MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಜೀಪವರ್ ನ ‘ಶುಭಸ್ಯ ಶೀಘ್ರಂ’… ಧಾರಾವಾಹಿ ಕಥೆ ಸೇಮ್ ಟು ಸೇಮ್ ಗಟ್ಟಿಮೇಳ ಸ್ಟೋರಿ… ಯಾಕ್ ಹಿಂಗ್ ಮಾಡಿದ್ರು

ಜೀಪವರ್ ನ ‘ಶುಭಸ್ಯ ಶೀಘ್ರಂ’… ಧಾರಾವಾಹಿ ಕಥೆ ಸೇಮ್ ಟು ಸೇಮ್ ಗಟ್ಟಿಮೇಳ ಸ್ಟೋರಿ… ಯಾಕ್ ಹಿಂಗ್ ಮಾಡಿದ್ರು

ಜೀ ಪವರ್ ನಲ್ಲಿ ಈಗಾಗಲೇ ಪ್ರಸಾರವಾಗುತ್ತಿರುವ ಶುಭಸ್ಯ ಶೀಘ್ರಂ ಧಾರಾವಾಹಿ ಸಂಪೂರ್ಣವಾಗಿ ಗಟ್ಟಿಮೇಳವನ್ನೇ ರಿಮೇಕ್ ಮಾಡಿದಂತಿದೆ. ಈಗಾಗಲೇ ಸೂಪರ್ ಹಿಟ್ ಆಗಿರುವ ಒಂದು ಧಾರಾವಾಹಿಯಲ್ಲಿ, ಕಿಂಚಿತ್ತಷ್ಟೇ ಬದಲಾವಣೆ ಮಾಡಿ ಮತ್ತೆ ಪ್ರಸಾರ ಮಾಡುವ ಅಗತ್ಯ ಏನಿತ್ತು ಎಂದು ಕೇಳುತ್ತಿದ್ದಾರೆ ಜನ.

2 Min read
Author : Pavna Das
Published : Sep 17 2025, 05:08 PM IST
Share this Photo Gallery
  • FB
  • TW
  • Linkdin
  • Whatsapp
17
ಶುಭಸ್ಯ ಶೀಘ್ರಂ
Image Credit : social media

ಶುಭಸ್ಯ ಶೀಘ್ರಂ

ಇತ್ತೀಚೆಗಷ್ಟೇ ಜೀ ಪವರ್ (Zee Power) ಹೊಸ ವಾಹಿನಿ ಆರಂಭವಾಗಿದ್ದು, ಹಲವಾರು ಸೀರಿಯಲ್ ಗಳು ಆರಂಭವಾಗಿವೆ. ಒಂದೊಂದು ಕಥೆ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿವೆ. ಇವುಗಳಲ್ಲಿ ಒಂದು ಧಾರಾವಾಹಿ ಶುಭಸ್ಯ ಶೀಘ್ರಂ. ಅಮೃತಧಾರೆಯ ವಿಲನ್ ಜೈ ದೇವ್ ಆಲಿಯಾಸ್ ರಾಣವ್ ಗೌಡ, ಈ ಧಾರಾವಾಹಿಯಲ್ಲಿ ನಾಯಕ.

27
ಜೀ ಪವರ್ ಸೀರಿಯಲ್
Image Credit : social media

ಜೀ ಪವರ್ ಸೀರಿಯಲ್

ಜೀ ಕನ್ನಡ ವಾಹಿನಿಯಲ್ಲಿ 'ಅಣ್ಣಯ್ಯ' ಧಾರಾವಾಹಿಯನ್ನು ನಿರ್ಮಾಣ ಮಾಡಿರುವ ಪ್ರಮೋದ್ ಶೆಟ್ಟಿ ಮತ್ತು ಸುಪ್ರೀತಾ ಪ್ರಮೋದ್ ಶೆಟ್ಟಿ ಅವರು ಈಗ ಜೀ ಪವರ್‌ಗಾಗಿ 'ಶುಭಸ್ಯ ಶೀಘ್ರಂ' ಹೆಸರಿನ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

