಳಲಿದೆ, ಇಲ್ಲಾ, ತೆರಿಗೆ ರದ್ದು ಪಡಿಸಲು ಭಾರತ ಮನವಿ ಮಾಡಲಿದೆ ಎಂದು ಅಮೆರಿಕ ಲೆಕ್ಕಾಚಾರ ಹಾಕಿತ್ತು. ಆದರೆ ಭಾರತ ತನ್ನ ದಿಟ್ಟ ನಡೆ ಮುಂದುವರಿಸಿತ್ತು. ಟ್ರಂಪ್ ತೆರಿಗೆ ನೀತಿಗೆ ಪ್ರತಿಯಾಗಿ ಭಾರತ ಕೆಲ ಪ್ರತಿತಂತ್ರ ಹೆಣೆದಿತ್ತು. ಇದೀಗ ಡೋನಾಲ್ಡ್ ಟ್ರಂಪ್ ಭಾರತದ ಮುಂದೆ ಮಂಡಿಯೂರಿದ್ರಾ? ಕಾರಣ ನವೆಂಬರ್ 30ಕ್ಕೆ ಡೋನಾಲ್ಡ್ ಟ್ರಂಪ್, ಭಾರತದ ಮೇಲೆ ಹೇರಿದ್ದ ತೆರಿಗೆ ನೀತಿಯನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ.
ಡೋನಾಲ್ಡ್ ಟ್ರಂಪ್ ಯೂ ಟರ್ನ್
ಭಾರತದ ಮುಖ್ಯ ಆರ್ಥಿಕ ಸಲಹೆಹಾರ ವಿ ಅನಂತ್ ನಾಗೇಶ್ವರನ್ ಈ ಕುರಿತು ಕೆಲ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ನವೆಂಬರ್ 30ಕ್ಕೆ ಡೋನಾಲ್ಡ್ ಟ್ರಂಪ್, ಭಾರತದ ಮೇಲೆ ಹೇರಿದ್ದ ತೆರಿಗೆ ನೀತಿಯನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ. ದುಬಾರಿ ತೆರಿಗೆ ಹೇರಿಕೆ ಮಾಡಿದ ಬಳಿಕ ಉಭಯ ದೇಶಗಳ ಸಂಬಂಧ ಹಳಸುವ ಸ್ಥಿತಿಗೆ ತಲುಪಿತ್ತು. ಆದರೆ ಇತ್ತೀಚೆಗಿನ ದ್ವಪೀಕ್ಷೀಯ ವ್ಯಪಾರ ವಹಿವಾಟು ಹಾಗೂ ಸಂಬಂಧ ಉತ್ತಮವಾಗಿದೆ. ಹೀಗಾಗಿ ಟಾರಿಕೆ ಇಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ವಿ ಅನಂತ್ ನಾಗೇಶ್ವರನ್ ಹೇಳಿದ್ದಾರೆ.
PM Modi bday: ಕೊನೆಗೂ ಟ್ರಂಪ್ ಫೋನ್ಗೆ ಸಿಕ್ಕ ಮೋದಿ: 'ಗೆಳೆಯ, ಓ ಗೆಳೆಯ' ಎಂದು ವಿಷ್ ಮಾಡಿದ 'ದೊಡ್ಡಣ್ಣ'!
ರಾಜತಾಂತ್ರಿಕ ನಿರ್ಧಾರಗಳಿಂದ ಅಮೆರಿಕಗೆ ಸಂಕಷ್ಟ
ಭಾರತದ ಮೇಲೆ ತೆರಿಗೆ ನೀತಿ ಘೋಷಿಸಿದ ಬಳಿಕ ಭಾರತ ರಾಜತಾಂತ್ರಿಕ ಮಾರ್ಗದ ಮೂಲಕ ಅಮೆರಿಕ ಹಾಗೂ ಭಾರತ ನಡುವಿನ ಸಂಬಂಧ, ಭಾರತ ಹಾಗೂ ಇತರ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಕುರಿತು ತಿಳಿ ಹೇಳಿತ್ತು. ಇಷ್ಟೇ ಅಲ್ಲ ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ವಹಿವಾಟಿನ ಮೇಲೆ ಬೀರು ಪರಿಣಾಮಗಳ ಕುರಿತು ಚರ್ಚಿಸಲಾಗಿತ್ತು. ಹಲವು ಕ್ರಮಗಳನ್ನು ಭಾರತ ಕೈಗೊಂಡಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದಾರೆ.
ಶೇಕಡಾ 25ಕ್ಕೆ ಇಳಿಕೆ ಮಾಡಲು ಮುಂದಾದ ಅಮೆರಿಕ
ಅಮೆರಿಕ ಆರಂಭದಲ್ಲಿ ಭಾರತದ ಮೇಲೆ ಶೇಕಡಾ 25ರಷ್ಟು ತೆರಿಗೆ ವಿಧಿಸಿತ್ತು. ಬಳಿಕ ಮತ್ತೆ ಶೇಕಡಾ 25ರಷ್ಟು ತೆರಿಗೆ ವಿಧಿಸಿತ್ತು. ಈ ಮೂಲಕ ಶೇಕಡಾ 50ರಷ್ಟು ತೆರಿಗೆ ವಿಧಿಸಲಾಗಿತ್ತು. ಎರಡನೇ ಭಾರಿಗೆ ವಿಧಿಸಿದ ಶೇಕಡಾ 25ರಷ್ಟು ತೆರಿಗೆ ರಾಜಕೀಯ ಕಾರಣಗಳಿಂದ ಹೇರಿಕೆ ಮಾಡಲಾಗಿತ್ತು. ಇದೀಗ ಭಾರತದ ಪ್ರಯತ್ನಗಳಿಂದ ಡೋನಾಲ್ಡ್ ಟ್ರಂಪ್ ನವೆಂಬರ್ 30 ರಂದು ತೆರಿಗೆ ವಾಪಸ್ ಪಡೆಯಲಿದ್ದಾರೆ ಎಂದು ವಿ ಅನಂತ್ ನಾಗೇಶ್ವರನ್ ಹೇಳಿದ್ದಾರೆ.
ಮೈ ಬೆಸ್ಟ್ ಫ್ರೆಂಡ್ ಮೋದಿ ಎನ್ನುತ್ತಲೇ ಯುರೋಪ್ ಜೊತೆ ಸೇರಿ ಭಾರತದ ವಿರುದ್ಧ ಟ್ರಂಪ್ ಭಾರೀ ಪ್ಲ್ಯಾನ್?
