- Home
- Entertainment
- TV Talk
- ಲಕ್ಷ್ಮೀ ನಿವಾಸ ವೀಕ್ಷಕರ ಮಾತು ನಿರ್ದೇಶಕರಿಗೆ ಕೇಳುತ್ತಾ? ವಿಶ್ವನ ಸಂಕಟಕ್ಕೆ ಇದುವೇ ಪರಿಹಾರವಂತೆ!
ಲಕ್ಷ್ಮೀ ನಿವಾಸ ವೀಕ್ಷಕರ ಮಾತು ನಿರ್ದೇಶಕರಿಗೆ ಕೇಳುತ್ತಾ? ವಿಶ್ವನ ಸಂಕಟಕ್ಕೆ ಇದುವೇ ಪರಿಹಾರವಂತೆ!
ವಿಶ್ವ, ಜಾಹ್ನವಿ ಮತ್ತು ಜಯಂತ್ ತ್ರಿಕೋನ ಪ್ರೇಮಕಥೆಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಜಾನು ಮನೆಗೆಲಸ ಮಾಡುವುದನ್ನು ವಿಶ್ವ ನೋಡಲಾರದೆ ಚಿಂತಿತನಾಗಿದ್ದು, ವೀಕ್ಷಕರು ಪರಿಹಾರ ಸೂಚಿಸಿದ್ದಾರೆ. ಜಯಂತ್ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಾನೆ.

ವಿಶ್ವ, ಜಾಹ್ನವಿ ಮತ್ತು ಜಯಂತ್ ತ್ರಿಕೋನ ಪ್ರೇಮಕಥೆ ಮುಂದೆ ಹೇಗೆ ಸಾಗುತ್ತೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ತನು ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ಬಳಿಕ ಜಾಹ್ನವಿಯನ್ನು ವಿಶ್ವ ಭೇಟಿಯಾಗಿದ್ದನು. ಇದಾದ ಬಳಿಕ ನಾನು ಕೇವಲ ನಿನ್ನ ಸ್ನೇಹಿತ ಮಾತ್ರ ಎಂದು ಊರು ಬಿಟ್ಟು ಹೊರಟಿದ್ದ ಜಾಹ್ನವಿಯನ್ನು ಮನೆಗೆ ಕರೆದುಕೊಂಡು ಬಂದಿದ್ದನು.
ಇತ್ತ ಜಾಹ್ನವಿ ಬದುಕಿರೋ ವಿಷಯ ಜಯಂತ್‌ಗೆ ಗೊತ್ತಾಗಿದೆ. ಆದ್ರೆ ಜಾಹ್ನವಿ ಎಲ್ಲಿದ್ದಾಳೆ ಮತ್ತು ಮನೆಗೆ ಬಂದು ಚೀಟಿ ಬರೆದಿಟ್ಟು ಹೋದ ಆ ಗೂಬೆ ಯಾರು ಅಂತ ಮಾತ್ರ ಗೊತ್ತಾಗುತ್ತಿಲ್ಲ. ಈ ಎಲ್ಲಾ ಬೆಳವಣಿಗೆ ನಡುವೆ ಜಾನು ಮನೆಗೆಲಸದವಳಾಗಿ ಕೆಲಸ ಮಾಡುತ್ತಿರೋದನ್ನು ವಿಶ್ವನಿಂದ ನೋಡಲು ಆಗುತ್ತಿಲ್ಲ.
ತನು ಮತ್ತು ವಿಶ್ವ ಫೋನ್ ನೋಡುತ್ತಾ ಕುಳಿತಿದ್ರೆ, ಜಾನು ಕಸ ಗುಡಿಸುತ್ತಿರುತ್ತಾಳೆ. ಈ ವೇಳೆ ತನು ಕುಡಿಯಲು ನೀರು ಕೇಳುತ್ತಾರೆ. ಆನಂತರ ವಿಶ್ವನ ತಾಯಿ ಲಲಿತಾ ಬಂದು, ತುಂಬಾ ತಲೆನೋವು, ಕಾಫಿ ಮಾಡಿಕೊಡುವಂತೆ ಕೇಳುತ್ತಾರೆ. ಇದದನ್ನೆಲ್ಲಾ ನೋಡಿ ವಿಶ್ವನಿಗೆ ಸಂಕಟವಾಗುತ್ತದೆ. ಇದೀಗ ಸೀರಿಯಲ್ ವೀಕ್ಷಕರು ವಿಶ್ವನ ಸಂಕಟಕ್ಕೆ ಪರಿಹಾರವನ್ನು ನೀಡಿದ್ದಾರೆ.
ಲಕ್ಷ್ಮೀ ನಿವಾಸ ವೀಕ್ಷಕರು ವಿಶ್ವನ ಕಷ್ಟಕ್ಕೆ ಮರುಗಿದ್ದಾರೆ. ಮನೆಗೆಲಸ ಮಾಡೋದನ್ನು ನೋಡಲು ಆಗದಿದ್ದರೆ ಆಕೆಗೊಂದು ಹೊರಗೆ ಕೆಲಸ ಕೊಡಿಸು ಎಂದು ಸಲಹೆಯನ್ನು ನೀಡಿದ್ದಾರೆ. ಮತ್ತೊಂದೆಡೆ ಮೂವರ ಪ್ರೇಮಕಥೆಗೆ ಶೀಘ್ರದಲ್ಲಿಯೇ ಮತ್ತೊಂದು ತಿರುವು ನೀಡಿ. ಜಾನು ಮತ್ತು ಜಯಂತ್ ಮುಖಾಮುಖಿಯಾಗುವಂತೆ ಮಾಡಿ ಎಂದು ವೀಕ್ಷಕರು ನಿರ್ದೇಶಕರು ಕೇಳಿಕೊಂಡಿದ್ದಾರೆ.
ಇನ್ನು ಕೆಲವರು ಜಾನು ಮತ್ತು ವಿಶ್ವನ ಜೋಡಿ ತುಂಬಾ ಮುದ್ದಾಗಿ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇತ್ತ ಜಯಂತ್ ತನ್ನ ತಪ್ಪುಗಳನ್ನು ತಿದ್ದುಕೊಳ್ಳುತ್ತಿದ್ದಾನೆ. ಮನೆಯಲ್ಲಿ ಇರಿಸಿದ್ದ ರಹಸ್ಯ ಕ್ಯಾಮೆರಾಗಳನ್ನು ತೆಗೆದು ಬೆಂಕಿಗೆ ಹಾಕಿದ್ದಾನೆ. ಜಾಹ್ನವಿ ಮೇಲಿನ ಅನುಮಾನದಿಂದ ಕ್ಯಾಮೆರಾ ಹಾಕಿರಲಿಲ್ಲ. ನನ್ನ ಮೇಲಿನ ಪ್ರೀತಿ ಕಡಿಮೆ ಆಗಬಾರದು ಎಂಬ ಉದ್ದೇಶಕ್ಕೆ ಕ್ಯಾಮೆರಾ ಹಾಕಿದ್ದೆ ಎಂದು ಹೇಳಿಕೊಂಡಿದ್ದಾನೆ.