- Home
- Entertainment
- TV Talk
- BBK 12: ಬಿಗ್ ಬಾಸ್ ಮನೆಯಲ್ಲಿ ಬೆಲೆಬಾಳುವ ವಜ್ರದ ಉಂಗುರ ಕಳೆದುಕೊಂಡ ಅಶ್ವಿನಿ ಗೌಡ; ಕಳ್ಳ ಯಾರು?
BBK 12: ಬಿಗ್ ಬಾಸ್ ಮನೆಯಲ್ಲಿ ಬೆಲೆಬಾಳುವ ವಜ್ರದ ಉಂಗುರ ಕಳೆದುಕೊಂಡ ಅಶ್ವಿನಿ ಗೌಡ; ಕಳ್ಳ ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಅವರು ವಜ್ರದ ಉಂಗುರವನ್ನು ಕಳೆದುಕೊಂಡಿದ್ದಾರೆ. ಕನ್ನಡ ಪರ ಹೋರಾಟ ಮಾಡುವ ಅಶ್ವಿನಿ ಗೌಡ ಅವರು 150 ಮನೆಗಳನ್ನು ಬಾಡಿಗೆಗೆ ನೀಡಿದ್ದಾರಂತೆ. ಕುಟುಂಬದಿಂದ ಅವರು ಉದ್ಯಮವನ್ನು ಕೂಡ ಹೊಂದಿದ್ದಾರೆ.

ಅಸುರ ಹಾಗೂ ಪ್ರಜೆಗಳು ಟಾಸ್ಕ್
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಸುರ ಹಾಗೂ ಪ್ರಜೆಗಳು ಟಾಸ್ಕ್ ನಡೆಯುತ್ತಿದೆ. ಕಾಕ್ರೋಚ್ ಸುಧಿ ಅವರು ಅಸುರನ ವೇಷ ಹಾಕಿ ಮೆರೆಯುತ್ತಿದ್ದಾರೆ, ಪ್ರಜೆಗಳು ಸಂಪೂರ್ಣವಾಗಿ ಅವರ ಮಾತನ್ನೂ ಕೇಳದೆ, ಒಟ್ಟಿನಲ್ಲಿ ಕಾಟ ಕೊಡುತ್ತಿದ್ದಾರೆ, ಹೀಗಿರುವಾಗ ಅಶ್ವಿನಿ ಗೌಡ ಅವರ ವಜ್ರದುಂಗುರ ಕಳೆದು ಹೋಗಿದೆಯಂತೆ.
ಅಸುರರ ಥರ ಮೇಕಪ್ ಮಾಡಿಸಿಕೊಳ್ಳಬೇಕು
ಅಸುರ ಟಾಸ್ಕ್‌ನಲ್ಲಿ ಎಲ್ಲರೂ ಅಸುರರ ಥರ ಮೇಕಪ್ ಮಾಡಿಸಿಕೊಳ್ಳಬೇಕು, ಇದಕ್ಕೆ ಎಲ್ಲರೂ ಒಪ್ಪಿಲ್ಲ. ಕಾವ್ಯ ಶೈವ, ಗಿಲ್ಲಿ ನಟ ಸೇರಿಕೊಂಡು ಮೇಕಪ್ ಐಟಮ್‌ನ್ನು ಖಾಲಿ ಮಾಡಿದ್ದಾರಂತೆ. ಹೀಗೆಂದು ಅಶ್ವಿನಿ ಗೌಡ ಅವರು ಆರೋಪ ಮಾಡಿದ್ದರು.
ವಜ್ರದ ಉಂಗುರ ಕಳೆದಿದ್ದು ಸತ್ಯವೇ?
“ನನ್ನ ವಜ್ರದ ಉಂಗುರ ಕಳೆದು ಹೋಗಿದೆ. ನಾನು ನಿಜವಾಗಿಯೂ ಸತ್ಯ ಹೇಳ್ತಿದೀನಿ, ಇದನ್ನು ಯಾರೂ ಕೂಡ ಅರ್ಥ ಮಾಡಿಕೊಳ್ತಿಲ್ಲ” ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ಇದು ಸತ್ಯವೋ? ಸುಳ್ಳೋ ಎನ್ನೋದು ಬಯಲಾಗಬೇಕಿದೆ.
ಆಟಕ್ಕೋಸ್ಕರ ತಂತ್ರವೇ?
ಆಗ ಕಾವ್ಯ ಶೈವ ಹಾಗೂ ಗಿಲ್ಲಿ ನಟ, “ನಾವು ಆರ್ಟಿಫಿಶಿಯಲ್ ಉಂಗುರ ಎಂದುಕೊಂಡೆವು. ನೀವು ಕೂಡ ಆಟಕ್ಕೋಸ್ಕರ ನಾಟಕ ಮಾಡ್ತಿರಬಹುದು” ಎಂದು ಹೇಳಿದ್ದಾರೆ. ಇವರು ಹೇಳಿದಂತೆ ಇದು ಕೂಡ ಅಶ್ವಿನಿ ಗೌಡ ಅವರ ತಂತ್ರ ಇರಬಹುದಾ?
ಸತ್ಯ ಏನು?
ಅಶ್ವಿನಿ ಗೌಡ ಅವರು “ನಾನು ಆರ್ಟಿಫಿಶಿಯಲ್ ಹಾಕೋದಿಲ್ಲ, ವಜ್ರದ ಉಂಗುರವನ್ನೇ ನಾನು ಹಾಕೋದು. ನನಗೆ ಉಂಗುರ ಸಿಕ್ಕಿಲ್ಲ ಅಂದರೆ ಮಾತ್ರ ಎಲ್ಲರ ಗ್ರಹಚಾರ ಬಿಡಿಸ್ತೀನಿ” ಎಂದು ಹೇಳಿದ್ದರು. ಒಟ್ಟಿನಲ್ಲಿ ಈ ವಜ್ರದ ಉಂಗುರದ ಸತ್ಯ ವೀಕೆಂಡ್ ಎಪಿಸೋಡ್‌ನಲ್ಲಿ ಕಾದು ನೋಡಬೇಕಿದೆ.