ಹಬ್ಬದ ವೇಳೆ ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ, ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್‌ ಮಾಡಿದರೆ ಶೇ.20ರಷ್ಟು ರಿಯಾಯ್ತಿ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.

ನವದೆಹಲಿ: ಹಬ್ಬದ ವೇಳೆ ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ, ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್‌ ಮಾಡಿದರೆ ಶೇ.20ರಷ್ಟು ರಿಯಾಯ್ತಿ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.

ಆ.14ರಿಂದ ಈ ಯೋಜನೆ ಆರಂಭವಾಗಲಿದ್ದು, ಮೊದಲ ಯಾನದ ಪ್ರಯಾಣ ದಿನಾಂಕವು ಅ.13ರಿಂದ ಅ.26ರವರೆಗೆ ಇರಬೇಕಿದೆ. ರಿಟರ್ನ್‌ ಬರುವ ದಿನಾಂಕವು ನ.17ರಿಂದ ಡಿ.1ರ ಒಳಗೆ ಇರಬೇಕಿದೆ. ಈ ಅವಧಿಯಲ್ಲಿ ಟಿಕೆಟ್ ಬುಕ್‌ ಮಾಡಿಕೊಂಡವರಿಗೆ ರಿಯಾಯ್ತಿ ಲಭಿಸಲಿದೆ. ಇವುಗಳು ವಂದೇ ಭಾರತ್‌, ಶತಾಬ್ಧಿ, ರಾಜಧಾನಿ, ದುರಂತೋ ರೀತಿ ಪ್ರೀಮಿಯಂ ರೈಲುಗಳಿಗೆ ಅನ್ವಯಿಸುವುದಿಲ್ಲ. 

ಎಲ್ಲಾ ಸಾಮಾನ್ಯ ಎಕ್ಸ್‌ಪ್ರೆಸ್‌, ಸುಪರ್‌ಫಾಸ್ಟ್‌ಗಳಿಗೆ ಅನ್ವಯಿಸಲಿದೆ. ಇದರಲ್ಲಿ ಯಾವುದೇ ರೀಫಂಡ್‌ ದೊರೆಯುವುದಿಲ್ಲ ಎಂದು ರೈಲ್ವೆ ತಿಳಿಸಿದೆ.

ಶೀಘ್ರದಲ್ಲೇ ಸೀನಿಯರ್‌ ಸಿಟಿಜನ್ಸ್‌ಗೆ ರೈಲಿನ ಸ್ಲೀಪರ್‌, ಥರ್ಡ್‌ ಎಸಿ ಪ್ರಯಾಣ ದರ ರಿಯಾಯಿತಿ ಮರು ಜಾರಿ

ಹಿರಿಯ ನಾಗರಿಕರಿಗೆ, ವಿಶೇಷವಾಗಿ ಸ್ಲೀಪರ್ ಮತ್ತು 3AC ಕ್ಲಾಸ್‌ಗಳಲ್ಲಿ ದರ ರಿಯಾಯಿತಿಗಳನ್ನು ಪರಿಶೀಲಿಸಲು ರೈಲ್ವೆಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದರು. ರಿಯಾಯಿತಿಗಳ ಸ್ಥಿತಿಗತಿಯ ಕುರಿತು ಸಂಸತ್ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಸಮಿತಿಯು ಈ ವಿಷಯವನ್ನು ಹೊಸದಾಗಿ ಪರಿಶೀಲಿಸುವಂತೆ ಸಲಹೆ ನೀಡಿದೆ ಎಂದು ಹೇಳಿದರು. ಹಲವಾರು ಸಂಸದರು, ವಯಸ್ಸಾದ ಪ್ರಯಾಣಿಕರಿಗೆ ಈ ಹಿಂದೆ ಲಭ್ಯವಿದ್ದ ಪ್ರಯಾಣ ರಿಯಾಯಿತಿಗಳನ್ನು ಪುನಃಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು.

"ರೈಲ್ವೆಯ ಸ್ಥಾಯಿ ಸಮಿತಿಯು ಹಿರಿಯ ನಾಗರಿಕರಿಗೆ ಕನಿಷ್ಠ ಸ್ಲೀಪರ್ ಮತ್ತು 3AC ಯಲ್ಲಿ ರಿಯಾಯಿತಿಯನ್ನು ಪರಿಶೀಲಿಸಲು ಮತ್ತು ಪರಿಗಣಿಸಲು ಸಲಹೆ ನೀಡಿದೆ" ಎಂದು ವೈಷ್ಣವ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

"ಭಾರತೀಯ ರೈಲ್ವೆ ಸಮಾಜದ ಎಲ್ಲಾ ಸ್ತರಗಳಿಗೂ ಕೈಗೆಟುಕುವ ಸೇವೆಗಳನ್ನು ಒದಗಿಸಲು ಶ್ರಮಿಸುತ್ತಿದೆ ಮತ್ತು 2023-24ರಲ್ಲಿ ಪ್ರಯಾಣಿಕರ ಟಿಕೆಟ್‌ಗಳ ಮೇಲೆ 60,466 ಕೋಟಿ ರೂ. ಸಬ್ಸಿಡಿಯನ್ನು ನೀಡಿದೆ. ಇದು ರೈಲ್ವೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ವ್ಯಕ್ತಿಗೆ ಸರಾಸರಿ 45 ಪ್ರತಿಶತದಷ್ಟು ರಿಯಾಯಿತಿಯಾಗಿದೆ" ಎಂದು ಹಿರಿಯ ನಾಗರಿಕರಿಗೆ ನೀಡಲಾದ ರಿಯಾಯಿತಿಗಳನ್ನು ಮರುಸ್ಥಾಪಿಸದಿರಲು ಕಾರಣಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತಾ ವೈಷ್ಣವ್ ಹೇಳಿದರು.