Bigg Boss Kannada season 12: ಬಿಗ್ ಬಾಸ್ ಸ್ಪರ್ಧಿಗಳ ನಿಜವಾದ ವಯಸ್ಸೆಷ್ಟು?
ಬಿಗ್ ಬಾಸ್ ಕನ್ನಡ ಸೀಸನ್ 12 ಭಾರಿ ಜೋರಾಗಿಯೇ ನಡೆಯುತ್ತಿದೆ. ವಾರಕ್ಕೊಂದರಂತೆ ಅನಿರೀಕ್ಷಿತ ತಿರುವುಗಳು ಸಹ ಕಾಣಿಸುತ್ತಿದೆ. ಜಗಳ, ಸ್ಪರ್ಧೆ, ಸವಾಲುಗಳನ್ನು ದಾಟಿ ಮೂರನೇ ವಾರದತ್ತ ಮುನ್ನುಗ್ಗುತ್ತಿರುವ ಬಿಗ್ ಬಾಸ್ ಕನ್ನಡದ ಸ್ಪರ್ಧಿಗಳ ನಿಜವಾದ ವಯಸ್ಸು ಎಷ್ಟು?

ಬಿಗ್ ಬಾಸ್ ಸೀಸನ್ 12
ಕನ್ನಡ ಬಿಗ್ ಬಾಸ್ ಸೀಸನ್ 12 ಭಾರಿ ಸದ್ದು ಗದ್ದಲದ ನಡುವೆ, ಅನಿರೀಕ್ಷಿತ ತಿರುವುಗಳ ನಡುವೆ, ಮನರಂಜನೆ ನೀಡುತ್ತಾ ಅದ್ಭುತವಾಗಿ ಬರುತ್ತಿದೆ. ಈಗಾಗಲೇ ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ವಯಸ್ಸು ಎಷ್ಟು ಅನ್ನೋದನ್ನು ನೋಡೋಣ.
ಧ್ರುವಂತ್
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿರುವ, ದಾಂಪತ್ಯ ಜೀವನದಲ್ಲಿ ಕಿರಿಕ್ ಮಾಡಿಕೊಂಡು ಸುದ್ದಿಯಲ್ಲಿದ್ದ ನಟ ಧ್ರುವಂತ್ ವಯಸ್ಸು 40.
ಡಾಗ್ ಸತೀಶ್
ದುಬಾರಿ ನಾಯಿಗಳ ಒಡೆಯ ಡಾಗ್ ಸತೀಶ್ ಎಂದೇ ಖ್ಯಾತಿ ಪಡೆದಿರುವ ಸತೀಶ್ ಕ್ಯಾಡಬಾಮ್ಸ್ ಅವರಿಗೆ ಇದೀಗ 51 ವರ್ಷ ವಯಸ್ಸಾಗಿದೆ. ಬಿಗ್ ಬಾಸ್ ಮನೆಯಲ್ಲಿ ಅಷ್ಟೊಂದಾಗಿ ಕಾಣಿಸಿಕೊಳ್ಳದಿದ್ದರು, ಚಂದ್ರಪ್ರಭಾ ಜೊತೆ ಜಗಳದಿಂದಾಗಿ ಸುದ್ದಿಯಲ್ಲಿದ್ದರು.
ಅಶ್ವಿನಿ ಗೌಡ
ಕನ್ನಡ ಪರ ಹೋರಾಟಗಾರ್ತಿ ಹಾಗೂ ನಟಿಯಾಗಿರುವ ಅಶ್ವಿನಿ ಗೌಡ ಅವರು ತಮ್ಮ ಮಾತುಗಳ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಅಶ್ವಿನಿ ಗೌಡ ವಯಸ್ಸು 41. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ.
ಕಾವ್ಯಾ ಶೈವ
ಕೆಂಡ ಸಂಪಿಗೆ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಸ್ಪರ್ಧಿಸಿ ವಿಜೇತರಾಗಿ, ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿ, ಇದೀಗ ಬಿಗ್ ಬಾಸ್ ಮನೆಯಲ್ಲಿ ಟಫ್ ಸ್ಪರ್ಧೆ ನಿಡುತ್ತಿರುವ ಕೈವಾ ಶೈವ ವಯಸ್ಸು 25.
