ತಿಗಣೆ ಕಾಟದಿಂದ ಸಾಕಾಗಿ ಹೋಗಿದ್ರೆ ತಕ್ಷಣ ಈ 5 ಮನೆಮದ್ದನ್ನ ಟ್ರೈ ಮಾಡಿ, ನಂತ್ರ ಮ್ಯಾಜಿಕ್ ನೋಡಿ
Bed Bug Removal Tips: ಇವು ತುರಿಕೆ ಮಾತ್ರವಲ್ಲ, ಸೋಂಕೂ ಉಂಟು ಮಾಡುತ್ತದೆ. ರಾತ್ರಿ ನಿದ್ದೆಯನ್ನೇ ಕಸಿಯುವುದಲ್ಲದೆ ಆರೋಗ್ಯವನ್ನೂ ಹಾಳು ಮಾಡುತ್ತದೆ. ನೀವು ಈ ತಿಗಣೆ ಕಾಟಕ್ಕೆ ಬೇಸತ್ತಿದ್ದರೆ ಇಲ್ಲಿ ನೀಡಲಾದ ಕೆಲವು ಮನೆಮದ್ದುಗಳು ನಿಮಗೆ ಸಹಾಯ ಮಾಡಬಹುದು.

ತುರಿಕೆ ಮಾತ್ರವಲ್ಲ, ಸೋಂಕೂ ಉಂಟು ಮಾಡುತ್ತೆ
ತಿಗಣೆಯು ಚಿಕ್ಕದಾಗಿ ಕಾಣುವ ಕೆಂಪು ಅಥವಾ ಕಂದು ಬಣ್ಣದ ಚಪ್ಪಟೆ ಕೀಟವಾಗಿದ್ದು, ಇವು ಹೆಚ್ಚಾಗಿ ಹಾಸಿಗೆಯ ಮೇಲೆ ಬೆಳೆಯುತ್ತವೆ. ಒಂದು ಸಾರಿ ಈ ಕೀಟಗಳು ಎಲ್ಲಿಂದಲೋ ಹಾಸಿಗೆಯ ಮೇಲೆ ಬಂದ ನಂತರ ಬಿಟ್ಟು ಹೋಗೋ ಮಾತೇ ಇಲ್ಲ. ಮೊದಲೇ ಇವು ಹಾಸಿಗೆಯ ಮೇಲೆ ಇರುತ್ತವಾ ಅಂದ್ರೆ ಖಂಡಿತ ಇಲ್ಲ. ನೀವು ಹೋಟೆಲ್‌ನಿಂದ, ಸ್ನೇಹಿತರ ಮನೆಯಿಂದ ಮನೆಗೆ ಹಿಂದಿರುಗಿದರೆ ಅಥವಾ ಹೊಸ ಬಟ್ಟೆ ಅಥವಾ ಪೀಠೋಪಕರಣಗಳನ್ನು ಖರೀದಿಸಿದ್ದರೆ ತಿಗಣೆಗಳು ಈ ಮೂಲಕವೂ ಮನೆಗೆ ಬರಬಹುದು. ತಿಗಣೆಯು ಸೊಳ್ಳೆಯಂತೆಯೇ. ನಮಗೆ ಕಚ್ಚುವುದಲ್ಲದೆ, ರಕ್ತವನ್ನೂ ಹೀರುತ್ತವೆ. ಇದು ತುರಿಕೆ ಮಾತ್ರವಲ್ಲ, ಸೋಂಕೂ ಉಂಟು ಮಾಡುತ್ತದೆ. ರಾತ್ರಿ ನಿದ್ದೆಯನ್ನೇ ಕಸಿಯುವುದಲ್ಲದೆ ಆರೋಗ್ಯವನ್ನೂ ಹಾಳು ಮಾಡುತ್ತದೆ. ನೀವು ಈ ತಿಗಣೆ ಕಾಟಕ್ಕೆ ಬೇಸತ್ತಿದ್ದರೆ ಇಲ್ಲಿ ನೀಡಲಾದ ಕೆಲವು ಮನೆಮದ್ದುಗಳು ನಿಮಗೆ ಸಹಾಯ ಮಾಡಬಹುದು.
