- Home
- Entertainment
- TV Talk
- ಪದೇ ಪದೇ ಚಾಕಲೇಟ್, ಪಿಜ್ಜಾ, ಪಾನಿಪುರಿ ತಿನ್ನೋ ಆಸೆ ಆಗ್ತಿದ್ಯಾ? ಹಾಗಿದ್ರೆ ಈ ಮಾಹಿತಿ ನಿಮಗಾಗಿ
ಪದೇ ಪದೇ ಚಾಕಲೇಟ್, ಪಿಜ್ಜಾ, ಪಾನಿಪುರಿ ತಿನ್ನೋ ಆಸೆ ಆಗ್ತಿದ್ಯಾ? ಹಾಗಿದ್ರೆ ಈ ಮಾಹಿತಿ ನಿಮಗಾಗಿ
ಪದೇ ಪದೇ ಪಿಜ್ಜಾ, ಬರ್ಗರ್, ಐಸ್ ಕ್ರೀಂ ಮೊದಲಾದ ಜಂಕ್ ಫುಡ್ ತಿನ್ನುವ ಬಯಕೆ ಉಂಟಾಗುವುದು ನಿಮ್ಮ ದೇಹದಲ್ಲಿ ಕೆಲವೊಂದು ವಿಟಾಮಿನ್ ಗಳ ಕೊರತೆಯನ್ನು ಸೂಚಿಸುತ್ತದೆ. ನಿಮಗೂ ಇದೇ ರೀತಿಯ ಅನುಭವ ಆಗುತ್ತಿದ್ದರೆ, ಈ ಆಹಾರಗಳ ಬದಲಾಗಿ ಆರೋಗ್ಯಯುತ ಆಹಾರ ಸೇವಿಸಿ.

ಕಡು ಬಯಕೆ
ನಿಮಗೂ ಕೂಡ ಪದೇ ಪದೇ ಪಿಜ್ಜಾ, ಚಾಕಲೇಟ್, ಐಸ್ ಕ್ರೀಂ, ಪಾನಿಪುರಿ ತಿನ್ನುವ ಬಯಕೆ ಉಂಟಾಗುತ್ತಿರುತ್ತಾ? ಇದು ಖಂಡಿತವಾಗಿಯೂ ಗರ್ಬಿಣಿ ಬಯಕೆ ಅಲ್ಲ. ಇದು ದೇಹದಲ್ಲಿ ಕೆಲವೊಂದು ಅಂಶಗಳ ಕೊರತೆಯನ್ನು ಸೂಚಿಸುತ್ತೆ. ಇಂತಹ ಬಯಕೆಗಳು ಉಂಟಾದಾಗ ಯಾವ ಆಹಾರ ಸೇವನೆ ಮಾಡಬೇಕು ನೋಡೋಣ.
ಚಾಕಲೇಟ್
ನಿಮಗೆ ಮತ್ತೆ ಮತ್ತೆ ಚಾಕಲೇಟ್ ತಿನ್ನುವ ಆಸೆ ಆಗುತ್ತಿದೆಯೇ? ಹಾಗಿದ್ರೆ ನಿಮ್ಮ ದೇಹಕ್ಕೆ ಮೆಗ್ನೇಶಿಯಂನ ಅವಶ್ಯಕತೆ ಇದೆ ಎಂದು ಅರ್ಥ ಮಾಡ್ಕೊಳಿ. ಇಂತಹ ಸಂದರ್ಭದಲ್ಲಿ ಚಾಕಲೇಟ್ ತಿಂದು ಆರೋಗ್ಯ ಹಾಳು ಮಾಡುವ ಬದಲು ಮಖಾನ ಅಥವಾ ತಾವರೆ ಬೀಜಗಳನ್ನು ಸೇವಿಸಿ.
ಪಾನಿಪುರಿ
ಪಾನಿಪುರಿ ಯಾರಿಗೆ ತಾನೆ ಇಷ್ಟ ಇಲ್ಲ. ಯುವ ಜನತೆ ಇಷ್ಟ ಪಟ್ಟು ತಿನ್ನುವ ತಿನಿಸು ಅಂದ್ರೆ ಅದು ಪಾನಿಪುರಿ. ಆದರೆ ನಿಮಗೆ ಪದೇ ಪದೇ ಪಾನಿಪುರಿ ತಿನ್ನುವ ಮನಸಾಗುತ್ತಿದ್ದರೆ ಅದು ಸೋಢಿಯಂ ಕೊರತೆಯ ಲಕ್ಷಣವಾಗಿದೆ. ಅಂತಹ ಸಂದರ್ಭದಲ್ಲಿ ಮಜ್ಜಿಗೆ ಸೇವನೆ ಉತ್ತಮ.
