- Home
- Entertainment
- TV Talk
- BBK 12: ಕಿಚ್ಚು ಪದ ಬರೆಯೋಕೆ ಬರಲಿಲ್ಲ: ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡಗೆ ಕನ್ನಡ ಬರಲ್ವಾ?
BBK 12: ಕಿಚ್ಚು ಪದ ಬರೆಯೋಕೆ ಬರಲಿಲ್ಲ: ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡಗೆ ಕನ್ನಡ ಬರಲ್ವಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಅವರು ಮ್ಯೂಟೆಂಟ್ ರಘುಗೆ ಕನ್ನಡದಲ್ಲಿ ಮಾತನಾಡಿ ಎಂದು ವಾರ್ನ್ ಮಾಡಿದ್ದರು. ಆದರೆ ಅವರು ಇದೇ ಮನೆಯಲ್ಲಿ ನನಗೆ ಕನ್ನಡ ಬರಲ್ಲ ಎಂದು ಹೇಳಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ರಘು ಇಂಗ್ಲಿಷ್‌ನಲ್ಲಿ ಜಾಸ್ತಿ ಮಾತಾಡಿದ್ರು
ಮ್ಯೂಟೆಂಟ್ ರಘು ಅವರು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಆ ವೇಳೆ ಅವರು ಅಶ್ವಿನಿ ಗೌಡ, ಜಾಹ್ನವಿ ವಿರುದ್ಧ ಕೂಗಾಡಿದ್ದರು. ರಕ್ಷಿತಾ ಶೆಟ್ಟಿ ವಿರುದ್ಧ ಫೈಟ್ ಮಾಡಿದ್ರಿ, ಬಾಯಿಗೆ ಬಂದ ಹಾಗೆ ಮಾತನಾಡಿದ್ರಿ ಎಂದು ಅವರು ಕೂಗಾಡಿದ್ದರು. ಟಾಸ್ಕ್ ಮಾಡುವಾಗಲೂ ಅವರು ಇಂಗ್ಲಿಷ್‌ನಲ್ಲಿಯೇ ಜಾಸ್ತಿ ಪದಗಳನ್ನು ಬಳಸಿ ಮಾತನಾಡಿದ್ದರು.
ಕನ್ನಡದಲ್ಲಿ ಹೆಚ್ಚು ಮಾತಾಡಬೇಕು
ಮ್ಯೂಟೆಂಟ್ ರಘು ಅವರು ಇಂಗ್ಲಿಷ್‌ನಲ್ಲಿ ಹೆಚ್ಚು ಮಾತನಾಡಿದ್ದಕ್ಕೆ ಅಶ್ವಿನಿ ಗೌಡ ಅವರಿಗೆ ಸಿಟ್ಟು ಬಂದಿದೆ. “ನೀವು ಕನ್ನಡದಲ್ಲಿ ಜಾಸ್ತಿ ಮಾತನಾಡಬೇಕು, ಬಿಗ್ ಬಾಸ್ ರೂಲ್ಸ್ ಗೊತ್ತಿಲ್ವಾ? ಅಗ್ರಿಮೆಂಟ್ ಓದಿಲ್ವಾ?” ಎಂದು ಅಶ್ವಿನಿ ಅವರು ಮ್ಯೂಟೆಂಟ್ ರಘುಗೆ ಎಚ್ಚರಿಕೆ ಕೊಟ್ಟಿದ್ದರು.
80% ಕನ್ನಡ ಮಾತನಾಡಿ
ಆಗ ಗಿಲ್ಲಿ ನಟ, ಕಾವ್ಯ ಶೈವ ಕೂಡ ಬಂದು, “ನೀವು ಕೂಡ ಕಂಪ್ಲೀಟ್ ಕನ್ನಡದಲ್ಲಿಯೇ ಮಾತನಾಡ್ತೀರಾ?” ಎಂದು ಅಶ್ವಿನಿ ಆಡಿದ ಇಂಗ್ಲಿಷ್ ಪದಗಳನ್ನು ಮತ್ತೆ ಉಚ್ಛಾರ ಮಾಡಿ ಪ್ರಶ್ನೆ ಮಾಡಿದ್ದರು. ಆಗ ಅಶ್ವಿನಿ ಆದಷ್ಟು ಇಂಗ್ಲಿಷ್ ಮಾತನಾಡಬೇಡಿ, 80% ಕನ್ನಡ ಮಾತನಾಡಿ ಎಂದಿದ್ದಾರೆ.
ಕನ್ನಡ ಅಂತ ಬಂದಾಗ ಹೋರಾಟ ಮಾಡುವೆ
ಇನ್ನೊಮ್ಮೆ ಅವರು ಮ್ಯೂಟೆಂಟ್ ರಘು ಎಷ್ಟೇ ಕೆಜಿ ತೂಕ ಇರಲಿ, 100kg ಇರಲೀ, 200kg ತೂಕ ಇರಲೀ, ಕನ್ನಡದ ವಿಷಯ ಬಂದಾಗ ನನ್ನನ್ನು ಯಾರು ತಡೆಯೋಕೆ ಆಗೋದಿಲ್ಲ, ನಾನು ಸುಮ್ಮನೆ ಇರೋದಿಲ್ಲ ಎಂದು ಅಶ್ವಿನಿ ಗೌಡ ಅವರು ಗುಡುಗಿದ್ದರು.
ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದೇನೆ
ಆದರೆ ಕೆಲವೇ ದಿನಗಳ ಹಿಂದೆ ಅಶ್ವಿನಿ ಗೌಡ ಅವರು ಕಾಕ್ರೋಚ್ ಸುಧಿ ಜೊತೆ ಮಾತನಾಡುವಾಗ ನನಗೆ ಕನ್ನಡ ಬರೋದಿಲ್ಲ ಎಂದಿದ್ದಾರೆ. ಕಾಕ್ರೋಚ್ ಸುಧಿ ಅವರು ಕಿಚ್ಚು ಎಂಬ ಕನ್ನಡ ಪದ ಬರೆಯುವಾಗ, ಹೀಗೆ ಬರೆಯೋದು ಸರಿಯೇ ಎಂದು ಕೇಳಿದ್ದಾರೆ, ಆಗ ಅಶ್ವಿನಿ ಗೌಡ ಅವರು, “ನನಗೆ ಕನ್ನಡ ಬರಲ್ಲ, ನಾನು ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದೇನೆ” ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ರಕ್ಷಿತಾ ಶೆಟ್ಟಿಗೆ ನಿಜಕ್ಕೂ ಕನ್ನಡ ಬರಲ್ವಾ?
ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ಅರ್ಧಂಬರ್ಧ ಕನ್ನಡ ಪದಗಳನ್ನು ಮಾತನಾಡುತ್ತಾರೆ ಎಂಬ ದೂರು ಇತ್ತು. ಅವರು ಕನ್ನಡ ಬಂದರೂ ಡ್ರಾಮಾ ಮಾಡ್ತಾರೆ ಎಂದು ಧ್ರುವಂತ್ ಆರೋಪ ಮಾಡಿದ್ದರು.