'ಅಶ್ಲೀಲ ಫಿಲ್ಮ್ ನೋಡಿದ್ದೀರಾ?' ಪ್ರಾಮಾಣಿಕ ಉತ್ತರ ನೀಡಿದ ಪ್ರಖ್ಯಾತ ನಟಿ!
Vidya Balan Gives an Honest Answer on Watching Obscene Films ಬಾಲಿವುಡ್ ನಟಿ ವಿದ್ಯಾ ಬಾಲನ್, ಯಾವುದೇ ಗಾಡ್‌ಫಾದರ್ ಇಲ್ಲದೆ ಯಶಸ್ಸು ಕಂಡವರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಅಶ್ಲೀಲ ಚಿತ್ರಗಳನ್ನು ನೋಡುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಬಾಲಿವುಡ್‌ಗೆ ಗಾಡ್‌ಫಾದರ್ ಬೇಕು ಅಂತ ಹೇಳ್ತಾರೆ. ಆದರೆ ವಿದ್ಯಾ ಬಾಲನ್ ಅಂತಹ ಯಾವುದೇ ಗಾಡ್‌ಫಾದರ್ ಇಲ್ಲದೆ ಹೆಸರು ಮಾಡಿದ ನಟಿ. ಇಂದು ವಿದ್ಯಾ ಬಾಲನ್ ತನ್ನದೇ ಆದ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ.
ವಿದ್ಯಾ ಬಾಲನ್ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪರಿಣೀತಾ, ದಿ ಡರ್ಟಿ ಪಿಕ್ಚರ್ ವಿದ್ಯಾ ಅವರ ಅಭಿನಯಕ್ಕೆ ಸಾಕ್ಷಿಯಾದ ಸಿನಿಮಾಗಳು. ಎರಡೂ ಚಿತ್ರಗಳಲ್ಲಿ ಅವರು ಸಂಪೂರ್ಣವಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿದ್ಯಾ ಬಾಲನ್ ಅವರ ಯಶಸ್ಸಿನ ಪ್ರಯಾಣವು ಬಹಳ ಕಠಿಣವಾಗಿತ್ತು. ವಿದ್ಯಾ ತಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಕ್ಕೂ ಹೆಸರುವಾಸಿಯಾಗಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿದ್ಯಾ ಬಾಲನ್ ಅವರಿಗೆ ಅಶ್ಲೀಲ ಚಿತ್ರಗಳು ಮತ್ತು ಲೈಂಗಿಕತೆಯ ಬಗ್ಗೆ ಪ್ರಶ್ನೆ ಕೇಳಲಾಯಿತು. ಆ ಸಮಯದಲ್ಲಿ, ಅವರು ಎಂದಿನಂತೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು. ವಿದ್ಯಾ ಬಾಲನ್ ಅವರು ಸಮಿದೀಶ್ ಭಾಟಿಯಾ ಅವರ 'ಅನ್‌ಫಿಲ್ಟರ್ಡ್ ಬೈ ಸಮಿದೀಶ್' ಚಾನೆಲ್‌ನಲ್ಲಿ ಅಶ್ಲೀಲ ಚಿತ್ರಗಳ ಕುರಿತಾದ ಪ್ರಶ್ನೆಗೆ ಮುಕ್ತ ಆಲೋಚನೆಗಳನ್ನು ಹಂಚಿಕೊಂಡರು.
"ನೀವು ಅಶ್ಲೀಲ ಸಿನಿಮಾ ನೋಡುತ್ತೀರಾ?" ಎಂದು ಸಮದೀಶ್ ವಿದ್ಯಾರನ್ನು ಕೇಳಿದರು. ಇದಕ್ಕೆ ಆಕೆ "ಇಲ್ಲ" ಎಂದು ನೇರವಾಗಿ ಉತ್ತರಿಸಿದ್ದಲ್ಲದೆ, ಅದಕ್ಕೆ ಕಾರಣವನ್ನೂ ಹೇಳಿದ್ದಾರೆ. "ನಿಜ ಹೇಳಬೇಕೆಂದರೆ, ನನಗೆ ಅಂಥ ಸಿನಿಮಾಗಳು ಎಂದಿಗೂ ಇಷ್ಟವಾಗಲಿಲ್ಲ. ಏಕೆಂದರೆ ಇಬ್ಬರು ವ್ಯಕ್ತಿಗಳು ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡಲು ನನಗೆ ಇಷ್ಟವಿಲ್ಲ" ಎಂದು ವಿದ್ಯಾ ಹೇಳಿದ್ದಾರೆ.