ಬೇವಿನ ಎಲೆಗಳು
ಹಾಸಿಗೆಯ ಮೇಲೆ ಬೇವಿನ ಎಲೆಗಳನ್ನು ಹರಡುವುದರಿಂದ ತಿಗಣೆ ತೊಡೆದುಹಾಕಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿವೆ. ಬೇಕಾದರೆ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಈ ನೀರನ್ನು ಹಾಸಿಗೆಯ ಮೇಲೆಯೂ ಸಿಂಪಡಿಸಬಹುದು. ಇದು ಹಾಸಿಗೆಯಿಂದ ಖಂಡಿತವಾಗಿಯೂ ತಿಗಣೆಗಳನ್ನು ಓಡಿಸುತ್ತದೆ.
ಅಡುಗೆ ಸೋಡಾ
ತಿಗಣೆಗಳು ತೇವಾಂಶವಿರುವ ಜಾಗದಲ್ಲಿ ಹೆಚ್ಚು ಅಭಿವೃದ್ಧಿಯಾಗುತ್ತವೆ ಅಥವಾ ಬೆಳೆಯುತ್ತವೆ. ಆದರೆ ಹಾಸಿಗೆ ಅಂಚಿನ ಮೇಲೆ ಅಡುಗೆ ಸೋಡಾವನ್ನು ಸಿಂಪಡಿಸುವುದರಿಂದ ಸುಲಭವಾಗಿ ತಿಗಣೆಯನ್ನು ತೆಗೆದುಹಾಕಬಹುದು.
ಪುದೀನಾ ಎಲೆ
ಬೇವಿನ ಎಲೆಯಂತೆಯೇ ಪುದೀನಾ ಎಲೆಯನ್ನೂ ಬಳಸಿ ತಿಗಣೆಯನ್ನ ಓಡಿಸಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ...ಪುದೀನಾ ಎಲೆಗಳನ್ನು ಒಡೆದು ಹಾಸಿಗೆಯ ಮೇಲೆ ಹರಡಿ. ಈ ಎಲೆಗಳನ್ನು ಕಪಾಟಿನೊಳಗೆಯೂ ಇಡಬಹುದು.
ಲವಂಗ ಎಣ್ಣೆ
ಹಾಸಿಗೆಯ ಮೇಲೆ ಕೆಲವು ಹನಿ ಲವಂಗ ಎಣ್ಣೆಯನ್ನು ಸಹ ಸಿಂಪಡಿಸಬಹುದು. ದಿಂಬುಗಳ ಮೇಲೂ ಸಿಂಪಡಿಸಬಹುದು. ಲವಂಗವು ತಿಗಣೆಗಳನ್ನು ಓಡಿಸುತ್ತದೆ. ಹಾಗೆಯೇ ಅವು ಮತ್ತೆಂದಿಗೂ ಬರದಂತೆ ನೋಡಿಕೊಳ್ಳುತ್ತದೆ.
ಬಿಸಿ ನೀರಿನಿಂದ ತೊಳೆಯುವುದು
ಹಾಸಿಗೆ ಮತ್ತು ದಿಂಬುಗಳನ್ನು ಬಿಸಿ ನೀರಿನಿಂದ ತೊಳೆಯುವ ಮೂಲಕವೂ ತಿಗಣೆಯನ್ನು ಓಡಿಸಬಹುದು. ಬಿಸಿ ನೀರಿನಿಂದ ತೊಳೆದಾಗ ತಿಗಣೆಗಳು ಸಾಯುತ್ತವೆ. ಒಂದು ವೇಳೆ ನೀವು ಬಿಸಿ ನೀರಿನಿಂದ ತೊಳೆಯಲು ಸಾಧ್ಯವಿಲ್ಲದಿದ್ದರೆ, ಅದರ ಮೇಲೆ ಬಿಸಿ ನೀರನ್ನು ಸಿಂಪಡಿಸಬಹುದು.