ಈಗಂತೂ ಅನೇಕರು ಒಂದು ವಾರ ಮುಂಚಿತವಾಗಿಯೇ ಆರೋಗ್ಯಕರ ಆಹಾರದ ಪ್ಲಾನ್ ಮಾಡುತ್ತಾರೆ.  ಹಾಗಾಗಿ ಇಂದು ನಾವು ನಿಮಗೆ ಮುಂಚಿತವಾಗಿ ತಯಾರಿಸಬಹುದಾದ ಊಟ ಅಥವಾ ತಿಂಡಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. 

ಮನೆ ಮತ್ತು ಕಚೇರಿ ಕೆಲಸ ಎರಡನ್ನೂ ಬ್ಯಾಲೆನ್ಸ್ ಮಾಡಬೇಕಾಗಿರುವ ಜನರಿಗೆ ಆರೋಗ್ಯಕರ ಆಹಾರವನ್ನು ಸೇವಿಸುವುದು ಸವಾಲಿನ ಕೆಲಸವಾಗಿದೆ. ಲಾಂಗ್ ಶಿಫ್ಟ್ಸ್, ಮೀಟಿಂಗ್ ಮತ್ತು ನಿಗದಿತ ಸಮಯದೊಳಗೆ ಕೆಲಸವನ್ನು ಮುಗಿಸುವ ಒತ್ತಡದಿಂದಾಗಿ ಜನರು ಹೆಚ್ಚಾಗಿ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ತಮಗಾಗಿ ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ನೀವು ಸ್ವಲ್ಪ ಪ್ಲಾನ್ ಮಾಡಿದ್ರೂ ಹೆಲ್ತಿ ಫುಡ್ ಸೇವಿಸುವುದು ನಿಮಗೆ ದೊಡ್ಡ ಸವಾಲಲ್ಲ. ಈಗಂತೂ ಅನೇಕರು ಒಂದು ವಾರ ಮುಂಚಿತವಾಗಿಯೇ ಆರೋಗ್ಯಕರ ಆಹಾರದ ಪ್ಲಾನ್ ಮಾಡುತ್ತಾರೆ. ಹಾಗಾಗಿ ಇಂದು ನಾವು ನಿಮಗೆ ಮುಂಚಿತವಾಗಿ ತಯಾರಿಸಬಹುದಾದ ಮತ್ತು ಅಗತ್ಯವಿದ್ದಾಗ ಸೇವಿಸಬಹುದಾದ ಕೆಲವು ಆರೋಗ್ಯಕರ ಊಟ ಅಥವಾ ತಿಂಡಿಯ ಬಗ್ಗೆ ಹೇಳಲಿದ್ದೇವೆ.

ಹೀಗಿರಲಿ ಊಟ
ಮೊದಲನೆಯದಾಗಿ ವಾರದ ಊಟ ಎಂದು ಪ್ಲಾನ್ ತಯಾರಿಸಿ. ನಿಮ್ಮ ಊಟವನ್ನು ಯೋಜಿಸುವಾಗ ತಯಾರಿಸಲು ಸುಲಭವಾವಾಗಿರುವ, ಕಡಿಮೆ ಸಮಯದಲ್ಲಿ ಬೇಯಿಸಬಹುದಾದ, ಪೋಷಕಾಂಶಗಳಿಂದ ಕೂಡಿರುವ ಆಹಾರವನ್ನು ನಿಮ್ಮ ಯೋಜನೆಯಲ್ಲಿ ಸೇರಿಸಿಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ. ಪ್ರೋಟೀನ್, ಧಾನ್ಯಗಳು (ಬಾರ್ಲಿ, ಗೋಧಿ, ಓಟ್ಸ್), ಹಣ್ಣುಗಳು, ತರಕಾರಿಗಳು ಮತ್ತು ಹೆಲ್ತಿ ಫ್ಯಾಟ್ ಸೇರಿಸಲು ಪ್ರಯತ್ನಿಸಿ.

