ಜಯಂತ್‌ಗೆ ಸಿಕ್ತು ಚಿನ್ನು ಮರಿ ಬಳೆ, ಅಸಲಿ ಆಟ ಈಗ ಶುರು..ಯಾರಿಗೆ ಕಾದಿದೆ ಗ್ರಹಚಾರ?
Jayant finds bangles: ಮೊದಲೇ ಅವನು ಸೈಕೋ. ಜಾಹ್ನವಿ ಮೇಲೆ ಹುಚ್ಚು ಪ್ರೀತಿ ಬೇರೆ. ಆದ್ದರಿಂದ ಬಳೆಯ ಜಾಡನ್ನು ಹಿಡಿದು ಆತ ತನ್ನ ಚಿನ್ನು ಮರಿಯನ್ನ ಹುಡುಕಿದರೂ ಆಶ್ಚರ್ಯವೇನಿಲ್ಲ. ಇಲ್ಲಿ ಇನ್ನೊಂದು ಅನುಮಾನ ಎದುರಾಗುತ್ತದೆ.

ವಿಶ್ವ, ಜಾಹ್ನವಿಗೂ ಗೊತ್ತು
ಸದ್ಯ ಜಯಂತ್ ಮನೋವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ವೈದ್ಯರು ಎಷ್ಟೇ ಔಷಧಿ ಕೊಟ್ಟರೂ, ಸಮಾಧಾನ ಹೇಳಿದರೂ "ನನ್ನ ಜಾನು ಸತ್ತಿಲ್ಲ, ಬದುಕಿದ್ದಾಳೆ" ಎಂದು ಪದೇ ಪದೇ ಹೇಳುತ್ತಿದ್ದಾನೆ ಜಯಂತ್. ಇದನ್ನೆಲ್ಲಾ ನೋಡಿದ ವೈದ್ಯರು ಜಯಂತ್ ಜಾಹ್ನವಿ ಇದ್ದಾಳೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ ಎಂದು ಹೇಳುತ್ತಾರೆ. ಈ ವಿಷಯ ಈಗ ವಿಶ್ವ, ಜಾಹ್ನವಿಗೂ ತಿಳಿದಿದೆ.
ತೀವ್ರ ಗೊಂದಲ
ಜಯಂತ್ ಮುಂದೆ ನಿಜವಾಗಲೂ ಜಾಹ್ನವಿ ಕಂಡರೂ ಅದನ್ನು ಭ್ರಮೆ ಎಂಬಂತಲೇ ಬಿಂಬಿಸಲು ಹೊರಟಿದ್ದಾರೆ ಜಾಹ್ನವಿ-ವಿಶ್ವ. ಇದರಿಂದ ತೀವ್ರ ಗೊಂದಲಕ್ಕೆ ಒಳಗಾಗಿದ್ದಾನೆ ಜಯಂತ್. ಅಷ್ಟೇ ಅಲ್ಲ, ಶಾಂತಮ್ಮನ ಬಳಿ ಜಾಹ್ನವಿ ತನ್ನ ಮುಂದೆ ಕಾಣಿಸಿಕೊಂಡಿದ್ದನ್ನ ಜಯಂತ್ ಹೇಳಿದಾಗ "ಅಯ್ಯೋ, ಅವಳು ನಿಜಕ್ಕೂ ಕಾಣಿಸಿಕೊಂಡಳಾ ಅಥವಾ ಈತನಿಗೆ ನಿಜಕ್ಕೂ ಆಕೆ ಬದುಕಿದ್ದಾಳೆ ಎಂಬ ಭ್ರಮೆ ಹೊಕ್ಕಿದೆಯೋ" ಅಂದುಕೊಳ್ಳುತ್ತಾಳೆ ಶಾಂತಮ್ಮ.
ನಂಬಿಕೆ, ಅನುಮಾನ
ಆದರೆ ಜಯಂತ್ ಹೀಗೆ ಶಾಂತಮ್ಮನ ಬಳಿ ಮಾತನಾಡುತ್ತಿರುವಾಗ ಅಂದು ಜಾಹ್ನವಿ ಜಯಂತ್ ಮನೆಗೆ ಹೋದಾಗ ಮನೆಯಲ್ಲೇ ಬಿಟ್ಟು ಹೋಗಿದ್ದ ಎರಡು ಹಸಿರು ಬಳೆಗಳು ಸೋಫಾದ ಬಳಿ ಸಿಕ್ಕಿವೆ. ಇದರಿಂದ ಜಯಂತ್‌ಗೆ ತನ್ನ ಜಾಹ್ನವಿ ಬದುಕಿದ್ದಾಳೆ ಎಂಬ ಬಲವಾದ ನಂಬಿಕೆ, ಅನುಮಾನ ಎರಡು ಶುರುವಾಗಿದೆ.
ಇನ್ನೊಂದು ಅನುಮಾನ
ಅಲ್ಲಿಗೆ ಜಯಂತ್‌ಗೆ ಜಾನು ಸಿಗುವ ಸಮಯ ಖಂಡಿತ ಬಂದಂತಾಗಿದೆ. ಅತ್ತ ಕಡೆ ಜಯಂತ್ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲು ವಿಶ್ವ-ಜಾಹ್ನವಿ ಸಿದ್ಧರಾಗಿರುವಾಗಲೇ, ಇತ್ತ ಕಡೆ ಜಯಂತ್‌ಗೆ ಸುಳಿವು ಸಿಕ್ಕಿರುವುದರಿಂದ ಆತ ಸುಮ್ಮನಿರುತ್ತಾರೆಯೇ? ಮೊದಲೇ ಅವನು ಸೈಕೋ. ಜಾಹ್ನವಿ ಮೇಲೆ ಹುಚ್ಚು ಪ್ರೀತಿ ಬೇರೆ. ಆದ್ದರಿಂದ ಬಳೆಯ ಜಾಡನ್ನು ಹಿಡಿದು ಆತ ತನ್ನ ಚಿನ್ನು ಮರಿಯನ್ನ ಹುಡುಕಿದರೂ ಆಶ್ಚರ್ಯವೇನಿಲ್ಲ. ಇಲ್ಲಿ ಇನ್ನೊಂದು ಅನುಮಾನ ಎದುರಾಗುತ್ತದೆ.
ಎಲ್ಲಾ ತಂತ್ರಗಳನ್ನು ಅರಿತವ
ಅದೇನೆಂದರೆ ನಿಜಕ್ಕೂ ಜಯಂತ್ ಜಾಹ್ನವಿ ಎಲ್ಲಿದ್ದಾಳೆ ಎಂದು ಕಂಡುಹಿಡಿಯಲು ತನಗೆ ಏನೋ ಆಗಿದೆ ಎಂಬಂತೆ ಎಲ್ಲರನ್ನೂ ನಂಬಿಸುತ್ತಿರಬಹುದು. ಏಕೆಂದರೆ ಜಯಂತ್ ಎಲ್ಲಾ ತಂತ್ರಗಳನ್ನು ಅರಿತವ. ಮಂಕುಬೂದಿ ಎರಚುವುದು ಗೊತ್ತು. ಹಾಗಾಗಿ ಅವನು ನಾಟಕವಾಡುತ್ತಲೇ ಜಾಹ್ನವಿಯನ್ನ ಮತ್ತೆ ಮನೆಗೆ ಕರೆತರುವ ಸಾಧ್ಯತೆಗಳಿವೆ.
ಒಟ್ಟಿಗೆ ಇದ್ದರೇನೇ ಚೆನ್ನ
ಒಟ್ಟಿನಲ್ಲಿ ಜಯಂತ್ ಏನೇ ಮಾಡಿದ್ರೂ ಅದು ಜಾನು ಪ್ರೀತಿಗೋಸ್ಕರ. ಹಾಗಾಗಿ ಅವರಿಬ್ಬರೂ ಒಟ್ಟಿಗೆ ಇದ್ದರೇನೇ ಚೆನ್ನ ಎನ್ನುವ ಮಂದಿಯೂ ಇದ್ದಾರೆ. ಹಾಗಾಗಿ ಮುಂಬರುವ ಸಂಚಿಕೆಗಳಲ್ಲಿ ಜಾಹ್ನವಿ-ಜಯಂತ್ ಇಬ್ಬರೂ ಒಂದಾದರೆ ಅವರ ಅಭಿಮಾನಿಗಳಿಗಂತೂ ಸಿಕ್ಕಾಪಟ್ಟೆ ಖುಷಿಯಾಗಲಿದೆ ಬಿಡಿ.