ಒಣಗಿದ ನಂತ್ರವೂ ಬಟ್ಟೆ ಕೆಟ್ಟ ವಾಸನೆ ಬರ್ತಿದ್ರೆ ಹೀಗ್ ಮಾಡಿ, ಐದೇ ನಿಮಿಷಕ್ಕೆ ಪರಿಹಾರ ಸಿಗುತ್ತೆ!
ಈ ಸಮಸ್ಯೆಗೆ ಪರಿಹಾರವಾಗಿ 3 ಸುಲಭ ಮನೆಮದ್ದು ಸೂಚಿಸಲಾಗಿದೆ. ಇದು ಕೇವಲ 5 ನಿಮಿಷದಲ್ಲಿ ಬಟ್ಟೆಗಳಿಂದ ಕೆಟ್ಟ ವಾಸನೆ ತೆಗೆದುಹಾಕುತ್ತದೆ. ಜೊತೆಗೆ ನಿಮ್ಮ ಸಮಯ ಮತ್ತು ಶ್ರಮ ಎರಡನ್ನೂ ಉಳಿಸುತ್ತದೆ.

ಇದಕ್ಕೆಲ್ಲಾ ಪರಿಹಾರವೇನು ಅಂತೀರಾ?.
ಮಳೆಗಾಲ ಬಂತೆಂದರೆ ಎಲ್ಲೆಲ್ಲೂ ಹಸಿರು.. ಶಾಂತಿ..ಆದರೆ ಈ ಸಮಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇವುಗಳಲ್ಲಿ ಸಾಮಾನ್ಯ ಸಮಸ್ಯೆ ಎಂದರೆ ಬಟ್ಟೆ ಲೇಟಾಗಿ ಒಣಗುವುದು ಮತ್ತು ಅವುಗಳಿಂದ ಬರುವ ವಿಚಿತ್ರ ವಾಸನೆ. ನಿರಂತರ ತೇವ ಮತ್ತು ಸೂರ್ಯನ ಬೆಳಕು ಕಡಿಮೆ ಇರುವುದರಿಂದ ಬಟ್ಟೆಗಳು ಸಂಪೂರ್ಣವಾಗಿ ಒಣಗುವುದಿಲ್ಲ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ, ಆದರೆ ಇದೇ ಕಾರಣಕ್ಕಾಗಿ ಇವುಗಳ ಮೇಲೆ ಬೂಸ್ಟ್ ಮತ್ತು ಬ್ಯಾಕ್ಟೀರಿಯಾ ಬೆಳೆಯಲು ಪ್ರಾರಂಭಿಸುತ್ತದೆ. ಹಾಗಾದ್ರೆ ಇದಕ್ಕೆಲ್ಲಾ ಪರಿಹಾರವೇನು ಅಂತೀರಾ?.
ಸಮಯ ಮತ್ತು ಶ್ರಮ ಎರಡೂ ಉಳಿತಾಯ
ಡೋಂಟ್ ವರಿ... ಬಿಲಾಸ್ಪುರದ ವಿವೇಕ್ ಮಾಥುರ್ ಎಂಬುದವವರು ಈ ಸಮಸ್ಯೆಗೆ ಪರಿಹಾರವಾಗಿ 3 ಸುಲಭ ಮತ್ತು ಅಗ್ಗದ ಮನೆಮದ್ದು ಸೂಚಿಸಿದ್ದಾರೆ. ಇದು ಕೇವಲ 5 ನಿಮಿಷದಲ್ಲಿ ಬಟ್ಟೆಗಳಿಂದ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ. ವಿಶೇಷವೆಂದರೆ ಈ ವಿಧಾನಗಳನ್ನು ವಾಷಿಂಗ್ ಮಷಿನ್‌ನಲ್ಲಿಯೂ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇದು ನಿಮ್ಮ ಸಮಯ ಮತ್ತು ಶ್ರಮ ಎರಡನ್ನೂ ಉಳಿಸುತ್ತದೆ.