Related Articles

Related image1
ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಪತಿ ಜೊತೆಗಿನ ಫೋಟೋ ಹಂಚಿಕೊಂಡ Gattimela Serial ನಟಿ ಅಶ್ವಿನಿ!
Related image2
Zee Power Channel Serials: ಜೀ ಪವರ್‌ ಚಾನೆಲ್‌ಗೆ ಚಾಲನೆ; ಪ್ರಸಾರ ಆಗಲಿರೋ ಸೀರಿಯಲ್‌ಗಳ ಕಥೆ ಏನು?
37
ರಾಣವ್ ಗೌಡ ನಾಯಕ
Image Credit : social media

ರಾಣವ್ ಗೌಡ ನಾಯಕ

ಶುಭಸ್ಯ ಶೀಘ್ರಂ (Shubhasya Sheegram) ಧಾರಾವಹಿಯ ನಾಯಕಿಯಾಗಿ ಸ್ನೇಹಾ ಮತ್ತು ಹೀರೋ ಆಗಿ ರಾಣವ್ ನಟಿಸುತ್ತಿದ್ದಾರೆ. ಇದೊಂದು ಕೌಟುಂಬಿಕ ಧಾರಾವಾಹಿಯಾಗಿದ್ದು, ಆರಂಭದಲ್ಲಿ ಪ್ರೊಮೋದಲ್ಲಿ ತೋರಿಸಿದಂತೆ ನಾಯಕಿ ಅಮ್ಮ ಸಣ್ಣ ಅಂಗಡಿ ಇಟ್ಟುಕೊಂಡಿದ್ದು, ಅಪ್ಪ ಸೆಕ್ಯೂರಿಟಿ ಗಾರ್ಡ್, ನಾಲ್ಕು ಜನ ಅಕ್ಕ ತಂಗಿಯರ ಕಥೆ ಇದು.

47
ಸೀರಿಯಲ್ ಕಥೆ ಏನು?
Image Credit : social media

ಸೀರಿಯಲ್ ಕಥೆ ಏನು?

ನಾಯಕಿಯು ತನ್ನ ಕಿವಿ ಕೇಳದ ಅಕ್ಕನ ಮದುವೆ ಮಾಡಲು ಏನೆಲ್ಲಾ ತ್ಯಾಗ ಮಾಡುತ್ತಾಳೆ ಎಂಬುದೇ ಈ ಸೀರಿಯಲ್‌ನ ಕಥೆ. ಈ ಸಂದರ್ಭದಲ್ಲಿ ಆಕೆ ಹುಡುಗಿಯರನ್ನೇ ಕಂಡರೆ ಆಗದಂತಹ ನಾಯಕನನ್ನು ಭೇಟಿಯಾಗುತ್ತಾಳೆ, ಕೊನೆಗೆ ಆತನ ಜೊತೆಗೆ ಗುದ್ಧಾಟ ನಡೆದು, ಆತನನ್ನೇ ಮದುವೆಯಾಗುತ್ತಾಳೆ.

57
ಗಟ್ಟಿಮೇಳ ರಿಮೇಕ್
Image Credit : Asianet News

ಗಟ್ಟಿಮೇಳ ರಿಮೇಕ್

ಸದ್ಯ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ನೋಡಿದರೆ, ಕಥೆ ಸೇಮ್ ಟು ಸೇಮ್ ಜೀ ಕನ್ನಡದ ಜನಪ್ರಿಯ ಧಾರಾವಾಹಿಯಾದ ಗಟ್ಟಿಮೇಳದ  (Gattimela) ರಿಮೇಕ್ ನಂತೆ ಇದೆ. ಕಥೆ. ಕ್ಯಾರೆಕ್ಟರ್ ಎಲ್ಲವೂ ಸೇಮ್ ಟು ಸೇಮ್ ಹಾಗೇ ನಡೆಯುತ್ತಾ ಸಾಗಿದೆ. ಸೀರಿಯಲ್ ನೋಡಿರುವ ವೀಕ್ಷಕರು ಸಹ ಅದನ್ನೆ ಹೇಳುತ್ತಿದ್ದಾರೆ.