ಸಿಂಪಲ್ ರೆಸಿಪಿ ಆರಿಸಿಕೊಳ್ಳಿ
ಮಾಡಲು ಸರಳವಾದ ಮತ್ತು ಹೆಚ್ಚಿನ ಪದಾರ್ಥಗಳ ಅಗತ್ಯವಿಲ್ಲದ ರೆಸಿಪಿ ಆಯ್ಕೆ ಮಾಡಿ. ಫ್ರೈಸ್, ಶೀಟ್ ಪ್ಯಾನ್ ಮೀಲ್ಸ್ ಮತ್ತು ಪಾಟ್ ಡಿಶ್‌ಗಳಂತಹ ಊಟಗಳು ನಿಮ್ಮ ಸಮಯ ಮತ್ತು ಶ್ರಮ ಎರಡನ್ನೂ ಉಳಿಸಬಹುದು. ಈ ವರ್ಗದಲ್ಲಿ ನೀವು ಅನೇಕ ಭಕ್ಷ್ಯಗಳು ಮತ್ತು ಅವುಗಳನ್ನು ಮಾಡುವ ವಿಧಾನವನ್ನು ಆನ್‌ಲೈನ್‌ನಲ್ಲಿ ಕಾಣಬಹುದು.

ಪ್ಯಾಕ್ ಮಾಡಿದ ಫುಡ್ ಬದಲಿಗೆ
ನೀವು ವಾರಾಂತ್ಯದಲ್ಲಿ ಗ್ರಿಲ್ಡ್ ಚಿಕನ್, ಬೇಯಿಸಿದ ತರಕಾರಿಗಳು ಅಥವಾ ಕ್ವಿನೋವಾ ಅಥವಾ ಬ್ರೌನ್ ರೈಸ್‌ನಂತಹನಂತಹ ಮುಖ್ಯ ಊಟಗಳನ್ನು ತಯಾರಿಸಬಹುದು. ಮಾರುಕಟ್ಟೆಯಲ್ಲಿ ಹೇರಳವಾಗಿ ಮಾರಾಟವಾಗುವ ಪ್ಯಾಕ್ ಮಾಡಿದ ಆಹಾರಗಳನ್ನು ನೀವು ನೋಡಿರಬೇಕು. ಆದರೆ ಆ ಆಹಾರಗಳನ್ನು ಹಲವಾರು ತಿಂಗಳುಗಳವರೆಗೆ ತಾಜಾವಾಗಿಡಲು ಸಂರಕ್ಷಕಗಳನ್ನು ಬಳಸಲಾಗುತ್ತದೆ. ಆದರೆ ರಾಸಾಯನಿಕಗಳಿಲ್ಲದೆ ನೀವು ನಿಮ್ಮದೇ ಸ್ಟೈಲ್‌ನಲ್ಲಿ ಇದನ್ನ ತಯಾರಿಸಬಹುದು.

ಭಾಗಗಳಾಗಿ ಮಾಡಿ
ನೀವು ವಾರಗಟ್ಟಲೇ ಹಾಳಾಗದಂತಹ ಆಹಾರವನ್ನು ಸಣ್ಣ ಮರುಬಳಕೆ ಮಾಡಬಹುದಾದ ಡಬ್ಬಿಗಳಲ್ಲಿ ಸಂಗ್ರಹಿಸಿ. ಇದು ನಿಮಗೆ ಎರಡು ಪ್ರಯೋಜನಗಳನ್ನು ನೀಡುತ್ತದೆ. ಮೊದಲನೆಯದಾಗಿ ನೀವು ಕಚೇರಿಗೆ ಹೋಗಬೇಕಾದಾಗಲೆಲ್ಲಾ ನಿಮ್ಮೊಂದಿಗೆ ಇದನ್ನ ತೆಗೆದುಕೊಂಡು ಹೋಗಬಹುದು. ಎರಡನೆಯದಾಗಿ, ಇದು ನೀವು ಸಮತೋಲಿತ ಆಹಾರವನ್ನು ಸೇವಿಸಲು ಸಹಾಯ ಮಾಡುತ್ತದೆ.

ಅಡುಗೆ ಉಪಕರಣಗಳ ಅಯ್ಕೆ
ಸ್ಲೋ ಕುಕ್ಕರ್ ಮತ್ತು ಇನ್‌ಸ್ಟಾಂಟ್ ಪಾಟ್.. ಬ್ಯೂಸಿ ಲೈಫ್‌ಸ್ಟೈಲ್‌ ಲೀಡ್ ಮಾಡುತ್ತಿರುವ ಜನರಿಗೆ ಬೆಸ್ಟ್‌ ಫ್ರೆಂಡ್ಸ್‌. ಈ ಉಪಕರಣದ ಸಹಾಯದಿಂದ ಕಡಿಮೆ ಶ್ರಮದ ಜೊತೆಗೆ ರುಚಿಕರವಾದ ಮತ್ತು ಆರೋಗ್ಯಕರ ಆಹಾರವನ್ನು ತಯಾರಿಸಲು ನಿಮಗೆ ಸಹಾಯವಾಗುತ್ತದೆ. ನೀವು ಆಹಾರವನ್ನು ಅವುಗಳಲ್ಲಿ ಬೇಯಿಸಲು ಇರಿಸಿ. ನಿಮ್ಮ ಕೆಲಸ ನೀವು ಮಾಡಿಕೊಳ್ಳಬಹುದು. ಜೊತೆಗೆ ಪೌಷ್ಟಿಕ ಊಟವನ್ನೂ ಸೇವಿಸಬಹುದು.

