- Home
- Entertainment
- TV Talk
- ಬಿಗ್ ಬಾಸ್ ಮನೆಯಲ್ಲಿ ಅಬ್ಬರಿಸಿ ಟೀ ಎಲೆ ಕೊಯ್ಲುಗೆ ಹೋದ ಸಂಗೀತಾ ಶೃಂಗೇರಿ: ಮದುವೆ ಬಗ್ಗೆ ವಿಚಾರಿಸಿದ ಫ್ಯಾನ್ಸ್!
ಬಿಗ್ ಬಾಸ್ ಮನೆಯಲ್ಲಿ ಅಬ್ಬರಿಸಿ ಟೀ ಎಲೆ ಕೊಯ್ಲುಗೆ ಹೋದ ಸಂಗೀತಾ ಶೃಂಗೇರಿ: ಮದುವೆ ಬಗ್ಗೆ ವಿಚಾರಿಸಿದ ಫ್ಯಾನ್ಸ್!
ಬಿಗ್ ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಟೀ ಎಲೆ ಕೊಯ್ಲಿಗೆ ತೆರಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದರೂ, ಬಿಡುವು ಪಡೆದು ಆಗಾಗ ಪ್ರವಾಸ ಮಾಡುತ್ತಾ ಫೋಟೋ ಹಂಚಿಕೊಳ್ಳುತ್ತಾರೆ. ಇದೀಗ ಮದುವೆ ಯಾವಾಗ ಎಂದು ಫ್ಯಾನ್ಸ್ ಕೇಳಿದ್ದಾರೆ.

ಭಾರತದ ಬಿಗ್ ಬಾಸ್ ಕಾರ್ಯಕ್ರಮ ಅತಿದೊಡ್ಡ ರಿಯಾಲಿಟಿ ಶೋ ಆಗಿದೆ. ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 10ರಲ್ಲಿ ಆನೆ ಖ್ಯಾತಿಯ ವಿನಯ್ ಗೌಡ ಅವರಿಗೆ ಕೈ ಬಳೆ ಎತ್ತಿ ತೋರಿಸಿ ಇದನ್ನು ಮಹಿಳೆಯರ ಶಕ್ತಿಯ ಪ್ರತೀಕ ಎಂದು ಹೇಳಿದ್ದ ಸಂಗೀತಾ ಶೃಂಗೇರಿ ಇದೀಗ ಟೀ ಎಲೆ ಕೊಯ್ಲಿಗೆ ಹೋಗಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಟೀ ಎಲೆಗಳನ್ನು ಕೊಯ್ಲು ಮಾಡುವ ಕೆಲಸದ ಮಹಿಳೆಯಂತೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಅಭಿಮಾಣಿಗಳು ಲೈಕ್ ಮಾಡಿ ಪ್ರೋತ್ಸಾಹಿದಿದ್ದಾರೆ.
ಇನ್ನು ತಾವು ಹಾಕೊಂಡಿರುವ ಪೋಸ್ಟ್‌ಗೆ ಸರಳ ಕ್ಷಣಗಳು ಅತ್ಯಂತ ದೊಡ್ಡ ಸಂತೋಷವನ್ನು ತಂದಾಗ (When the simplest moments bring the greatest joy) ಎಂಬ ಟ್ಯಾಗ್‌ಲೈನ್ ಬರೆದುಕೊಂಡಿದ್ದಾರೆ. ಮೋಹನ್ ರಾಜು ಅವರು ಈ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ.
ಅವರ ಪೋಸ್ಟ್‌ಗೆ ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 'ಮುದ್ದು ಮುಖದ ಚೆಲುವೆ, ಸೀತೆ ಅಷ್ಟೇ ಪವಿತ್ರ ಹಾಗೆ ಪಾರ್ವತಿ ದೇವಿಯ ಲಕ್ಷಣ ಇದೆ. ಒಳ್ಳೇ ಹುಡುಗ ಸಿಗಲಿ ಬೇಗ ಮದುವೆ ಆಗಿ' ಎಂದು ಹಾರೈಸಿ ಕಾಮೆಂಟ್ ಮಾಡಿದ್ದಾರೆ.