- Home
- Entertainment
- TV Talk
- ಅಂತಿಮ ಸಂಚಿಕೆಯ ಶೂಟಿಂಗ್ ಮುಗಿಸಿದ ‘ನಿನಗಾಗಿ’ ತಂಡ.... ಯಾಕ್ ಹೀಗೆ ಮಾಡಿದ್ರಿ ಕೇಳ್ತಿದ್ದಾರೆ ವೀಕ್ಷಕರು
ಅಂತಿಮ ಸಂಚಿಕೆಯ ಶೂಟಿಂಗ್ ಮುಗಿಸಿದ ‘ನಿನಗಾಗಿ’ ತಂಡ.... ಯಾಕ್ ಹೀಗೆ ಮಾಡಿದ್ರಿ ಕೇಳ್ತಿದ್ದಾರೆ ವೀಕ್ಷಕರು
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ನಿನಗಾಗಿ ಶೀಘ್ರದಲ್ಲಿ ಅಂತ್ಯ ಕಾಣಲಿದೆ. ಈಗಾಗಲೇ ಧಾರಾವಾಹಿಯ ಅಂತಿಮ ಸಂಚಿಕೆಗಳ ಶೂಟಿಂಗ್ ಪೂರ್ಣಗೊಂಡಿದ್ದು, ನಿರ್ದೇಶಕ ಸಂಪೃಥ್ವಿ ಕೊನೆಯ ಶೂಟಿಂಗ್ ಫೋಟೊವನ್ನು ಹಂಚಿಕೊಂಡಿದ್ದಾರೆ.

ನಿನಗಾಗಿ ಸೀರಿಯಲ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿ (Ninagaagi serial ) ಸದ್ಯದಲ್ಲೇ ಕೊನೆಯಾಗಲಿದೆ. ಈಗಾಗಲೇ ಸೀರಿಯಲ್ ಅಂತಿಮೆ ಸಂಚಿಕೆಗಳ ಶೂಟಿಂಗ್ ಮುಕ್ತಾಯವಾಗಿದೆ. ಈ ಕುರಿತು ನಿರ್ದೇಶಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊನೆಯ ಸಂಚಿಕೆ ಶೂಟಿಂಗ್
ನಿನಗಾಗಿ ಧಾರಾವಾಹಿಯ ಪೂರ್ತಿ ತಂಡದ ಫೋಟೊ ಶೇರ್ ಮಾಡಿರುವ ನಿರ್ದೇಶಕ ಸಂಪೃಥ್ವಿ ಪ್ರತಿಯೊಂದು ಅಂತ್ಯವೂ ಕಠಿಣವಾಗಿರುತ್ತದೆ, ವಿಶೇಷವಾಗಿ ನಿಮ್ಮೆಲ್ಲರನ್ನೂ ಮಿಸ್ ಮಾಡಿಕೊಳ್ಳುವ ಭಾವನೆ ಬಂದಾಗ.. ಧನ್ಯವಾದಗಳು ನಿನಗಾಗಿ ಎಂದು ಬರೆದುಕೊಂಡಿದ್ದಾರೆ.
ಇಷ್ಟು ಬೇಗ ಕಥೆ ಮುಗಿಯುತ್ತಾ?
ಸದ್ಯ ನಿನಗಾಗಿ ಧಾರಾವಾಹಿಯಲ್ಲಿ ರಚನಾ ದೇವಿಯ ಸತ್ಯವನ್ನು ಹೊರ ಹಾಕೋದಕ್ಕೆ ಎಲ್ಲಾ ರೀತಿಯಲ್ಲಿ ಪ್ಲ್ಯಾನ್ ಮಾಡುತ್ತಿದ್ದಾಳೆ. ನಿಧಾನವಾಗಿ ದೇವಿಯ ಒಂದೊಂದು ರೂಪ ಕೂಡ ಹೊರಗೆ ಬರುತ್ತಿದೆ. ಇನ್ನೇನಿದ್ದರೂ ಜೀವ ಮುಂದೆ ಸತ್ಯ ರಿವೀಲ್ ಆಗಬೇಕಿದೆ.
ಕಥೆ ಏನು?
ಸೂಪರ್ ಸ್ಟಾರ್ ರಚನಾ, ಫುಟ್ ಟ್ರಕ್ ಹೊಂದಿರುವ ಜೀವಾ ಮದುವೆಯಾಗುತ್ತೆ, ಸಂದರ್ಭಗಳೇ ಅವರನ್ನು ಒಂದು ಮಾಡುತ್ತೆ, ಆರಂಭದಲ್ಲಿ ರಚನಾ ತಾಯಿ ವಿಲನ್ ಆಗಿದ್ರು. ಆದರೆ ಕಥೆ ಬದಲಾಗಿ, ಜೀವಗೂ ಒಂದು ಫ್ಯಾಮಿಲಿ ಇದೆ ಅನ್ನೋದು ತಿಳಿದ ಮೇಲೆ ವಿಲನ್ ಗಳ ಸಂಖ್ಯೆ ಹೆಚ್ಚಾಯ್ತು. ಸದ್ಯ ಮಾಧುರಿ ಕೊಲೆಯ ಸತ್ಯ ಅನಾವರಣ ಆಗೋದು ಬಾಕಿ ಇದೆ.
ಬೇಸರ ವ್ಯಕ್ತ ಪಡಿಸಿದ ವೀಕ್ಷಕರು
ಸೀರಿಯಲ್ ಮುಕ್ತಾಯದ ಸುದ್ದಿ ಕೇಳಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದು, ಇಷ್ಟು ಚೆನ್ನಾಗಿ ಇರೋ ಸೀರಿಯಲ್ ಬೇಗ ಯಾಕೆ ಮುಗಿಸಿದ್ರಿ ? ಕಂಟಿನ್ಯೂ ಮಾಡ್ರಿ. ಬಿಗ್ ಬಾಸ್ ಸಲುವಾಗಿ ಬೆಸ್ಟ್ ಸೀರಿಯಲ್ ಮುಗಿಸಬೇಡಿ. ನಾವು ಬಿಗ್ ಬಾಸ್ ನೋಡೋದಿಲ್ಲ. ಪ್ಲೀಸ್ ಮುಂದುವರೆಸಿ. ಕಲರ್ಸ್ ಕನ್ನಡದಲ್ಲಿನ ಅತ್ಯುತ್ತಮ ಸೀರಿಯಲ್ ಇದಾಗಿತ್ತು. ಇದನ್ನು ಇಷ್ಟು ಬೇಗ ಮುಗಿಸಿ ಮೋಸ ಮಾಡಿದ್ರಿ ಎಂದಿದ್ದಾರೆ ಜನ.
ಧಾರಾವಾಹಿಯ ನಟರು
ಜೀವಾ ಪಾತ್ರದಲ್ಲಿ ರಿತ್ವಿಕ್ ಮಠದ್ ನಟಿಸಿದ್ರೆ, ರಚನಾ ಆಗಿ ದಿವ್ಯಾ ಉರುಡುಗ (Divya Uruduga), ಕೃಷ್ಣ ಪಾತ್ರದಲ್ಲಿ ಬೇಬಿ ಸಿರಿ ಸಿಂಚನ, ಸೋನಿಯಾ ಪೊನ್ನಮ್ಮ, ಮಾನಸ, ಕಿಶನ್ ಬಿಳಗಲಿ, ಪ್ರಿಯಾಂಕಾ ಕಾಮತ್, ವಿಜಯ್ ಕೌಂಡಿನ್ಯ, ಕೂಡ ನಟಿಸಿದ್ದಾರೆ.