ನಿಂಬೆ ರಸ
ಮೊದಲ ವಿಧಾನವೆಂದರೆ ನಿಂಬೆ ರಸವನ್ನು ಬಳಸುವುದು. ಕೈನಲ್ಲಿ ಬಟ್ಟೆಗಳನ್ನು ತೊಳೆಯುವವರು ಒಂದು ಬಕೆಟ್ ನೀರಿಗೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಬಟ್ಟೆಗಳನ್ನು ಅದರಲ್ಲಿ ತೊಳೆದು ಒಣಗಿಸಿ. ನಿಂಬೆ ನೈಸರ್ಗಿಕ ಡಿಯೋಡರೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಾಸನೆಯನ್ನು ತಕ್ಷಣವೇ ನಿವಾರಿಸುತ್ತದೆ. ಒಂದು ವೇಳೆ ನಿಂಬೆ ರಸ ಲಭ್ಯವಿಲ್ಲದಿದ್ದರೆ ನೀವು ಅಡುಗೆ ಸೋಡಾ ಸಹ ಬಳಸಬಹುದು.
ಅಡುಗೆ ಸೋಡಾ
ಎರಡನೇಯ ವಿಧಾನವೆಂದರೆ ಒಂದು ಬಕೆಟ್ ನೀರಿಗೆ ಅಡುಗೆ ಸೋಡಾ ಸೇರಿಸಿ. ಇದರಲ್ಲಿ ಬಟ್ಟೆಗಳನ್ನು ತೊಳೆದು ಒಣಗಿಸಿ. ಇದು ವಾಸನೆ ಬರದಂತೆ ನೋಡಿಕೊಳ್ಳುವುದಲ್ಲದೆ ಬಟ್ಟೆಯನ್ನ ಸಾಫ್ಟ್ ಮಾಡುತ್ತದೆ.
ಬಿಳಿ ವಿನೆಗರ್
ಇದಲ್ಲದೆ ಬಿಳಿ ವಿನೆಗರ್ ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಒಂದು ಬಕೆಟ್ ನೀರಿಗೆ ಒಂದು ಚಮಚ ವಿನೆಗರ್ ಸೇರಿಸುವುದರಿಂದ ಬಟ್ಟೆಗಳಲ್ಲಿನ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದು ಎಂಥ ವಾಸನೆಯನ್ನು ಸಹ ತಡೆಯುತ್ತದೆ.
ವಾಷಿಂಗ್ ಮಷಿನ್‌ನಲ್ಲಿ
ನೀವು ಈ ವಿಧಾನವನ್ನ ವಾಷಿಂಗ್ ಮಷಿನ್‌ನಲ್ಲಿ ಬಳಸಲು ಬಯಸಿದರೆ, ಮೇಲೆ ತಿಳಿಸಲಾದ ಮೂರು ವಿಷಯಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ. ಮಷಿನ್‌ನಲ್ಲಿ ಬಟ್ಟೆ ಒಗೆಯುವಾಗ ಕೊನೆಯ ರೌಂಡ್‌ಗೆ ಒಂದು ಟೀಚಮಚ ನಿಂಬೆ ರಸ ಅಥವಾ ಒಂದು ಕಪ್ ಅಡುಗೆ ಸೋಡಾ ಅಥವಾ ಅರ್ಧ ಕಪ್ ಬಿಳಿ ವಿನೆಗರ್ ಯಾವುದಾದರೂ ಒಂದನ್ನ ಸೇರಿಸಿ. ಹವಾಮಾನ ಎಷ್ಟೇ ಆರ್ದ್ರವಾಗಿದ್ದರೂ ಈ ಟಿಪ್ಸ್ ಬಟ್ಟೆಗಳನ್ನು ತಾಜಾ ಮತ್ತು ಪರಿಮಳಯುಕ್ತವಾಗಿಡುತ್ತವೆ.