67
ಅಮೂಲ್ಯ -ಶುಭ ಕಥೆ ಒಂದೇ
Image Credit : social media

ಅಮೂಲ್ಯ -ಶುಭ ಕಥೆ ಒಂದೇ

ಗಟ್ಟಿಮೇಳದಲ್ಲಿ ಅಮೂಲ್ಯ ಅಮ್ಮ ಮಾಡಿದ ತಿಂಡಿಗಳನ್ನು ತನ್ನ ಸ್ಕೂಟರಲ್ಲಿ ತೆಗೆದುಕೊಂಡು ಹೋಗಿ ಮಾರುತ್ತಿದ್ದಳು, ಇಲ್ಲಿ ಶುಭ ಸೈಕಲಲ್ಲಿ ತೆಗೆದುಕೊಂಡು ಮಾರುತ್ತಿದ್ದಾಳೆ. ಗಟ್ಟಿ ಮೇಳದಲ್ಲಿ ವೇದಾಂತ್ ಗೆ ಹುಡುಗಿಯರನ್ನು ಕಂಡರೆ ಆಗೋದಿಲ್ಲ, ತನ್ನ ಆಫೀಸಲ್ಲೂ ಹುಡುಗಿಯರನ್ನು ಸೇರಿಸೋದಿಲ್ಲ, ಇಲ್ಲೂ ಅಷ್ಟೇ ನಾಯಕನಿಗೆ ಹುಡುಗಿಯರನ್ನು ಕಂಡ್ರೆ ಆಗೋದಿಲ್ಲ.

77
ಯಾಕೆ ಮತ್ತೆ ಅದೇ ಕಥೆಯ ಸೀರಿಯಲ್?
Image Credit : social media

ಯಾಕೆ ಮತ್ತೆ ಅದೇ ಕಥೆಯ ಸೀರಿಯಲ್?

ಗಟ್ಟಿಮೇಳದಲ್ಲಿ ನಾಯಕಿಯ ಅಕ್ಕನನ್ನು ನಾಯಕನ ತಮ್ಮ ಇಷ್ಟಪಟ್ಟು ಮದುವೆಯಾಗುತ್ತಾನೆ, ಶುಭಸ್ಯ ಶೀಘ್ರಂನಲ್ಲೂ ನಾಯಕಿ ಶುಭಳ ಕಿವಿ ಕೇಳದ ಅಕ್ಕನ ಮೇಲೆ ನಾಯಕನ ತಮ್ಮನಿಗೆ ಲವ್ ಆಗುತ್ತಾ ಬಂದಿದೆ. ಹಾಗಿದ್ರೆ ಎರಡೂ ಕಥೆ ಒಂದೇ ಅಂದಮೇಲೆ ಈ ಹಿಂದೆ ಯಶಸ್ವಿಯಾದ ಅದೇ ಕಥೆಯನ್ನು ಮತ್ತೆ ಇಲ್ಲಿ ಮಾಡುವ ಅಗತ್ಯ ಏನಿದೆ ಅನ್ನೋದೆ ಪ್ರಶ್ನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಜೀ ಕನ್ನಡ
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಪತಿ ಜೊತೆಗಿನ ಫೋಟೋ ಹಂಚಿಕೊಂಡ Gattimela Serial ನಟಿ ಅಶ್ವಿನಿ!
Recommended image2
Zee Power Channel Serials: ಜೀ ಪವರ್‌ ಚಾನೆಲ್‌ಗೆ ಚಾಲನೆ; ಪ್ರಸಾರ ಆಗಲಿರೋ ಸೀರಿಯಲ್‌ಗಳ ಕಥೆ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved