MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss 19ಕ್ಕಾಗಿ Salman Khan ನಿಜವಾಗಿಯೂ 150 ಕೋಟಿ ಸಂಭಾವನೆ ಪಡೆಯುತ್ತಾರೆಯೆ?

Bigg Boss 19ಕ್ಕಾಗಿ Salman Khan ನಿಜವಾಗಿಯೂ 150 ಕೋಟಿ ಸಂಭಾವನೆ ಪಡೆಯುತ್ತಾರೆಯೆ?

ಸಲ್ಮಾನ್ ಖಾನ್ ವರ್ಷಗಳಿಂದ ಬಿಗ್ ಬಾಸ್ ಅನ್ನು ಆಯೋಜಿಸುತ್ತಿದ್ದಾರೆ, ಮತ್ತು ಈಗ ಕಾರ್ಯಕ್ರಮದ ನಿರ್ಮಾಪಕರು ಮೊದಲ ಬಾರಿಗೆ ಸಲ್ಮಾನ್ ಖಾನ್ ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಿಜವಾಗಿಯೂ ಸಲ್ಮಾನ್ ಖಾನ್ 150 ಕೋಟಿ ಸಂಭಾವನೆ ಪಡೆಯೋದು ನಿಜಾನ? 

2 Min read
Author : Pavna Das
Published : Oct 31 2025, 11:11 AM IST
Share this Photo Gallery
  • FB
  • TW
  • Linkdin
  • Whatsapp
15
ಬಿಗ್ ಬಾಸ್ ಗಾಗಿ ಸಲ್ಮಾನ್ ಖಾನ್ ಪಡೆಯುವ ಸಂಭಾವನೆ?
Image Credit : instagram

ಬಿಗ್ ಬಾಸ್ ಗಾಗಿ ಸಲ್ಮಾನ್ ಖಾನ್ ಪಡೆಯುವ ಸಂಭಾವನೆ?

ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಆಯೋಜಿಸಲು ಸಲ್ಮಾನ್ ಖಾನ್ ತೆಗೆದುಕೊಳ್ಳುವ ಸಂಭಾವನೆ ಪ್ರತಿ ಸೀಸನ್‌ನಲ್ಲೂ ಚರ್ಚೆಯಾಗುತ್ತಲೇ ಇರುತ್ತೆ. ಈ ವರ್ಷವೂ, ಸೀಸನ್ 19 ಅನ್ನು ಆಯೋಜಿಸಲು ನಟ ₹120-150 ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ, ಬಿಗ್ ಬಾಸ್ 19 ನಿರ್ಮಾಪಕ ರಿಷಿ ನೇಗಿ (ಬನಿಜಯ್ ಏಷ್ಯಾ ಮತ್ತು ಎಂಡೆಮೋಲ್‌ಶೈನ್ ಇಂಡಿಯಾ) ಸೂಪರ್‌ಸ್ಟಾರ್ ಅವರ ಸಂಭಾವನೆಯ ಬಗ್ಗೆ ಮಾತನಾಡಿದರು ಮತ್ತು ವೀಕೆಂಡ್ ಕಾ ವಾರ್ ಸಂಚಿಕೆಗಳಲ್ಲಿ ಸಲ್ಮಾನ್ ಕೆಲವು ಸ್ಪರ್ಧಿಗಳ ಬಗ್ಗೆ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ದೀರ್ಘಕಾಲದ ಆರೋಪಗಳನ್ನು ಸಹ ಪರಿಹರಿಸಿದರು.

25
ಸಲ್ಮಾನ್ ಖಾನ್ ಪ್ರತಿ ಸಂಚಿಕೆ ವೀಕ್ಷಿಸುತ್ತಾರೆ
Image Credit : stockPhoto

ಸಲ್ಮಾನ್ ಖಾನ್ ಪ್ರತಿ ಸಂಚಿಕೆ ವೀಕ್ಷಿಸುತ್ತಾರೆ

ವೀಕೆಂಡ್ ಕಾ ವಾರ್ ನ ಹೋಸ್ಟ್ ಮಾಡುವ ಮೊದಲು ಸಲ್ಮಾನ್ ಖಾನ್ ಪ್ರತಿ ಸಂಚಿಕೆಯನ್ನು ವೀಕ್ಷಿಸುತ್ತಾರೆ, ಅವರಿಗೆ ಸಾಧ್ಯವಾಗದಿದ್ದರೆ, ವಾರಾಂತ್ಯದಲ್ಲಿ ಮನೆಯಲ್ಲಿ ನಡೆದ ಎಲ್ಲಾ ಪ್ರಮುಖ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಅವರು ನಮ್ಮೊಂದಿಗೆ ಒಂದು ಅಥವಾ ಎರಡು ಗಂಟೆಗಳ ಕಾಲ ಸೀನ್ ಗಳನ್ನು ವೀಕ್ಷಿಸುತ್ತಾರೆ. ಈ ರೀತಿಯಾಗಿ, ಅವರು ಎಲ್ಲಾ ಸ್ಪರ್ಧಿಗಳ ಆಟ, ಚಲನವಲನವನ್ನು ಗಮನಿಸುತ್ತಾರೆ ಎಂದು ಹೇಳಿದ್ದಾರೆ.

