MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • BBK 12 Elimination: ಮೊದಲ ವಾರ ಎಲಿಮಿನೇಶನ್‌ನಲ್ಲಿ ಹೊರಗಡೆ ಬರೋ ಸ್ಪರ್ಧಿಗಳು ಯಾರು?

BBK 12 Elimination: ಮೊದಲ ವಾರ ಎಲಿಮಿನೇಶನ್‌ನಲ್ಲಿ ಹೊರಗಡೆ ಬರೋ ಸ್ಪರ್ಧಿಗಳು ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮೊದಲ ವಾರ ಯಾರು ಎಲಿಮಿನೇಟ್‌ ಆಗ್ತಾರೆ ಎಂದು ತಿಳಿದುಕೊಳ್ಳಲು ಇನ್ನು ಒಂದು ವಾರ ಇದೆ. ಈಗಾಗಲೇ ಎಲಿಮಿನೇಶನ್‌ಗೆ ಕೆಲ ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಹಾಗಾದರೆ ಹೊರಬೀಳೋದು ಯಾರು? 

2 Min read
Author : Padmashree Bhat
Published : Oct 05 2025, 12:06 AM IST
Share this Photo Gallery
  • FB
  • TW
  • Linkdin
  • Whatsapp
15
ಯಾರು ನಾಮಿನೇಟ್‌ ಆಗಿರೋದು?
Image Credit : colors kannada facebook

ಯಾರು ನಾಮಿನೇಟ್‌ ಆಗಿರೋದು?

ಈ ವಾರ ಆರ್‌ಜೆ ಅಮಿತ್‌ ಹಾಗೂ ಕರಿಬಸಪ್ಪ, ಧನುಷ್‌ ಗೌಡ, ಮಲ್ಲಮ್ಮ, ಗಿಲ್ಲಿ ನಟ ಹಾಗೂ ಕಾವ್ಯ ಶೈವ, ಅಭಿಷೇಕ್‌ ಶ್ರೀಕಾಂತ್‌-ಅಶ್ವಿನಿ ಅವರು ನಾಮಿನೇಟ್‌ ಆಗಿದ್ದರು.ಆ ಆದರೆ ಮಲ್ಲಮ್ಮ ತಮ್ಮ ಮುಗ್ಧತೆ, ಆಟದ ವೈಖರಿಯಿಂದ ವೀಕ್ಷಕರ ಮನಸ್ಸು ಗೆದ್ದು ಫಸ್ಟ್‌ ಸೇಫ್‌ ಆದ ಅಭ್ಯರ್ಥಿ ಎಂದು ಕಿಚ್ಚ ಸುದೀಪ್‌ ಅವರು ಹೇಳಿದ್ದರು. ಮಲ್ಲಮ್ಮ ಕೂಡ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

25
ಮೊದಲೇ ಸುಳಿವು ಕೊಟ್ಟಿದ್ದರು
Image Credit : colors kannada facebook

ಮೊದಲೇ ಸುಳಿವು ಕೊಟ್ಟಿದ್ದರು

ಕಿಚ್ಚ ಸುದೀಪ್‌ ಅವರು ಶೋ ಶುರುವಾಗುವ ಮುಂಚೆಯೇ ಒಂದು ಸುಳಿವು ನೀಡಿದ್ದರು. “ಈ ಸೀಸನ್‌ ಕಳೆದ ಸೀಸನ್‌ ಥರ ಇರೋದಿಲ್ಲ, ಏನೂ ಬೇಕಿದ್ರೂ ಆಗಬಹುದು, ಎರಡು ಫಿನಾಲೆ ಕೂಡ ಇರತ್ತಂತೆ ಹೇಳಲಾಗಿದೆ. ಇಷ್ಟು ಸೀಸನ್‌ಗಳದ್ದೇ ಒಂದು ಲೆಕ್ಕ, ಈ ಸೀಸನ್‌ ಇನ್ನೊಂದು ಲೆಕ್ಕ. ನಿಮ್ಮನ್ನು ರಿಪ್ಲೇಸ್‌ ಮಾಡೋದಿಕ್ಕೆ ಇನ್ನೊಂದು ಬ್ಯಾಚ್‌ ಇರಬಹುದು” ಎಂದು ಅವರು ಹೇಳಿದ್ದರು.

Related Articles

Related image1
BBK 12: ಆಟವಾಡ್ಲಿಲ್ಲ, ಮನರಂಜನೆ ಕೊಡ್ಲಿಲ್ಲ: ಹಾಗಿದ್ರೆ ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?
Related image2
BBK 12: ಹೆಣ್ಣು ಹೂವಿನ ಥರ ಇರಬೇಕು, ಚಪ್ಪಡಿ ಕಲ್ಲಿನ ಥರ ಇದ್ರೆ ಹೇಗೆ ಮುದ್ದು ಮಾಡೋದು?: ಕಾಕ್ರೋಚ್‌ ಸುಧಿ
35
ವೈಲ್ಡ್‌ಕಾರ್ಡ್‌ ಎಂಟ್ರಿ
Image Credit : colors kannada facebook