ಬರ್ಗರ್
ಬರ್ಗರ್ ತಿನ್ನುವ ಆಸೆಯಾಗುತ್ತಿದ್ದರೆ, ಆ ಆಸೆಗೆ ತಡೆ ಹಾಕಿ. ಯಾಕಂದ್ರೆ ಇದು ದೇಹಕ್ಕೆ ಐರನ್ ಅಂಶ ಅಂದ್ರೆ ಕಬ್ಬಿಣಾಂಶದ ಅಗತ್ಯ ಇದೆ ಅನ್ನೋದನ್ನು ಸೂಚಿಸುತ್ತೆ. ಇಂತಹ ಸಂದರ್ಭದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಪಾಲಕ್ ಸೇವನೆ ಮಾಡೋದು ಉತ್ತಮ.
ಫ್ರೆಂಚ್ ಫ್ರೈ
ಹೆಚ್ಚಿನ ಜನರಿಗೆ ಈ ಅಭ್ಯಾಸ ಇರುತ್ತೆ, ಸುಮ್ಮನೆ ಕೂತಿದ್ದರೆ ಸಾಕು ಫ್ರೆಂಚ್ ಫ್ರೈ ತಿನ್ನುವ, ಸಾಲ್ಟಿ ಚಿಪ್ಸ್ ತಿನ್ನುವ ಮನಸಾಗುತ್ತದೆ. ಇದು ತುಂಬಾನೆ ಕೆಟ್ಟ ಅಭ್ಯಾಸ. ಆದರೆ ಅದನ್ನು ತಿನ್ನುವ ಆಸೆ ನಿಮ್ಮ ದೇಹಕ್ಕೆ ಆರೋಗ್ಯಕರ ಫ್ಯಾಟ್ ಮತ್ತು ಸೋಡಿಯಂನ ಅವಶ್ಯಕತೆಯನ್ನು ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಮಸಾಲಾ ಕಾರ್ನ್ ಸೇವನೆ ಮಾಡಬಹುದು.
ಪಿಜ್ಜಾ
ಪಿಜ್ಜಾ ತಿನ್ನುವ ನಿಮ್ಮ ಅತಿಯಾದ ಬಯಕೆಗೆ ಕಾರಣ ನಿಮ್ಮ ದೇಹಕ್ಕೆ ಆರಾಮದಾಯಕ ಕಾರ್ಬ್ಸ್ ಅವಶ್ಯಕತೆ. ಹಾಗಾಗಿ ಪಿಜ್ಜಾ ತಿನ್ನುವ ಆಸೆ ಆದಾಗ, ನೀವು ತರಕಾರಿಗಳನ್ನು ಹಾಕಿ ಮಾಡಿದ ಉತ್ತಪ್ಪಮ್ ಸೇವಿಸಿ.
ಐಸ್ ಕ್ರೀಂ
ಕೆಲವರಿಗೆ ಅದು ಮಳೆಗಾಲ ಇರಲಿ, ಚಳಿಗಾಲ ಇರಲಿ, ಬೇಸಿಗೆಯೇ ಇರಲಿ, ಹಗಲು ರಾತ್ರಿಯೇ ಇರಲಿ, ಎಲ್ಲಾ ಸಂದರ್ಭದಲ್ಲೂ ಐಸ್ ಕ್ರೀಂ ತಿನ್ನುವ ಮನಸಾಗುತ್ತಲೇ ಇರುತ್ತೆ. ಇದು ಡೊಪಮೈನ್ ಕಾರಣದಿಂದ ಅಥವಾ ನ್ಯೂಟ್ರಿಶಿಯನ್ ಕೊರತೆಯಿಂದ ಉಂಟಾಗುತ್ತೆ. ಇಂತಹ ಸಂದರ್ಭದಲ್ಲಿ ಹಣ್ಣುಗಳನ್ನು ಯೋಗರ್ಟ್ ಜೊತೆ ಸೇವಿಸಿ.