ಲಂಗ-ದಾವಣಿಯಲ್ಲಿ ಕನ್ನಡ ಕಿರುತೆರೆಯ ಬುಟ್ಟ ಬೊಮ್ಮ ಭೂಮಿಕಾ… ನಗುವಿಗೆ ಫ್ಯಾನ್ಸ್ ಫಿದಾ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮಿಯಾಗಿ ಮನೆಮನೆಗಳನ್ನೂ ತಲುಪಿದ ನಟಿ ಭೂಮಿಕಾ ರಮೇಶ್, ಹಲವು ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹೊಸ ಲುಕ್ ನೊಂಡಿಗೆ ಕಾಣಿಸಿಕೊಂಡಿದ್ದು, ನಟಿಯ ಅಂದ, ಸ್ಮೈಲ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಭೂಮಿಕಾ ರಮೇಶ್
ಭೂಮಿಕಾ ರಮೇಶ್ (Bhoomika Ramesh) ಅನ್ನೋದಕ್ಕಿಂತ ಈ ನಟಿ ಕನ್ನಡಿಗರಿಗೆ ಪರಿಚಿತರಾಗಿದ್ದು, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಲಕ್ಷ್ಮಿಯಾಗಿ, ಇವತ್ತಿಗೂ ಜನರು ಇವರನ್ನು ಹಾಗೆಯೇ ಗುರುತಿಸುತ್ತಾರೆ.
ಲಕ್ಷ್ಮೀ ಬಾರಮ್ಮ ಸೀರಿಯಲ್
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮದಲ್ಲಿ (Lakshmi Baramma)ಅಕ್ಕಮ್ಮನ ಪ್ರೀತಿಯ ಲಡ್ಡು ಆಗಿ, ವೈಷ್ಣವ್ ನ ಮಹಾಲಕ್ಷ್ಮಿಯಾಗಿ ಮಿಂಚಿದ್ದ ಚೆಲುವೆ ಭೂಮಿಕಾ, ಸದ್ಯ ತೆಲುಗಿನಲ್ಲಿ ಬ್ಯುಸಿ.
ಮೇಘ ಸಂದೇಶಂ
ಲಕ್ಷ್ಮೀ ಸದ್ಯ ಝೀ ತೆಲುಗು ವಾಹಿನಿಯ ‘ಮೇಘ ಸದೇಶಂ’ ಧಾರಾವಾಹಿಯಲ್ಲಿ ಅಭಿನವ್ ವಿಶ್ವನಾಥ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದು ಜನಪ್ರಿಯ ಧಾರಾವಾಹಿಯಾಗಿದ್ದು, ತೆಲುಗು ಪ್ರೇಕ್ಷಕರು ಸಹ ಭೂಮಿಕಾ ಅವರನ್ನು ಮೆಚ್ಚಿಕೊಂಡಿದ್ದಾರೆ.
ಹೊಸ ಲುಕ್ ನಲ್ಲಿ ಭೂಮಿಕಾ
ಇದೀಗ ಭೂಮಿಕಾ ರಮೇಶ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನೇರಳೆ ಬಣ್ಣದ ಲಂಗ, ದಾವಣಿ ಧರಿಸಿ, ಓಪನ್ ಹೇರ್ ಬಿಟ್ಕೊಂಡು ಭೂಮಿಕಾ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ಅಭಿಮಾನಿಗಳು ಫಿದಾ
ಈ ಲುಕ್ ನಲ್ಲಿ ಭೂಮಿಕಾ ಎಷ್ಟೊಂದು ಸುಂದರವಾಗಿ ಕಾಣಿಸುತ್ತಿದ್ದಾರೆ ಅಂದ್ರೆ, ಆಕೆಯ ಅಂದ, ಸ್ಮೈಲ್ ಗೆ ಮನಸೋತ ಜನ ಬುಟ್ಟ ಬೊಮ್ಮ ಎನ್ನುತ್ತಿದ್ದಾರೆ. ನಮ್ಮ ಹೃದಯವನ್ನು ಮತ್ತೆ ಮತ್ತೆ ನಿನ್ನ ಅಂದನಿಂದ ಕದಿಯುತ್ತಿರುವೆ ಎಂದು ಕಾಮೆಂಟ್ ಮಾಡಿದ್ದಾರೆ.
ಮಿನಿ ಸೀರೀಸ್ ನಲ್ಲಿ ಭೂಮಿಕಾ
ಇದೀಗ ಭೂಮಿಕಾ ಮತ್ತು ಅಭಿನವ್ ವಿಶ್ವನಾಥ್ ಜೊತೆಯಾಗಿ ಆಟೋ ರಾಜಾ ಎನ್ನುವ ವೆಬ್ ಸೀರೀಸ್ ನಲ್ಲಿ ಕೂಡ ನಟಿಸಿದ್ದು, ಇದು ಬುಲ್ಲೆಟ್ ಆಪ್ ನಲ್ಲಿ ಪ್ರಸಾರವಾಗುತ್ತಿದೆ. ಜನ ಈ ಕತೆಯನ್ನು ಸಹ ಮೆಚ್ಚಿಕೊಂಡಿದ್ದಾರೆ.
ಡ್ಯಾನ್ಸರ್ ಭೂಮಿಕಾ
ಇನ್ನು ಭೂಮಿಕಾ ಡ್ಯಾನ್ಸರ್ ಆಗಿದ್ದು, ಭರತನಾಟ್ಯ ಕಲಾವಿದೆ. ಈಕೆ ಬಾಲ್ಯದಿಂದಲೂ ಹಲವಾರು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಝೀ ತೆಲುಗಿನ ಆಟ 6 ಜೂನಿಯರ್ ಮತ್ತು ಸೈ ಅಂಟೆ ಸೈನಲ್ಲಿ ವಿನ್ನರ್ ಆಗಿದ್ದರು, ಅಲ್ಲದೇ ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ಜ್ಯೂನಿಯರ್ ನಲ್ಲೂ ನಟಿಸಿದ್ದರು.