ಭಾಗ್ಯಲಕ್ಷ್ಮಿ ಧಾರಾವಾಹಿ ಪೂಜಾ ಆಗಿ ಎಂಟ್ರಿ ಕೊಡಲಿದ್ದಾರೆ ಅವನು ಮತ್ತು ಶ್ರಾವಣಿ ನಟಿ
ಭಾಗ್ಯಲಕ್ಷ್ಮಿ ಧಾರಾವಾಹಿಯ ಪೂಜಾ ಪಾತ್ರದಿಂದ ಇತ್ತೀಚೆಗೆ ನಟಿ ಆಶಾ ಅಯ್ಯನಾರ್ ಹೊರ ನಡೆದಿದ್ದರು. ಆಶಾ ಬೇರೆ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಪೂಜಾ ಪಾತ್ರಕ್ಕೆ ಬೇರೊಬ್ಬ ನಟಿ ಎಂಟ್ರಿ ಕೊಡಲು ರೆಡಿಯಾಗಿದ್ದು, ಇವರು ಈ ಹಿಂದೆ ಅವನು ಮತ್ತು ಶ್ರಾವಣಿಯಲ್ಲಿ ನಟಿಸುತ್ತಿದ್ದರು.

ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಇತ್ತೀಚೆಗೆ ಪೂಜಾ ಪಾತ್ರಧಾರಿ ಆಶಾ ಅಯ್ಯನಾರ್ ಹೊರ ನಡೆದಿದ್ದರು. ಅವರು ಸೀರಿಯಲ್ ಬಿಡೋದಕ್ಕೆ ಕಾರಣ ತಿಳಿಸಿರಲಿಲ್ಲ. ಆದರೆ ಬೇರೆ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಅವರ ಸ್ಥಾನಕ್ಕೆ ಮತ್ತೊಬ್ಬ ನಟಿ ಬಂದಿದ್ದಾರೆ.
ಪೂಜ ಪಾತ್ರ ಮಾಡೋದು ಯಾರು?
ಆಶಾ ಅಯ್ಯನಾರ್ ತಮ್ಮ ಗುಡ್ ಬೈ ಪತ್ರದಲ್ಲಿ ಮುಂದಿನ ಪೂಜಾ ಪಾತ್ರಧಾರಿಗೂ ಇದೇ ಪ್ರೀತಿ ಕೊಡಿ ಎಂದಿದ್ದರು. ಇದೀಗ ಪೂಜಾ ಪಾತ್ರಕ್ಕೆ ಅವನು ಮತ್ತು ಶ್ರಾವಣಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅವನು ಮತ್ತು ಶ್ರಾವಣಿ ನಟಿ ಹರ್ಷಿತಾ ರಾಮಚಂದ್ರ ಇನ್ನು ಮುಂದೆ ಪೂಜಾ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಯಾರು ಈ ಹರ್ಷಿತಾ ರಾಮಚಂದ್ರ
ಹರ್ಷಿತಾ ಮೂಲತಃ ತುಮಕೂರಿನ ಗುಬ್ಬಿ ಮೂಲದವರು. ನಟನೆಯ ಕುಟುಂಬದಿಂದ ಬಂದಿರದಿದ್ದರೂ, ಬಾಲ್ಯದಿಂದಲೇ ಟಿವಿಯಲ್ಲಿ ನಟಿಸುವ ಕನಸು ಇವರದ್ದಾಗಿದ್ದು, ಹಾಗಾಗಿ ಆಡಿಶನ್ ಕೊಡುತ್ತಿದ್ದರು. ಆರಂಭದಲ್ಲಿ ಇವರು ಕನ್ನಡತಿ ಧಾರಾವಾಹಿಯಲ್ಲಿ ಒಂದಷ್ಟು ಎಪಿಸೋಡ್ ಗಳಲ್ಲಿ ನಟಿಸಿದ್ದರು.
ಅವನು ಮತ್ತು ಶ್ರಾವಣಿ
ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ಅಭಿಯ ತಂಗಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದರು. ಆ ಸೀರಿಯಲ್ ಮುಗಿದ ಬಳಿಕ ಸಿನಿಮಾ ಆಫರ್ ಸಿಕ್ಕಿತು.
ಜಂಗಲ್ ಮಂಗಲ್
ಹರ್ಷಿತಾ ಈಗಾಗಲೇ ಸಿನಿಮಾದಲ್ಲೂ ನಟಿಸಿದ್ದು, ರಕ್ಷಿತ್ ಕುಮಾರ್ ನಿರ್ದೇಶನ ಮಾಡಿರುವ ಹಾಗೂ ಯಶ್ ಶೆಟ್ಟಿ ನಾಯಕನಾಗಿ ನಟಿಸಿರುವ ಜಂಗಲ್ ಮಂಗಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ತೆರೆಕಂಡು, ಜನ ಇವರ ಪಾತ್ರವನ್ನು ಮೆಚ್ಚಿದ್ದರು. ಈ ಸಿನಿಮಾದಿಂದಾಗಿ ನಟಿಗೆ ಮತ್ತಷ್ಟು ಅವಕಾಶಗಳು ಬರುತ್ತಿವೆಯಂತೆ.
ವೃತ್ತಿಯಲ್ಲಿ ಇಂಜಿನಿಯರ್
ಇಂಜಿನಿಯರಿಂಗ್ ಓದಿಕೊಂಡು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷಿತಾಗೆ, ಸಿನಿಮಾ, ಸೀರಿಯಲ್ ಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರಲು ಆರಂಭಿಸಿದ ನಂತರ ಐಟಿ ಉದ್ಯೋಗ ಬಿಟ್ಟಿದ್ದಾರೆ. ಇದೀಗ ಭಾಗ್ಯಲಕ್ಷ್ಮೀಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.