ವೈಲ್ಡ್‌ಕಾರ್ಡ್‌ ಎಂಟ್ರಿ

ಅಂದರೆ ಈ ಸ್ಪರ್ಧಿಗಳಲ್ಲಿ ಕೆಲವರು ಬೇಗ ಎಲಿಮಿನೇಟ್‌ ಆಗಿ, ಇವರ ಜಾಗಕ್ಕೆ ಬೇರೆಯವರು ಬರ್ತಾರೆ ಎಂದು ಹೇಳಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವಂತೆ ಆರು ಜನರು ಎಲಿಮಿನೇಟ್‌ ಆಗಿ, ನಾಲ್ವರು ವೈಲ್ಡ್‌ಕಾರ್ಡ್‌ ಎಂಟ್ರಿ ಆಗಲಿದೆ ಎನ್ನಲಾಗುತ್ತಿದೆ. ಈ ಟೀಂ ಬಿಗ್‌ ಬಾಸ್‌ ಮನೆಯಲ್ಲಿ ಆಟ ಆಡೋದನ್ನು ನೋಡಿದರೆ ಆದಷ್ಟು ಬೇಗ ರಿಪ್ಲೇಸ್‌ಮೆಂಟ್‌ ಆಗಲೂಬಹುದು. ಪ್ರತಿ ಸೀಸನ್‌ನಲ್ಲಿ ಆಟ ಶುರುವಾಗಿ ಐವತ್ತು ದಿನಕ್ಕೆ ಇಬ್ಬರು ವೈಲ್ಡ್‌ಕಾರ್ಡ್‌ ಎಂಟ್ರಿ ಪಡೆಯುತ್ತಿದ್ದರು. ಈ ಬಾರಿ ಬೇಗ ಎಂಟ್ರಿ ಸಿಗಲೂಬಹುದು.

45
ಯಾರು ಎಲಿಮಿನೇಟ್‌ ಆಗ್ತಿರೋದು?
Image Credit : colors kannada facebook

ಯಾರು ಎಲಿಮಿನೇಟ್‌ ಆಗ್ತಿರೋದು?

ಅಂದಹಾಗೆ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್‌, ಅಶ್ವಿನಿ ಹಾಗೂ ಅಭಿಷೇಕ್‌ ಜೋಡಿ ಮಧ್ಯೆ ಒಂದು ಜೋಡಿ ಎಲಿಮಿನೇಟ್‌ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಗುಸುಗುಸು ಶುರುವಾಗಿದೆ. ಕರಿಬಸಪ್ಪ ಅವರು ಇಂಟರ್‌ನ್ಯಾಶನಲ್‌ ಬಾಡಿ ಬಿಲ್ಡರ್‌. ಅಮಿತ್‌ ಅವರು ಆರ್‌ಜೆ ಆಗಿ ಕೆಲಸ ಮಾಡಿದ್ದರು.

55
ಎಲಿಮಿನೇಟ್‌ ಆದವರು ಯಾರು?
Image Credit : colors kannada facebook

ಎಲಿಮಿನೇಟ್‌ ಆದವರು ಯಾರು?

ಕರಿಬಸಪ್ಪ ಅವರು ಬಿಗ್‌ ಬಾಸ್‌ ಮನೆಯಲ್ಲಿ ಒಂದಿಷ್ಟು ಫಿಲಾಸಫಿ ಹೇಳಿ ಕಾಣಿಸಿಕೊಂಡಿದ್ದರು. ಅಮಿತ್‌ ಅವರು ಮಾತನಾಡಿದ್ದು ತುಂಬ ಕಡಿಮೆಯೋ ಅಥವಾ ಒಂದೂವರೆ ಗಂಟೆಯ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೋ ಎಂದು ಅವರೇ ಹೇಳಬೇಕಿದೆ.  ಅಂದಹಾಗೆ ಅಶ್ವಿನಿ ಹಾಗೂ ಅಭಿಷೇಕ್‌ ಶ್ರೀಕಾಂತ್‌ ಅವರು ಕೂಡ ಅಷ್ಟು ಕಾಣಿಸಿಕೊಂಡಿಲ್ಲ. ಈ ಜೋಡಿ ಮಧ್ಯೆ ಎಲಿಮಿನೇಶನ್‌ ನಡೆದಿದೆಯಂತೆ. ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ಇವರಿಬ್ಬರು ಎಲಿಮಿನೇಟ್‌ ಆಗಿರೋದು ಹೌದೋ ಇಲ್ಲವೋ ಎಂದು ಗೊತ್ತಾಗುವುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ
Recommended image2
ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ: ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್
Recommended image3
Bigg Boss ಅಶ್ವಿನಿ ಗೌಡ - ಗಿಲ್ಲಿ ನಟ ಮಂಡ್ಯದಲ್ಲಿ ಮುಖಾಮುಖಿ! ಈ ಬಾರಿ ಇಬ್ಬರ ನಡುವೆ ರೋಚಕ ಟ್ವಿಸ್ಟ್​
Related Stories
Recommended image1
BBK 12: ಆಟವಾಡ್ಲಿಲ್ಲ, ಮನರಂಜನೆ ಕೊಡ್ಲಿಲ್ಲ: ಹಾಗಿದ್ರೆ ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?
Recommended image2
BBK 12: ಹೆಣ್ಣು ಹೂವಿನ ಥರ ಇರಬೇಕು, ಚಪ್ಪಡಿ ಕಲ್ಲಿನ ಥರ ಇದ್ರೆ ಹೇಗೆ ಮುದ್ದು ಮಾಡೋದು?: ಕಾಕ್ರೋಚ್‌ ಸುಧಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved