- Home
- Entertainment
- TV Talk
- BBK 12: ಅಂತೂ ಇಂತೂ ಪ್ರೀತಿ ಬಂತು; ಸ್ವೀಟ್ ಕೂಡ ತಿನಿಸಿದ್ರು-ಬಿಗ್ ಬಾಸ್ ಮನೆಯಲ್ಲಿ ಲವ್‌ಸ್ಟೋರಿ ಶುರು
BBK 12: ಅಂತೂ ಇಂತೂ ಪ್ರೀತಿ ಬಂತು; ಸ್ವೀಟ್ ಕೂಡ ತಿನಿಸಿದ್ರು-ಬಿಗ್ ಬಾಸ್ ಮನೆಯಲ್ಲಿ ಲವ್‌ಸ್ಟೋರಿ ಶುರು
BBK 12: ಬಿಗ್ ಬಾಸ್ ಮನೆಗೂ, ಲವ್‌ಗೂ ಆವಿನಾಭಾವ ಸಂಬಂಧವಿದೆ. ಎಷ್ಟೋ ಲವ್ ಸ್ಟೋರಿಗಳು ಇಲ್ಲೇ ಹುಟ್ಟಿವೆ, ಎಷ್ಟೋ ಲವ್ ಸ್ಟೋರಿಗಳು ಇಲ್ಲೇ ಹುಟ್ಟಿ, ಅಂತ್ಯವಾಗಿದ್ದೂ ಇದೆ. ಕೆಲವರು ಲವ್ ಎಂದು ನಾಟಕ ಮಾಡಿದ್ದೂ ಇದೆ. ಈಗ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಲವ್ ಶುರುವಾಯ್ತಾ ಎಂಬ ಪ್ರಶ್ನೆ ಬಂದಿದೆ.

ರಾಶಿಕಾ ಶೆಟ್ಟಿಗೆ ಸರ್ಪ್ರೈಸ್
ಬಿಗ್ ಬಾಸ್ ಮನೆಗೆ ಬರುವ ಹದಿನೈದು ದಿನಗಳ ಹಿಂದೆಯಷ್ಟೇ ರಾಶಿಕಾ ಶೆಟ್ಟಿ ಅವರು ಸೂರಜ್ ಸಿಂಗ್ ಅವರ ವಿಡಿಯೋ ನೋಡಿ, ಹ್ಯಾಂಡ್‌ಸಮ್, ಕ್ಯೂಟ್ ಎಂದುಕೊಂಡಿದ್ದರಂತೆ. ಈಗ ಅವರು ದೊಡ್ಮನೆಯೊಳಗಡೆ ಬಂದಿರೋದು ರಾಶಿಕಾ ಶೆಟ್ಟಿಗೆ ಸರ್ಪ್ರೈಸ್ ಆಗಿತ್ತು.
ಸೂರಜ್ ಸಿಂಗ್‌ಗೆ ಟ್ರೈ ಮಾಡಬಹುದು?
ರಾಶಿಕಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಅಶ್ವಿನಿ, ಜಾಹ್ನವಿ ಅವರು ಯಾವ ಹುಡುಗ ಚೆನ್ನಾಗಿದ್ದಾನೆ, ಯಾವ ಹುಡುಗನಿಗೆ ಲೈನ್ ಹೊಡೆಯಬಹುದು? ಎಂದೆಲ್ಲ ಚರ್ಚೆ ಮಾಡಿದ್ದಾರೆ. ಆ ವೇಳೆ ಸೂರಜ್ ಸಿಂಗ್‌ಗೆ ಟ್ರೈ ಮಾಡಬಹುದು ಎನ್ನೋ ರೀತಿಯಲ್ಲಿ ಚರ್ಚೆ ಆಗಿದೆ.
ಸಮಯ ಕಳೆಯುತ್ತಿರುವ ಜೋಡಿ
ಈಗ ರಾಶಿಕಾ ಶೆಟ್ಟಿ ಹಾಗೂ ಸೂರಜ್ ಸಿಂಗ್ ಅವರು ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ, ಇವರಿಬ್ಬರು ಒಟ್ಟಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇನ್ನು ರಾಶಿಕಾಗೆ ಸೂರಜ್ ಸ್ವೀಟ್ ಕೂಡ ತಿನಿಸಿದ್ದಾರೆ. ಇವರಿಬ್ಬರು ಸಾಕಷ್ಟು ವಿಷಯಗಳನ್ನು ಮಾತನಾಡುತ್ತಿದ್ದಾರೆ. ಇಡೀ ಮನೆಯಲ್ಲಿ ರಾಶಿಕಾ ಚೆನ್ನಾಗಿದ್ದಾರೆ ಎಂದು ಅವರಿಗೆ ಸೂರಜ್ ರೋಸ್ ಕೂಡ ಕೊಟ್ಟಿದ್ದರು.
ಗಿಲ್ಲಿ ನಟನಿಗೆ ರಾಖಿ ಕಟ್ಟಿದ್ರು
ಈಗ ರಾಶಿಕಾ ಶೆಟ್ಟಿ, ಸೂರಜ್ ಅವರದ್ದು ಶುರು ಆಯ್ತು ಎಂದು ಉಳಿದವರು ಇವರ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಈ ಮನೆಯಲ್ಲಿ ಮುಂದೆ ಏನೇನು ಆಗುವುದೋ ಏನೋ! ಅಂದಹಾಗೆ ಕಾವ್ಯ ಅವರಂತೂ ಗಿಲ್ಲಿ ನಟನಿಗೆ ರಾಖಿ ಕೂಡ ಕಟ್ಟಿದ್ದರು. ರಷಾ ಎಂಟ್ರಿ ಕೊಟ್ಟಿರೋದಿಕ್ಕೆ ಈ ಮನೆಯ ಆಟ ಬದಲಾಗಿದೆ.
ಸೂರಜ್ ಸಿಂಗ್ ಹೇಗೆ ಆಡುತ್ತಾರೆ?
ಇನ್ನು ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್ ಸಿಂಗ್ ಹೇಗೆ ಆಡುತ್ತಾರೆ? ಮುಂದಿನ ದಿನಗಳಲ್ಲಿ ಆಟ ಯಾವ ಸ್ವರೂಪ ಪಡೆಯಲಿದೆ ಎಂಬ ಕುತೂಹಲ ಶುರುವಾಗಿದೆ. ಈಗಾಗಲೇ ಆರ್‌ಜೆ ಅಮಿತ್, ಕರಿಬಸಪ್ಪ, ಸತೀಶ್ ಕ್ಯಾಡಬಮ್ಸ್, ಮಂಜುಭಾಷಿಣಿ, ಅಶ್ವಿನಿ ಎಸ್ ಎನ್ ಅವರು ಮನೆಯಿಂದ ಔಟ್ ಆಗಿದ್ದಾರೆ.