ಬೆಸ್ಟ್ ಫ್ರೆಂಡ್ ಮಾನ್ಸಿ ಜೋಶಿ ಹುಟ್ಟುಹಬ್ಬಕ್ಕೆ ಮೋಕ್ಷಿತಾ ಪೈ ಏನಂದ್ರು ನೋಡಿ
ಪಾರು ಧಾರಾವಾಹಿಯ ನಟಿಯಾದ ಮಾನ್ಸಿ ಜೋಶಿ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಗೆಳತಿ ಮೋಕ್ಷಿತಾ ಪೈ ಮುದ್ದಾಗಿ ವಿಶ್ ಮಾಡಿದ್ದಾರೆ.

ಪಾರು ಸೀರಿಯಲ್ (Paaru serial) ಝೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಸೀರಿಯಲ್ ಮುಗಿದು ವರ್ಷಗಳೇ ಕಳೆದರೂ ಸೀರಿಯಲ್ ನಟರು ಮತ್ತು ಅವರ ಬಾಂಡಿಂಗ್ ಇಂದಿಗೂ ಗಟ್ಟಿಯಾಗುತ್ತಾ ಸಾಗಿದೆ. ಅದರಲ್ಲೂ ಮೋಕ್ಷಿತಾ ಪೈ ಸೀರಿಯಲ್ ನಲ್ಲಿ ತಮ್ಮನ ಪಾತ್ರ ಮಾಡುತ್ತಿದ್ದ ಗಣಿಗೆ ಇಂದಿಗೂ ತಮ್ಮನ ಸ್ಥಾನ ಕೊಟ್ಟಿದ್ದಾರೆ, ಜೊತೆಗೆ ವಿಲನ್ ಪಾತ್ರ ಮಾಡುತ್ತಿದ್ದ ಮಾನ್ಸಿ ಜೋಶಿ ಜೊತೆಗೂ ಉತ್ತಮ ಸ್ನೇಹ ಹೊಂದಿದ್ದಾರೆ.
ಇವತ್ತು ಮಾನ್ಸಿ ಜೋಶಿ (Mansi Joshi) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾರು ಖ್ಯಾತಿಯ ಮೋಕ್ಷಿತಾ ಪೈ ತಮ್ಮ ಬೆಸ್ಟ್ ಫ್ರೆಂಡ್ ಗೆ ಮುದ್ದಾಗಿ ವಿಶ್ ಮಾಡಿದ್ದಾರೆ, ಜೊತೆಗೆ ಇಬ್ಬರ ಬಾಂಡಿಂಗ್ ಹೇಗಿದೆ ಎಂದು ತೋರಿಸುವ ಫೋಟೊಗಳನ್ನು ಕೂಡ ಶೇರ್ ಮಾಡಿದ್ದಾರೆ.
ಫೋಟೊಗಳ ಜೊತೆಗೆ ಮೋಕ್ಷಿತಾ (Mokshitha Pai) ನಿಜವಾದ ಸ್ನೇಹಿತರು ಪರಿಪೂರ್ಣರಲ್ಲ . ನಾವು ಜಗಳವಾಡುತ್ತೇವೆ, ಸಾರಿ ಕೇಳುತ್ತೇವೆ ಮತ್ತು ಇನ್ನೂ ಜೊತೆಗೆ ಇರುತ್ತೇವೆ. ನಿನ್ನ ವಿಶೇಷ ದಿನದಂದು ನಿನಗೆ ಶುಭಾಶಯಗಳು, ಜನ್ಮದಿನದ ಶುಭಾಶಯಗಳು ಬೇಬಿ , ಲಾಟ್ಸ್ ಆಫ್ ಲವ್ ಎಂದು ಬರೆದುಕೊಂಡಿದ್ದಾರೆ. ಇವರಿಬ್ಬರ ಸುಂದರ ಸ್ನೇಹ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
ಪಾರು ಧಾರಾವಾಹಿಯಲ್ಲಿ ಮೋಕ್ಷಿತಾ ನಾಯಕಿಯಾಗಿದ್ದರೆ, ಮಾನ್ಸಿ ವಿಲನ್ ಆಗಿ ನಟಿಸಿದ್ದರು. ಆನ್ ಸ್ಕ್ರೀನ್ ಒಬ್ಬರಿಗೊಬ್ಬರು ತದ್ವಿರುದ್ಧವಾಗಿದ್ದರೂ, ಆಫ್ ಸ್ಕ್ರೀನಲ್ಲಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದರು, ಜೊತೆಯಾಗಿ ಹಲವು ಕಡೆಗಳಿ ಟ್ರಿಪ್ ಕೂಡ ಹೋಗಿ ಬಂದಿದ್ದರು ಈ ಜೋಡಿ. ಅಷ್ಟೇ ಅಲ್ಲ ಜೊತೆಯಾಗಿ ರೀಲ್ಸ್ ಕೂಡ ಶೇರ್ ಮಾಡಿದ್ದರು. ಮೋಕ್ಷಿತಾ ಬಿಗ್ ಬಾಸ್ (Bigg Boss) ಮನೆಯಲ್ಲಿದ್ದಾಗ, ಮಾನ್ಸಿ ಬೆಂಬಲ ಕೂಡ ಸೂಚಿಸಿದ್ದರು.
ಕರಿಯರ್ ವಿಷಯಕ್ಕೆ ಬಂದರೆ ಪಾರು ಬಳಿಕ ಮೋಕ್ಷಿತಾ ಪೈ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರೆ, ಅಲ್ಲಿಂದ ಹೊರ ಬಂದ ಮೇಲೆ ಮೈಕ್ರೋ ಸೀರಿಸ್ ಗಳಲ್ಲಿ ನಟಿಸಿದ್ದರು. ಮಾನ್ಸಿ ಜೋಶಿ ಪಾರು ಬಳಿಕ, ಕನ್ನಡದ ಕೆಲವು ಸೀರಿಯಲ್ ಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು, ಬಳಿಕ ಮಲಯಾಲಂದ ಜನಪ್ರಿಯ ಧಾರಾವಾಹಿಗೆ ನಾಯಕಿಯಾಗಿದ್ದರು.