- Home
- Entertainment
- TV Talk
- BBK 12: ಇಷ್ಟು ಚಿಕ್ಕ ವಯಸ್ಸಿಗೆ ತುಳುನಾಡಿನ ರಕ್ಷಿತಾ ಶೆಟ್ಟಿ ಮಾಡಿದ ಸಾಧನೆ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ
BBK 12: ಇಷ್ಟು ಚಿಕ್ಕ ವಯಸ್ಸಿಗೆ ತುಳುನಾಡಿನ ರಕ್ಷಿತಾ ಶೆಟ್ಟಿ ಮಾಡಿದ ಸಾಧನೆ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ
Bigg Boss Kannada 12: ರಕ್ಷಿತಾ ಶೆಟ್ಟಿ ಮಂಗಳೂರಿನವರು. ಮಂಗಳೂರಿನಲ್ಲಿ ಹುಟ್ಟಿದ್ದರೂ ಕೂಡ, ಮುಂಬೈನಲ್ಲಿ ಬೆಳೆದರು. ಅಜ್ಜಿ ಮನೆ ಕರ್ನಾಟಕದಲ್ಲಿದೆ, ಆದರೆ ಕೊರೊನಾ ಟೈಮ್‌ನಿಂದ ವಿಡಿಯೋ ಮಾಡೋ ಸಲುವಾಗಿ ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಹೀಗಾಗಿ ಅವರು ತುಳು, ಕನ್ನಡವನ್ನು ಅರ್ಧಂಬರ್ಧ ಮಾತನಾಡೋದುಂಟು.
15

Image Credit : bbk rakshita shetty instagram
ಶಿಕ್ಷಣ ಏನು?
ರಕ್ಷಿತಾ ಶೆಟ್ಟಿ ಅವರು ಬಿಬಿಎಂ ಓದಿದ್ದಾರೆ. ರಾಷ್ಟ್ರೀಯ ಕ್ರೀಡಾಪಟು ಕೂಡ ಆಗಿದ್ದರು. ಈಗ ಕ್ರೀಡೆ ಬಿಟ್ಟೆ.
25
Image Credit : bbk rakshita shetty instagram
ಬಲೆ ಬಲೆ ರಕ್ಷಿತಾ
ತುಳುನಾಡಿನಲ್ಲಿ ಬಲೆ ಬಲೆ ಎನ್ನುವುದು ಒಂದು ಎಮೋಶನಲ್ ಶಬ್ದ. ಹೀಗಾಗಿ ರಕ್ಷಿತಾ ಶೆಟ್ಟಿ ಅವರು Vlogs ನಲಿ ಬಲೆ ಬಲೆ ಎನ್ನುವ ಪದ ಬಳಸಿದರು. ಹೀಗಾಗಿ ರಕ್ಷಿತಾ ಬಲೆ ಬಲೆ ಎಂದು ಫೇಮಸ್ ಆದರು.
35
Image Credit : bbk rakshita shetty instagram
ಕನ್ನಡ ಯಾಕೆ ಸ್ಪಷ್ಟವಾಗಿ ಬರೋದಿಲ್ಲ?
ಮುಂಬೈನ ಮನೆಯಲ್ಲಿಯೂ ರಕ್ಷಿತಾ ಅವರ ಅಪ್ಪ-ಅಮ್ಮ ತುಳು ಮಾತನಾಡ್ತಾರೆ. ಹೀಗಾಗಿ ರಕ್ಷಿತಾಗೆ ಕನ್ನಡ ಮಾತನಾಡೋಕೆ ಯಾರೂ ಇರಲಿಲ್ಲ. ಆದ್ದರಿಂದ ಅವರು ವಿಡಿಯೋ ನೋಡಿ ಕನ್ನಡ ಕಲಿತರು.
45
Image Credit : bbk rakshita shetty instagram
ಟ್ರೋಲ್ ಆಗುತ್ತವೆ
ಎಡಿಟ್ ಮಾಡದೆ ರಕ್ಷಿತಾ ಅವರು ವಿಡಿಯೋ ಅಪ್‌ಲೋಡ್ ಮಾಡುತ್ತಾರೆ. ಇದರಿಂದ ಟ್ರೋಲ್ ಆಗುತ್ತಾರೆ. “ನನಗೆ ಟ್ರೋಲರ್ಸ್ ಬೇಕು, ಟ್ರೋಲರ್ಸ್‌ಗಳಿಗೆ ನಾನು ಬೇಕು. ಆದರೆ ಇಲ್ಲದೆ ಇರೋ ವಿಷಯ ಹೇಳಿದರೆ ಬೇಸರ ಆಗುತ್ತದೆ” ಎಂದು ಅವರು ಹೇಳಿದ್ದಾರೆ.
55
Image Credit : bbk rakshita shetty instagram
ಫ್ಲಾಟ್ ಖರೀದಿ
ಅಂದಹಾಗೆ ಮುಂಬೈನಲ್ಲಿ ರಕ್ಷಿತಾ ಶೆಟ್ಟಿ ಅವರು ಒಂದು ಫ್ಲಾಟ್ ಖರೀದಿ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಫ್ಲಾಟ್ ಖರೀದಿ ಮಾಡಿರೋದು ದೊಡ್ಡ ವಿಷಯವೇನಿಲ್ಲ.
Latest Videos