ಜಾಹ್ನವಿ
ಸುದ್ದಿ ನಿರೂಪಕಿಯಾಗಿ ಹಾಗೂ ಟಿವಿ ಕಾರ್ಯಕ್ರಮಗಳ ನಿರೂಪಕಿಯಾಗಿ ಜನಪ್ರಿಯತೆ ಪಡೆದು, ಬಳಿಕ ಸಿನಿಮಾಗಳಲ್ಲೂ ಸದ್ದು ಮಾಡಿದ್ದ ನಿರೂಪಕಿ ಜಾಹ್ನವಿ ಅವರ ವಯಸ್ಸು 39. ಇವರಿಗೆ ಈಗಾಗಲೇ ಒಬ್ಬ ಮಗನಿದ್ದಾನೆ.
ಕಾಕ್ರೋಚ್ ಸುಧಿ
ಕಳೆದ ವಾರ ಅಸುರಾಧಿಪತಿಯಾಗಿ ಸದ್ದು ಮಾಡಿ, ಫೈನಲಿಸ್ಟ್ ಆಗಿರುವ ಕಾಕ್ರೋಚ್ ಸುದಿ ಅವರ ವಯಸ್ಸು 43. ಸಲಗ, ಟಗರು, ಮಾದೇವ, ಭೀಮ ಸೇರಿ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದು, ಬಿಗ್ ಬಾಸ್ ಮನೆಯಲ್ಲಿ ಇವರ ವಿಲನ್ ಲುಕ್ ಕಾಣಿಸಿಲ್ಲ.
ಮಲ್ಲಮ್ಮ
ಬಿಗ್ ಬಾಸ್ ಮನೆಯ ಹಿರಿಯ ಸದಸ್ಯೆ ಮಲ್ಲಮ್ಮ. ಈಕೆಯ ಮಾತು, ನುಡಿ ಎಲ್ಲವೂ ಮುಗ್ಧವಾಗಿರುತ್ತೆ. ಯಾವುದೇ ಕಪಟ ಗೊತ್ತಿಲ್ಲದ ಸ್ಪರ್ಧಿ ಇವರೇ. ಮಲ್ಲಮ್ಮ ಅವರಿಗೆ ಈಗ 58 ವರ್ಷ ವಯಸ್ಸಾಗಿದೆ.
ಧನುಷ್ ಗೌಡ
ಗೀತಾ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು, ಬಳಿಕ ಹಾರರ್ ಕಥೆಯ ಮೂಲಕ ಶಾಕ್ ಕೊಟ್ಟ ನಟ ಧನುಷ್ ಗೌಡ ಅವರ ವಯಸ್ಸು 29. ಇವರು ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಸ್ಪಂದನಾ ಸೋಮಣ್ಣ
ಕರಿಮಣಿ ಹಾಗೂ ಗೃಹಪ್ರವೇಶ ಸೀರಿಯಲ್ ಮೂಲಕ ಕನ್ನಡಿಗರ ಎದೆಗೆ ಲಗ್ಗೆ ಇಟ್ಟು, ಹಲವು ಸಿನಿಮಾಗಳಲ್ಲೂ ನಟಿಸಿ, ಇದೀಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ನೀಡುತ್ತಿರುವ ನಟಿ ಸ್ಪಂದನಾ ಸೋಮಣ್ಣ ವಯಸ್ಸು 27.
ಅಶ್ವಿನಿ ಎಸ್ ಎನ್
ಮುದ್ದು ಲಕ್ಷ್ಮೀ., ಸೂರ್ಯವಂಶ ಸೀರಿಯಲ್ ಗಳ ಮೂಲಕ ಮಿಂಚಿ ಸದ್ಯ ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿರುವ ಅಶ್ವಿನಿ ಎಸ್ ಎನ್ ಅವರ ವಯಸ್ಸು 25 ಎಂದು ಹೇಳಲಾಗುತ್ತಿದೆ. ಇದುವೇ ಸರಿಯಾದ ವಯಸ್ಸು ಹೌದೋ ಅಲ್ಲವೋ ಎನ್ನುವ ಮಾಹಿತಿ ಇಲ್ಲ.