ಹೀರೋ ಅಲ್ಲದೇ ಇದ್ರೂ ಜನಮನ ಗೆದ್ದ ಪಾತ್ರಗಳಿವು… ನಿಮ್ಮ ಫೇವರಿಟ್ ನಟ ಯಾರು?
ಸೀರಿಯಲ್ ಗಳಲ್ಲಿ ನಾಯಕರು ಮಾತ್ರ ಇಷ್ಟವಾಗುತ್ತಿದ್ದ ಕಾಲ ಹೋಗಿದೆ, ಇದೀಗ ಸೀರಿಯಲ್ ನ ಇತರ ನಾಯಕರನ್ನು ಸಹ ಜನ ಇಷ್ಟಪಡುತ್ತಿದ್ದಾರೆ. ಅಂತಹ ನಟರ ಲಿಸ್ಟ್ ಇಲ್ಲಿದೆ.

ಕನ್ನಡ ಕಿರುತೆರೆಯಲ್ಲಿನ ನಾಯಕರನ್ನು ಜನ ಖಂಡಿತಾ ಇಷ್ಟಪಡುತ್ತಾರೆ. ಆದರೆ ಸೈಡ್ ಆಕ್ಟರ್ ಗಳು ಇಷ್ಟವಾಗುತ್ತಿದ್ದ ದಿನಗಳು ಕಳೆದು ಹೋಯಿತು. ಈಗಂತೂ ಜನರಿಗೆ ನಾಯಕನಲ್ಲದೇ ಇತರ ನಟರನ್ನೂ ಜನ ಇಷ್ಟಪಡುತ್ತಿದ್ದರೆ. ಅವರಲ್ಲಿ ಮುಖ್ಯವಾಗಿ ಈ ಆರು ನಟರು ಫೇವರಿಟ್ ಆಗಿದ್ದಾರೆ.
ಜಿಮ್ ಸೀನಾ (ಅಣ್ಣಯ್ಯ)
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಪಾತ್ರ ಎಷ್ಟು ಮುಖ್ಯವಾಗಿದೆಯೋ, ಜನರಿಗೆ ಎಷ್ಟು ಇಷ್ಟವಾಗಿದೆಯೋ ಅಷ್ಟೇ ಇಷ್ಟಪಡುವ ಮತ್ತೊಂದು ಪಾತ್ರ ಅಂದರೆ ಜಿಮ್ ಸೀನಾ ಪಾತ್ರ. ಜಿಮ್ ಸೀನಾನ ನಟನೆ, ಗುಂಡಮ್ಮನ ಜೊತೆಗಿನ ಕಿತ್ತಾಟ, ಒಟ್ಟಲ್ಲಿ ಆ ಪಾತ್ರವನ್ನೇ ಜನ ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದಾರೆ.
ಸಿದ್ಧೇಗೌಡ (ಲಕ್ಷ್ಮೀ ನಿವಾಸ)
ಲಕ್ಸ್ಮೀ ನಿವಾಸದಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಸಹ ಮುಖ್ಯ ಪಾತ್ರಗಳೇ. ಅದರಲ್ಲೂ ಸಿದ್ದೇಗೌಡ್ರು ಅಂದ್ರೆ ಜನಕ್ಕೆ ಮೆಚ್ಚಿಗೆ. ಅವರ ಸ್ಟೈಲ್. ಮೇಡಂ ಜೊತೆಗಿನ ಭಾಂದವ್ಯ, ಮುದ್ದಾದ ಲವ್ ಸ್ಟೋರಿಯನ್ನು ಜನ ಇಷ್ಟಪಟ್ಟಿದ್ದಾರೆ.