ಸಲಾಡ್‌ ಮರೆಯದಿರಿ
ಸಲಾಡ್‌ ಮಾಡೋದನ್ನ ಮರೆಯಬೇಡಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಕಟ್ ಮಾಡಿ ಪ್ರತ್ಯೇಕ ಡಬ್ಬಿಗಳಲ್ಲಿ ಸಂಗ್ರಹಿಸಿ. ಸಲಾಡ್ ಅನ್ನು ಮುಂಚಿತವಾಗಿ ತಯಾರಿಸಬಹುದು. ಆದರೆ ಸಲಾಡ್ ಹಾಳಾಗಬಾರದೆಂದರೆ ನೀವು ಅದನ್ನು ತಿನ್ನುವವರೆಗೆ ಡ್ರೆಸ್ಸಿಂಗ್ ಮಾಡಬೇಡಿ.

ಪ್ಯಾಕ್ ಮಾಡಿದ ಆಹಾರ
ಫ್ರೆಶ್ ಆಗಿ ಬೇಯಿಸಿದ ಆಹಾರ ಅತ್ಯುತ್ತಮವೆಂದು ಪರಿಗಣಿಸಲಾಗಿದ್ದರೂ ತುಂಬಾ ಹಸಿವಿನಿಂದ ಬಳಲುತ್ತಿದ್ದರೆ, ತಕ್ಷಣಕ್ಕೆ ಆಹಾರ ಮಾಡಿಕೊಳ್ಳಬೇಕು ಎಂದು ಬಯಸಿದರೆ ನೀವು ಮಾರುಕಟ್ಟೆಯಿಂದ ಅಥವಾ ಆನ್‌ಲೈನ್‌ನಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ಖರೀದಿಸಬಹುದು. ಖರೀದಿಸುವ ಮೊದಲು ಲೇಬಲ್ ಅನ್ನು ಎಚ್ಚರಿಕೆಯಿಂದ ಓದಿ. ಆಹಾರವು ಕನಿಷ್ಠ ಪ್ರಮಾಣದ ಸಕ್ಕರೆ ಮತ್ತು ಸಂರಕ್ಷಕಗಳನ್ನು ಹೊಂದಿದೆ ಎಂಬುದನ್ನ ಕನ್‌ಫರ್ಮ್ ಮಾಡಿಕೊಳ್ಳಿ.

ಘಮಘಮಿಸಲಿ ಆಹಾರ
ಅದೇ ಊಟ ತಿಂದು ತಿಂದು ಬೇಸರವಾಗಿದ್ರೆ ಆರೋಗ್ಯಕರ ಗಿಡಮೂಲಿಕೆಗಳು ಮತ್ತು ಮಸಾಲೆ ಸೇರಿಸುವ ಮೂಲಕ ಆಹಾರ ಘಮ್ ಎನ್ನುವಂತೆ ನೋಡಿಕೊಳ್ಳಿ. ರೆಸಿಪಿ ಡ್ರೆಸ್ಸಿಂಗ್‌ ಮಾಡುವ ಮೂಲಕ ನಿಮ್ಮ ಊಟದಲ್ಲಿ ವೈವಿಧ್ಯತೆಯನ್ನು ಹೆಚ್ಚಿಸಿ.

ಹೈಡ್ರೇಟೆಡ್ ಆಗಿರಿ
ದಿನವಿಡೀ ಹೈಡ್ರೇಟೆಡ್ ಆಗಿರಲು ಮರೆಯಬೇಡಿ. ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ. ಆಗಾಗ ನೀರು ಕುಡಿಯಿರಿ. ನಿಮ್ಮ ನೀರಿಗೂ ಜೀವಸತ್ವಗಳು, ಖನಿಜಗಳು ಮತ್ತು ರುಚಿ ನೀಡಲು ತಾಜಾ ಹಣ್ಣುಗಳು ಅಥವಾ ನಿಂಬೆ, ಸೌತೆಕಾಯಿ ಅಥವಾ ಪುದೀನಾ ಸೇರಿಸಿ. ಈ ರೀತಿ ನೀವು ನಿಮ್ಮ ದೇಹಕ್ಕೆ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರ ತಯಾರಿಸಿ.