- Home
- Entertainment
- TV Talk
- ಶ್ರಾವಣಿ ಸುಬ್ರಹ್ಮಣ್ಯ ಮಧ್ಯೆ ರೊಮ್ಯಾನ್ಸ್ ಶುರುವಾಯ್ತು … ವೀಕ್ಷಕರ ಎದೆಯಲ್ಲಿ ಕಚಗುಳಿ ಇಟ್ಟಂಗಾಯ್ತು
ಶ್ರಾವಣಿ ಸುಬ್ರಹ್ಮಣ್ಯ ಮಧ್ಯೆ ರೊಮ್ಯಾನ್ಸ್ ಶುರುವಾಯ್ತು … ವೀಕ್ಷಕರ ಎದೆಯಲ್ಲಿ ಕಚಗುಳಿ ಇಟ್ಟಂಗಾಯ್ತು
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಕ್ಯೂಟ್ ಜೋಡಿಯ ಮದುವೆ ಈಗಾಗಲೇ ನಡೆದಿದೆ. ಈ ಜೋಡಿಗಳ ಮಧ್ಯೆ ಶುರುವಾಗಿದೆ ಮುದ್ದಾದ ರೊಮ್ಯಾನ್ಸ್. ಇಬ್ಬರ ಮುದ್ದಾಟ ನೋಡಿ, ಸೀರಿಯಲ್ ರಸಿಕರೇ ನಾಚಿ ನೀರಾಗಿದ್ದಾರೆ. ಇನ್ನೇನು ಸುಬ್ಬು ಪ್ರೀತಿ ಹೇಳಿಕೊಳ್ಳೋದು ಮಾತ್ರ ಬಾಕಿ.

ಶ್ರಾವಣಿ ಸುಬ್ರಹ್ಮಣ್ಯ
ಝೀ ಕನ್ನಡದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಎಲ್ಲಾ ವಿಘ್ನಗಳು ನಿವಾರಣೆಯಾಗಿ ಇದೀಗ ಕೊನೆಗೆ ಎರಡೂ ಮನೆಯವರ ಸಮ್ಮುಖದಲ್ಲಿ ಶ್ರಾವಣಿ-ಸುಬ್ಬು ಮದುವೆ ಸುಸೂತ್ರವಾಗಿ ನೆರವೇರಿದೆ. ಸುಬ್ಬುನ ಇಷ್ಟಪಡುತ್ತಿರುವ ಶ್ರಾವಣಿಗೆ ಆತ ತನ್ನನ್ನ ಇಷ್ಟ ಪಡುತ್ತಿದ್ದಾನೆ ಇಲ್ಲವೇ? ಅನ್ನೋದು ಮಾತ್ರ ಗೊತ್ತಾಗಿಲ್ಲ.
ಸುಬ್ಬು ಮನೆಗೆ ಕಾಲಿಟ್ಟ ಶ್ರಾವಣಿ
ಶ್ರಾವಣಿ- ಸುಬ್ಬು ಮದುವೆಯಾಗಿ, ಸುಬ್ಬು ಮನೆಗೆ ಸೇರೊದ್ದು ಬಲಗಾಲಿಟ್ಟು ಶ್ರಾವಣಿ ಒಳಗೆ ಬಂದಾಗಿದೆ. ಈ ಜೋಡಿಗೆ ಮೊದಲ ರಾತ್ರಿಯ ಎಲ್ಲಾ ತಯಾರಿಯನ್ನು ಮನೆ ಮಂದಿ ಮಾಡಿದ್ದಾರೆ. ಇಬ್ಬರನ್ನೇ ಮನೆಯ ಒಳಗೆ ಬಿಟ್ಟು, ಬಾಗಿಲು ಹಾಕಿ, ತಾವೆಲ್ಲ ಮನೆಯ ಹೊರಗಡೆ ಜಾಗರಣೆ ಮಾಡುತ್ತಿದ್ದಾರೆ.
ಜೋಡಿ ಹಕ್ಕಿಗಳ ಮೊದಲ ರಾತ್ರಿ
ಇತ್ತ ರೂಮಿಗೆ ಹೋದ ಜೋಡಿಗಳಳಿಗೆ ಎನೋ ತವಕ, ಸುಬ್ಬುಗೆ ತನ್ನ ಮನಸ್ಸಿಲಿರುವ ಪ್ರೀತಿಯನ್ನು ಹೇಳಿಕೊಂಡು ನಿರಾಳವಾಗುಅ ತವಕ, ಆದರೆ ಹೇಳುವ ಧೈರ್ಯ ಇಲ್ಲ. ಹೇಗಪ್ಪಾ ಹೇಳೋದು ಎನ್ನುವ ಭಯ. ಇನ್ನೊಂದೆಡೆ ಶ್ರಾವಣಿಗೆ, ಸುಬ್ಬು ತನ್ನನ್ನು ಪ್ರೀತಿಸುತ್ತಾನೋ ಇಲ್ಲವೋ ಅನ್ನೋದನ್ನು ತಿಳಿದುಕೊಳ್ಳುವ ತವಕ, ಆಕೆಗೂ ಕೇಳೋದಕ್ಕೆ ಧೈರ್ಯ ಇಲ್ಲ.
ಶುರುವಾಗಿದೆ ಶ್ರಾವಣಿ-ಸುಬ್ಬು ರೊಮ್ಯಾನ್ಸ್
ಇದೆಲ್ಲದರ ನಡುವೆ ಶ್ರಾವಣಿಯನ್ನು ಮದುವೆಯಾದ ಮೇಲೂ ಮೇಡಂ, ಮೇಡಂ ಎಂದು ಕರೆಯುವ ಗಂಡ ಸುಬ್ಬು ಮೇಲೆ ಮೇಂಡಗೆ ಹುಸಿ ಮುನಿಸು, ಅದಕ್ಕಾಗಿಯೇ, ಸುಬ್ಬುನನ್ನು ಬರಸೆಳೆದು, ತನ್ನ ಹೆಸರು ಕರೆಯುವಂತೆ ಸೂಚಿಸಿದ್ದಾಳೆ ಶ್ರಾವಣಿ. ಇಲ್ಲಾಂದ್ರೆ ಬಿಡೋದೆ ಇಲ್ಲ ಎಂದಿದ್ದಾರೆ, ಆಕೆಯಿಂದ ದೂರ ಸರೆಯುವ ಮಾತೆ ಇಲ್ಲ ಎನ್ನುವ ಸುಬ್ಬು ಕೊನೆಗೂ ಮೇಡಂ ಅನ್ನೋದನ್ನು ಬಿಟ್ಟು ಶ್ರಾವಣಿ ಎಂದು ಕರೆದದ್ದು ಆಗಿದೆ.
ಸೀರಿಯಲ್ ನಲ್ಲಿ ಮುಂದೇನು ಟ್ವಿಸ್ಟ್?
ಒಟ್ಟಲ್ಲಿ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುದ್ದಾದ ಜೋಡಿಗಳ ಮುದ್ದಾಟ ಶುರುವಾಗಿದ್ದು, ಇಬ್ಬರ ರೊಮ್ಯಾನ್ಸ್ ನೋಡಿ ವೀಕ್ಷಕರೇ ನಾಚಿಕೊಂಡಿದ್ದಾರೆ. ವೀಕ್ಷಕರ ಎದೆ ಬಡಿತ ಹೆಚ್ಚಾಗಿದೆ. ಇನ್ನಾದರೂ ಸುಬ್ಬು ತನ್ನ ಪ್ರೀತಿಯನ್ನು ಶ್ರಾವಣಿಯ ಮುಂದೆ ಹೇಳುತ್ತಾನೋ? ಇವರಿಬ್ಬರು ಒಂದಾಗುತ್ತಾರೋ? ಅಥವಾ ಅಲ್ಲೂ ಟ್ವಿಸ್ಟ್ ಇಡಲಾಗಿದೆಯೋ ಕಾದು ನೋಡಬೇಕು.
ಯಾರೆಲ್ಲಾ ನಟಿಸುತ್ತಿದ್ದಾರೆ
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ಈ ಸೀರಿಯಲ್ ನಲ್ಲಿ ಸುಬ್ಬುವಾಗಿ ಅಮೋಘ ಆದಿತ್ಯಾ, ಶ್ರಾವಣಿಯಾಗಿ ಆಸಿಯಾ ಫಿರ್ದೋಸೆ, ಅಲ್ಲದೇ ಬಾಲರಾಜ್, ಮೋಹನ್, ಸ್ನೇಹಾ, ಅಪೂರ್ವಶ್ರೀ ಸೇರಿ ದೊಡ್ಡ ತಾರಾ ಬಳಗವೇ ಇದೆ.