ನರಸಿಂಹ (ಬ್ರಹ್ಮಗಂಟು)
ಬ್ರಹ್ಮಗಂಟು ಧಾರಾವಾಹಿಯಲ್ಲಿನ ನರಸಿಂಹನ ಆ ರಫ್ ಆಂಡ್ ಟಫ್ ಪಾತ್ರ ಈಗಾಗಲೇ ಜನಮನ ಗೆದ್ದಿದೆ. ತಂಗಿಯ ಮೇಲಿನ ಅಪಾರವಾದ ಪ್ರೀತಿ. ಅಪ್ಪನಿಂದ ಕೆಟ್ಟವನು ಅನಿಸಿಕೊಂಡರೂ ಸದಾ ಒಳ್ಳೆಯದನ್ನೇ ಮಾಡುವ ನರಸಿಂಗ, ಸಂಜನಾಳಿಗೆ ಸವಾಲು ಕೊಡುವ ನರಸಿಂಹನ ಪಾತ್ರ ಜನರಿಗೆ ಇಷ್ಟವಾಗಿದೆ.
ಪಾರ್ಥ (ಅಮೃತಧಾರೆ)
ಅಮೃತಧಾರೆಯಲ್ಲಿ ಪ್ರತಿಯೊಂದು ಪಾತ್ರಗಳು ಸಹ ಮನೋಜ್ಞ ಅಭಿನಯದ ಮೂಲಕ ಮಿಂಚುತ್ತಿರುತ್ತಾರೆ. ಅದರಲ್ಲೂ ಚಾಕಲೇಟ್ ಬಾಯ್ ಪಾರ್ಥನ ಪಾತ್ರ ಇಷ್ಟವಾಗುತ್ತಿದೆ. ಆರಂಭದಲ್ಲಿ ಪಾರ್ಥ ಮತ್ತು ಅಪ್ಪಿಯ ಲವ್ ಸ್ಟೋರಿ ಜನರಿಗೆ ಇಷ್ಟವಾಗಿತ್ತು, ಇದೀಗ ಅವರ ಮೆಚ್ಯೂರ್ ಪಾತ್ರ ಜನಕ್ಕೆ ಇಷ್ಟವಾಗುತ್ತಿದೆ.
ಭಜರಂಗಿ (ದೃಷ್ಟಿಬೊಟ್ಟು)
ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ದತ್ತ ಭಾಯ್ ಬಲಗೈ ಬಂಟನಾಗಿರುವ ಭಜರಂಗಿಯನ್ನು ಸಹ ಜನ ಇಷ್ಟಪಟ್ಟಿದ್ದಾರೆ. ನ್ಯಾಯಕ್ಕಾಗಿ ಸದಾ ಧನಿ ಎತ್ತುವ, ದತ್ತಾ ತಪ್ಪು ಎಂದಾಗಲು ಸರಿ ಇದ್ದವರಿಗೆ ಬೆಂಬಲವಾಗಿ ನಿಲ್ಲುವ ಭಜರಂಗಿ ಜನರಿಗಿಷ್ಟ. ನಿಮಗೆ ಯಾವಾ ನಟ ಇಷ್ಟ?
ಬಾಲ (ನಿನಗಾಗಿ)
ನಿನಗಾಗಿ ಧಾರಾವಾಹಿಯಲ್ಲಿ ಜೀವನ ಗೆಳೆಯನಾಗಿ ಗಮನ ಸೆಳೆದ ಬಾಲ ಕೂಡ ಜನರಿಗೆ ಇಷ್ಟ. ಪ್ರತಿ ಹಂತದಲ್ಲೂ ಕಾಮಿಡಿ ಮಾಡುತ್ತಾ, ಜೀವನಾ ಒಳ್ಳೆಯ, ಕೆಟ್ಟ ಕ್ಷಣದಲ್ಲಿ ಜೊತೆಯಾಗಿ ನಡೆಯುವ ಜೀವನಿಗಾಗಿ ತನ್ನ ತಂದೆಯನ್ನೇ ಎದುರು ಹಾಕುವ ಬಾಲ ಪಾತ್ರ ಯಾರಿಗೆ ತಾನೆ ಇಷ್ಟವಾಗೋದಿಲ್ಲ ಅಲ್ವಾ?