Related Articles

Related image1
ಹೆಣ್ಣು ಮಗುವಿನ ಅಮ್ಮನಾದ ಶುರಾ ಖಾನ್​: ಮಗು ನೋಡಲು ಬಿಗ್​ಬಾಸ್​​ ಬಿಟ್ಟು ಓಡಿ ಬಂದ Salman Khan
Related image2
Now Playing
ಪಾಕಿಗಳಿಗೆ ಭಯ ಹುಟ್ಟಿಸಿದ್ದೇಕೆ Salman Khan ಹೇಳಿಕೆ? ಇಂಡಿಯಾದಲ್ಲಿ ಹೀರೋ.. ಪಾಕ್​ನಲ್ಲಿ ಟೆರೆರಿಸ್ಟ್!
35
ವೀಕೆಂಡ್ ಗೆ ಹೀಗೆ ರೆಡಿಯಾಗುತ್ತಾರೆ
Image Credit : instagram

ವೀಕೆಂಡ್ ಗೆ ಹೀಗೆ ರೆಡಿಯಾಗುತ್ತಾರೆ

ಸಲ್ಮಾನ್ ಎಲ್ಲಾ ಎಪಿಸೋಡ್ ಗಳನ್ನು ನೋಡುವುದರಿಂದ ಮನೆಯಲ್ಲಿ ಏನು ನಡೆಯುತ್ತಿದೆ, ಸ್ಪರ್ಧಿಗಳೊಂದಿಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಕಾರ್ಯಕ್ರಮದ ನಿರ್ಮಾಪಕರಾಗಿ, ನಾವು ಅದನ್ನು ಹೇಗೆ ನೋಡುತ್ತೇವೆ ಎಂಬುದರ ಬಗ್ಗೆಯೂ ನಮಗೆ ಒಂದು ದೃಷ್ಟಿಕೋನವಿದೆ. ಪ್ರೇಕ್ಷಕರಿಂದಲೂ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತವೆ. ಆದ್ದರಿಂದ, ಅದನ್ನೆಲ್ಲಾ ಒಟ್ಟುಗೂಡಿಸಿ ವೀಕೆಂಡ್ ಎಪಿಸೋಡ್ ಸಿದ್ದಪಡಿಸುತ್ತೇವೆ ಎಂದರು.

45
ಸಲ್ಮಾನ್ ಖಾನ್ ವಿರುದ್ಧ ಆರೋಪ
Image Credit : instagram

ಸಲ್ಮಾನ್ ಖಾನ್ ವಿರುದ್ಧ ಆರೋಪ

ಸಲ್ಮಾನ್ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡಿದ ರಿಷಿ, "ಸಲ್ಮಾನ್ ಖಾನ್ ಅವರನ್ನು ತಿಳಿದಿರುವ ಯಾರಿಗಾದರೂ ಸಲ್ಮಾನ್ ಎಂದಿಗೂ ಸುಳ್ಳು ವಿಚಾರವನ್ನು ನಂಬೋದಿಲ್ಲ ಅನ್ನೋದು ಗೊತ್ತಿದೆ. ಏನಾದರೂ ಸರಿಯೋ ತಪ್ಪೋ ಎಂಬುದರ ಬಗ್ಗೆ ಅವರಿಗೆ ತಮ್ಮದೇ ಆದ ದೃಷ್ಟಿಕೋನವಿದೆ. ನಾವು ಚರ್ಚಿಸುತ್ತೇವೆ, ತುಂಬಾ ಚರ್ಚೆ ಮಾಡಿದ ಬಳಿಕ ಅವರು ವೇದಿಕೆಗೆ ಹೋಗುತ್ತಾರೆ" ಎಂದು ಒತ್ತಿ ಹೇಳಿದರು.

55
ಪ್ರತಿ ಸೀಸನ್‌ಗೆ ₹150-200 ಕೋಟಿ ಪಡೆಯುತ್ತಾರೆಯೇ?
Image Credit : Instagram

ಪ್ರತಿ ಸೀಸನ್‌ಗೆ ₹150-200 ಕೋಟಿ ಪಡೆಯುತ್ತಾರೆಯೇ?

ಸಲ್ಮಾನ್ ಖಾನ್ ಬಿಗ್ ಬಾಸ್ ಹೋಸ್ಟ್ ಮಾಡಲು ಪ್ರತಿ ಸೀಸನ್‌ಗೆ ₹150-200 ಕೋಟಿ ಪಡೆಯುತ್ತಾರೆಯೇ ಎಂದು ರಿಷಿ ಅವರನ್ನು ಕೇಳಿದಾಗ, ಅವರು "ಇದು ಸಲ್ಮಾನ್ ಮತ್ತು ಜಿಯೋ ಹಾಟ್‌ಸ್ಟಾರ್ ನಡುವಿನ ಒಪ್ಪಂದ, ಆದ್ದರಿಂದ ನನಗೆ ಅದರ ಬಗ್ಗೆ ತಿಳಿದಿಲ್ಲ ಎಂದರು. ವದಂತಿಗಳು ಏನೇ ಇರಲಿ, ಅವರು ಪ್ರತಿ ಪೈಸೆಗೂ ಯೋಗ್ಯರು. ಅವರು ಈ ಶೋನಲ್ಲೂ ಇರುವಷ್ಟು ದಿನ ನನ್ನಷ್ಟು ಖುಷಿ ಪಡೋರು ಬೇರೆ ಯಾರೂ ಇಲ್ಲ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಲ್ಮಾನ್ ಖಾನ್
ಬಿಗ್ ಬಾಸ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
ಹೆಣ್ಣು ಮಗುವಿನ ಅಮ್ಮನಾದ ಶುರಾ ಖಾನ್​: ಮಗು ನೋಡಲು ಬಿಗ್​ಬಾಸ್​​ ಬಿಟ್ಟು ಓಡಿ ಬಂದ Salman Khan
Recommended image2
Now Playing
ಪಾಕಿಗಳಿಗೆ ಭಯ ಹುಟ್ಟಿಸಿದ್ದೇಕೆ Salman Khan ಹೇಳಿಕೆ? ಇಂಡಿಯಾದಲ್ಲಿ ಹೀರೋ.. ಪಾಕ್​ನಲ್ಲಿ ಟೆರೆರಿಸ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved