- Home
- Entertainment
- TV Talk
- ಚಂದನಾಳನ್ನು ಭೇಟಿ ಮಾಡಿ ಎನ್ನುತ್ತಾ…ಹೊಸ ಪಾತ್ರದ ಕುರಿತು ನಟಿ ಸಂಜನಾ ಬುರ್ಲಿ ಹೇಳಿದ್ದೇನು?
ಚಂದನಾಳನ್ನು ಭೇಟಿ ಮಾಡಿ ಎನ್ನುತ್ತಾ…ಹೊಸ ಪಾತ್ರದ ಕುರಿತು ನಟಿ ಸಂಜನಾ ಬುರ್ಲಿ ಹೇಳಿದ್ದೇನು?
ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ ಸಂಜನಾ ಬುರ್ಲಿ ಇದೀಗ ಗಂಧದ ಗುಡಿಯ ನಾಯಕಿಯಾಗಿ ಸದ್ಯದಲ್ಲೇ ಕಿರುತೆರೆಗೆ ಕಂ ಬ್ಯಾಕ್ ಮಾಡಲಿದ್ದು, ಈ ಕುರಿತು ನಟಿ ಏನು ಹೇಳಿದ್ದಾರೆ ನೋಡಿ.

ಜೀ ಕನ್ನಡದಲ್ಲಿ ಪ್ರಸಾರಾವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದ ಮೂಲಕ ಮಿಂಚಿದ ನಟಿ ಸಂಜನಾ ಬುರ್ಲಿ, ಇದೀಗ ಕಲರ್ಸ್ ಕನ್ನಡದ ಗಂಧದ ಗುಡಿ ಸೀರಿಯಲ್ ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.
ಈಗಾಗಲೇ ಸಂಜನಾ ಬುರ್ಲಿ ಅವರ ಪ್ರೊಮೋ ರಿಲೀಸ್ ಆಗಿದ್ದು, ನಟಿಗೆ ತುಂಬಾನೆ ಮುಖ್ಯವಾದ ಪಾತ್ರ ಸಿಕ್ಕಿದೆ. ಹೊಸ ಪ್ರೊಮೋವನ್ನು ಸಹ ಜನ ಇಷ್ಟಪಟ್ಟಿದ್ದಾರೆ. ಸೀರಿಯಲ್ ತೆರೆ ಮೇಲೆ ಬರೋದಕ್ಕೆ ಜನ ಕಾಯುತ್ತಿದ್ದಾರೆ.
ಇದು ನಾಲ್ಕು ಜನ ಅಣ್ಣ -ತಮ್ಮಂದಿರ ಕಥೆಯಾಗಿದ್ದು, ಆ ಮನೆಯಲ್ಲಿ ಹೆಣ್ಣು ದಿಕ್ಕೇ ಇರೋದಿಲ್ಲ. ಅಂತಹ ಮನೆಗೆ ಸೊಸೆಯಾಗಿ ಎಂಟ್ರಿ ಕೊಡುವ ಚಂದನಾ ಆಗಿ ಸಂಜನಾ ಬುರ್ಲಿ ನಟಿಸುತ್ತಿದ್ದಾರೆ. ಗಂಡಸರೇ ಇಲ್ಲದ ಮನೆಗೆ ಹೆಣ್ಣೊಬ್ಬರು ಎಂಟ್ರಿ ಕೊಟ್ಟಾಗ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅನ್ನೋದನ್ನು ಪ್ರೊಮೋದಲ್ಲಿ ತೋರಿಸಲಾಗಿದೆ.
ಅಂದ ಹಾಗೆ ಈ ಧಾರಾವಾಹಿಯ ಮುಖ್ಯ ನಾಯಕ ಶಿಶಿರ್ ಶಾಸ್ತ್ರಿಯಾಗಿದ್ದರೂ, ಎರಡನೇ ನಾಯಕನಾಗಿರುವ ಭವಿಷ್ ಗೌಡಗೆ ನಾಯಕಿಯಾಗಿ ಸಂಜನಾ ಬುರ್ಲಿ ನಟಿಸುತ್ತಿದ್ದಾರೆ. ತಮ್ಮ ಪಾತ್ರದ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಫೊಟೊಗಳ ಜೊತೆಗೆ ಸಂತಸವನ್ನು ಹಂಚಿಕೊಂಡಿದ್ದಾರೆ.
ಚಂದನಾಳನ್ನು ಭೇಟಿ ಮಾಡಿ ಆದಷ್ಟು ಬೇಗ ನಿಮ್ಮ ಗಂಧದಗುಡಿ ಅಲ್ಲಿ, ಶೀಘ್ರದಲ್ಲಿ . ಇದು ನಟಿಯಾಗಿ ನನ್ನ ಮತ್ತೊಂದು ಹೊಸ ಪ್ರಯಾಣವನ್ನು ಸೂಚಿಸುತ್ತದೆ. ಮತ್ತೊಂದು ವಿಶಿಷ್ಟ ಪಾತ್ರ. ವಿಭಿನ್ನ ಪರಿಕಲ್ಪನೆ. ಕಲಾವಿದ ಪುನರ್ಜನ್ಮ. ನನ್ನ ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು ಮತ್ತು ಅನುಯಾಯಿಗಳಿಂದ ಯಾವಾಗಲೂ ಎಲ್ಲಾ ಸಕಾರಾತ್ಮಕತೆ, ಆಶೀರ್ವಾದ ಮತ್ತು ಶುಭಾಶಯಗಳು ಬೇಕು! ಎಂದು ಬರೆದುಕೊಂಡಿದ್ದಾರೆ.
ಪುಟ್ಟಕ್ಕನ ಮಕ್ಕಳು. ಧಾರಾವಾಹಿಯಲ್ಲಿ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ ಆಗಿ ಕಂಠಿಯ ಪ್ರೀತಿಯ ಮೆಸ್ಸು ಆಗಿ, ವೀಕ್ಷಕರ ಪ್ರೀತಿಯ ಡಿಸಿ ಸ್ನೇಹಾ ಆಗಿ ಮನೆಮಾತಾದವರು ಸಂಜನಾ ಬುರ್ಲಿ. ಆದರೆ ಅವರು ಇದಕ್ಕಿದ್ದಂತೆ ಅರ್ಧದಲ್ಲೇ ಸೀರಿಯಲ್ ಬಿಟ್ಟಿದ್ದರು.ಉನ್ನತ ವ್ಯಾಸಂಗದ ಸಲುವಾಗಿ ಸೀರಿಯಲ್ ಬಿಡೋದಾಗಿ ಹೇಳಿದ್ದರಿಂದ ಸ್ನೇಹಾ ಪಾತ್ರವನ್ನೆ ಕೊನೆ ಮಾಡಲಾಗಿತ್ತು.
ಸ್ನೇಹಾ ಪಾತ್ರದ ಅಭಿಮಾನಿಗಳು ಅವರನ್ನು ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದರು. ಆದಷ್ಟು ಬೇಗನೆ ಬೇರೆ ಸೀರಿಯಲ್ ಮೂಲಕ ತೆರೆ ಮೇಲೆ ಬನ್ನಿ ಎನ್ನುತ್ತಿದ್ದರು. ಇದೀಗ ಗಂಧದ ಗುಡಿ ಮೂಲಕ ರೀ ಎಂಟ್ರಿ ಕೊಡುತ್ತಿರುವುದನ್ನು ನೋಡಿ ಜನ ಖುಷಿ ಪಡುತ್ತಿದ್ದಾರೆ.