ಒಂದು ಚಿತ್ರದಲ್ಲಿ ಲೈಂಗಿಕ ದೃಶ್ಯವಿದ್ದು ಅದನ್ನು ಚೆನ್ನಾಗಿ ಚಿತ್ರೀಕರಿಸಿದ್ದರೆ. ಅದರ ಹಿಂದೆ ಒಳ್ಳೆಯ ಕಥೆ ಇದ್ದರೆ, ಅದನ್ನು ನೋಡಲು ನನಗೆ ಯಾವುದೇ ತೊಂದರೆ ಇಲ್ಲ. ನಾನು ಎಂದಿಗೂ ಅಶ್ಲೀಲ ಚಿತ್ರಗಳನ್ನು ನೋಡಿಲ್ಲ. ಮಹಿಳೆಯರನ್ನು ಕೇವಲ ದೇಹವಾಗಿ ತೋರಿಸಲಾಗಿದೆ ಎಂದು ನಾನು ಭಾವಿಸಿದ ದೃಶ್ಯವನ್ನು ನಾನು ಎಂದಿಗೂ ನೋಡಿಲ್ಲ. ಅಶ್ಲೀಲ ಸೀನ್‌ಗಳ ಹಿಂದೆ ಒಂದು ಕಥೆ ಇದ್ದರೆ, ಅಂಥವುಗಳನ್ನು ಯಾವುದೇ ಸಮಸ್ಯೆ ಇಲ್ಲದೆ ನೋಡುತ್ತೇನೆ ಎಂದಿದ್ದಾರೆ.
"ಅಶ್ಲೀಲ ಚಿತ್ರಗಳಲ್ಲಿ ಕಥೆ ಇರೋದಿಲ್ಲ. ಬರೀ ಲೈಂಗಿಕತೆ ಮಾತ್ರ ಇರುತ್ತದೆ. ನಾನು ಕೆಲವೊಂದು ಸೀನ್‌ಗಳನ್ನು ನೋಡಿದ್ದೇನೆ. ಅಂಥ ಸಿನಿಮಾ ನೋಡಿ ನನಗೆ ಕೋಪ ಬರುವುದಿಲ್ಲ. ಅದಕ್ಕಾಗಿಯೇ ನನಗೆ ಅಂಥ ಸಿನಿಮಾಗಳನ್ನು ನೋಡುವುದು ಇಷ್ಟವಿಲ್ಲ" ಎಂದು ವಿದ್ಯಾ ಬಾಲನ್ ಉತ್ತರಿಸಿದ್ದಾರೆ.
ಅಶ್ಲೀಲ ಸಿನಿಮಾಗಳು ನೋಡಿದ ಬಳಿಕ ಅಂಥದ್ದರಲ್ಲಿ ಆಸಕ್ತಿ ಹುಟ್ಟಬೇಕು. ಆದರೆ, ನನಗೆ ಹಾಗಾಗುವುದಿಲ್ಲ. ಅದಕ್ಕಾಗಿಯೇ ನಾನು ಆ ರೀತಿಯ ಸಿನಿಮಾಗಳನ್ನು ನೋಡೋದಿಲ್ಲ ಎಂದು ಹೇಳಿದ್ದಾರೆ.
ಅಶ್ಲೀಲ ಸಿನಿಮಾ ನೋಡೋದಿಲ್ಲ ಅಂದ ಮಾತ್ರಕ್ಕೆ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲ ಅಂತಲ್ಲ. ನಾನು ಲೈಂಗಿಕತೆಯನ್ನು ಎಂಜಾಯ್ ಮಾಡುತ್ತೇನೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.