- Home
- Entertainment
- TV Talk
- ಲಲಿತಾ ಸಹಸ್ರನಾಮ ಪಠಣ ಮಾಡಿ ದೊಡ್ಡ ಸಮಸ್ಯೆ ಪರಿಹರಿಸಿಕೊಂಡ ಕ್ರಿಶ್ಚಿಯನ್ ಮಹಿಳೆ! ಎಲ್ಲರಿಂದ ಮೆಚ್ಚುಗೆ
ಲಲಿತಾ ಸಹಸ್ರನಾಮ ಪಠಣ ಮಾಡಿ ದೊಡ್ಡ ಸಮಸ್ಯೆ ಪರಿಹರಿಸಿಕೊಂಡ ಕ್ರಿಶ್ಚಿಯನ್ ಮಹಿಳೆ! ಎಲ್ಲರಿಂದ ಮೆಚ್ಚುಗೆ
Lalitha Sahasranama Advantages In Kannada: ಲಲಿತ ಸಹಸ್ರನಾಮ ಹಾಗೂ ವಿಷ್ಣು ಸಹಸ್ರನಾಮಗಳನ್ನು ಹಿಂದುಗಳು ಪಠಣ ಮಾಡುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಹಿಂದುಗಳು ನಂಬುತ್ತಾರೆ. ಆದರೆ ಇಲ್ಲೋರ್ವ ಕ್ರಿಶ್ಚಿಯನ್ ಮಹಿಳೆ ಈ ಪಠಣ ಮಾಡಿ ಉಸಿರಾಟದ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.

ಟಿವಿ ಶೋನಲ್ಲಿ ಬಹಿರಂಗ
ಹೌದು, ಮಲಯಾಳಂ ಟಿವಿ ಶೋನಲ್ಲಿ Alice Unnikrishnan ಎನ್ನುವವರು ಭಾಗಿಯಾಗಿದ್ದರು. ಆ ವೇಳೆ ಅವರು ಈ ವಿಚಾರವನ್ನು ಶೇರ್ ಮಾಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಈ ಶೋ ಪ್ರಸಾರ ಆಗಿತ್ತು. ಅಲ್ಲಿ ಅವರು ಸ್ಪರ್ಧಿಯಾಗಿದ್ದರು.
ಹಿಂದು ಪುರುಷನ ಜೊತೆ ಮದುವೆ
“ನಾನು ಕ್ರಿಶ್ಚಿಯನ್ ಮಹಿಳೆ. ಆದರೆ ಹಿಂದು ಪುರುಷನನ್ನು ಮದುವೆಯಾಗಿರುವೆ. ಆ ಬಳಿಕ ಹಿಂದು ಆಗಿ ಮತಾಂತರಗೊಂಡೆ. ನಾನು ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮವನ್ನು ಓದಲು ಆರಂಭಿಸಿದೆ” ಎಂದು ಅವರು ಹೇಳಿದ್ದಾರೆ.
ಉಸಿರಾಟ ಸಮಸ್ಯೆ ಪರಿಹಾರ
“ಈ ಸಹಸ್ರನಾಮಗಳನ್ನು ಓದಲು ಆರಂಭಿಸಿದ ಬಳಿಕ ನನ್ನ ಉಸಿರಾಟದ ಸಮಸ್ಯೆ ಸರಿಯಾಯಿತು. ಇದರ ಉಚ್ಛರಣೆಯಿಂದ ಬಾಹ್ಯ ಹಾಗೂ ಆಂತರಿಕ ಶುದ್ಧಿ ಆಯಿತು” ಎಂದು ಅವರು ಹೇಳಿದ್ದಾರೆ.
ನಿರರ್ಗಳವಾಗಿ ಹಾಡ್ತಾರೆ
“ಲಲಿತಾ ಸಹಸ್ರನಾಮ ಓದುವುದು ಸುಲಭವಿಲ್ಲ, ದೈಹಿಕ ಸಮಸ್ಯೆಗೈ ಕೂಡ ಇದು ರಾಮಬಾಣ ಇದ್ದಂತೆ. ಆ ರೀತಿ ಇದನ್ನು ರಚಿಸಲಾಗಿದೆ. ಒಂದಿಷ್ಟು ದಿನಗಳ ಕಾಲ ಪಠಣ ಮಾಡಿದ ಬಳಿಕ ನಾನೀಗ ನಿರರ್ಗಳವಾಗಿ ಹಾಡುತ್ತೇನೆ. ಇದರಿಂದ ನನ್ನ ಸಂಗೀತಕ್ಕೂ ಕೂಡ ಸಹಾಯವಾಗಿದೆ” ಎಂದು ಅವರು ಹೇಳಿದ್ದಾರೆ.
ಪ್ರಯೋಜನಗಳು ಯಾವುವು?
ಲಲಿತಾ ಸಹಸ್ರನಾಮ ಎಂದರೆ ಇದು ಬ್ರಹ್ಮಪುರಾಣದ ಪದ್ಯ. ಲಲಿತಾ ಅಂದರೆ ಆನಂದ ದೇವತೆ, ಪಾರ್ವತಿಯ ಇನ್ನೊಂದು ರೂಪ ಅಂತ ಹೇಳಲಾಗುವುದು. ಇದನ್ನು ನಿತ್ಯ ಪಠಣ ಮಾಡೋದರಿಂದ ಆರ್ಥಿಕ, ಮಾನಸಿಕ ಅಭಿವೃದ್ಧಿ ಆಗುವುದು ಎನ್ನುತ್ತಾರೆ. ಇದು ಶಕ್ತಿಶಾಲಿ ಮಂತ್ರವಾಗಿದೆ.