ಪ್ರಖ್ಯಾತ ಹೀರೋ ಸಂಸಾರಕ್ಕೆ ಮತ್ತೊಬ್ಬಳ ಎಂಟ್ರಿ, ರಣಚಂಡಿಯಾದ ಹೆಂಡ್ತಿ!
Dharma Mahesh's Wife Releases Viral Video, Alleges Affair With Rithu Chowdhary ಟಾಲಿವುಡ್ ನಟ ಧರ್ಮ ಮಹೇಶ್ ಅವರ ಪತ್ನಿ ಗೌತಮಿ ಚೌಧರಿ, ತಮ್ಮ ಪತಿ ಮತ್ತು ನಟಿ ರಿತು ಚೌಧರಿ ನಡುವೆ ಅಕ್ರಮ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಡ್ರಿಂಕರ್ ಸಾಯಿ ಸಿನಿಮಾದ ಮೂಲಕ ಯಶಸ್ಸಿನ ಸವಿ ಕಂಡಿದ್ದ ಟಾಲಿವುಡ್ ನಟ ಧರ್ಮ ಮಹೇಶ್ ಸಂಸಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದಕ್ಕೆ ಪ್ರಮುಖ ಕಾರಣ ಆತನ ಪತ್ನಿ ಗೌತಮಿ ಚೌಧರಿ ಮಾಡಿರುವ ಮಹಾ ಆರೋಪ. ಬಿಗ್‌ಬಾಸ್ ಸೀಸನ್ 9ರಲ್ಲಿ ಟಾಲಿವುಡ್ ನಟ ಧರ್ಮ ಮಹೇಶ್ ಹಾಗೂ ರಿತು ಚೌಧರಿ ಇಬ್ಬರೂ ಪಾಲ್ಗೊಂಡಿದ್ದರು.
ಇಬ್ಬರ ನಡುವೆ ಅತ್ಯುತ್ತಮ ಸ್ನೇಹ ಇದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಧರ್ಮ ಮಹೇಶ್ ಪತ್ನಿ ಗೌತಮಿ ಚೌಧರಿ ಪ್ರಕಾರ, ಇಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಹೇಳಿದ್ದಾರೆ.
ಹಲವು ವರ್ಷಗಳಿಂದ ಟಿವಿ ಧಾರವಾಹಿಗಳಲ್ಲಿ ನಟಿಸುತ್ತಿರುವ ರಿತು ಚೌಧರಿ, ಇಲ್ಲಸಲ್ಲದ ವೇಳೆಯಲ್ಲಿ ನನ್ನ ಗಂಡನ್ನು ಭೇಟಿಯಾಗುತ್ತಾರೆ. ಮನೆಯಲ್ಲಿ ತುಂಬಾ ಹೊತ್ತು ಪಾರ್ಟಿ ಮಾಡುತ್ತಾರೆ ಎಂದು ಗೌತಮಿ ಚೌಧರಿ ಆರೋಪಿಸಿ ಅದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಕೂಡ ರಿಲೀಸ್ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಧರ್ಮ ಮಹೇಶ್ ಪತ್ನಿ ಗೌತಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು, ಧರ್ಮ ಮಹೇಶ್ ತಮಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಹಾಗೂ ಮತ್ತೊಬ್ಬ ಯುವತಿಯೊಟ್ಟಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಆ ಯುವತಿ ಯಾರು ಎಂಬುದನ್ನು ಹೇಳಿರಲಿಲ್ಲ.
ಆದರೆ, ಈಗ ರಿತು ಚೌಧರಿಯೇ ಈ ಯುವತಿ ಅನ್ನೋದು ಸ್ಪಷ್ಟವಾಗಿದೆ.ಇಬ್ಬರೂ ಒಟ್ಟಿಗೆ ಓಡಾಡುತ್ತಿರುವ ವಿಡಿಯೋಗಳನ್ನು ಗೌತಮಿ ಬಿಡುಗಡೆ ಮಾಡಿದ್ದಾರೆ. ತಮ್ಮ ಮನೆಯಲ್ಲಿ ಇಬ್ಬರೂ ಒಟ್ಟಿಗೆ ಇದ್ದು, ಇಬ್ಬರೂ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂದೂ ಗೌತಮಿ ಆರೋಪಿಸಿದ್ದಾರೆ.
ರಿತು ಚೌಧರಿ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ನಟಿಸಿದ್ದಲ್ಲದೆ, ಟಿವಿ ನಿರೂಪಕಿ ಕೂಡ ಆಗಿದ್ದಾರೆ. ಧರ್ಮ ಮಹೇಶ್ ಪತ್ನಿ ಗೌತಮಿ, ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಆಗಿದ್ದಾರೆ.
ಒಂದು ವಿಡಿಯೋದಲ್ಲಿ ರಿತು ಚೌಧರಿ ಹಾಗೂ ಧರ್ಮ ಮಹೇಶ್ ಲಿಫ್ಟ್‌ನಲ್ಲಿ ಒಟ್ಟಿಗೆ ಹೋಗುತ್ತಿರುವ ದೃಶ್ಯವಿದ್ದರೆ, ಇನ್ನೊಂದು ವಿಡಿಯೋದಲ್ಲಿ ಲಿಫ್ಟ್‌ನಿಂದ ಮನೆಯ ಕಡೆಗೆ ಮಾತನಾಡಿಕೊಂಡು ಹೋಗುವ ದೃಶ್ಯವಿದೆ.
ಮತ್ತೊಂದು ವಿಡಿಯೋದಲ್ಲಿ ರಿತು ಚೌಧರಿ ಸಣ್ಣ ಡಬ್ಬಿಯೊಂದರಿಂದ ವಸ್ತುವೊಂದನ್ನು ಬಾಯಿಗೆ ಹಾಕಿಕೊಳ್ಳುತ್ತಿರುವ ದೃಶ್ಯವಿದೆ.
ಇದನ್ನೇ ಗೌತಮಿ ಚೌಧರಿ, ಆಕೆ ಡ್ರಗ್ಸ್ ಸೇವನೆ ಮಾಡುವ ದೃಶ್ಯ ಎಂದಿದ್ದಾರೆ. ರಿತು ಚೌಧರಿ ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಪತ್ನಿಯ ಆರೋಪಗಳ ಬಗ್ಗೆ ಧರ್ಮ ಮಹೇಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.