- Home
- Entertainment
- TV Talk
- 2 ಕೋಟಿ ಕೊಟ್ಟು ಶೋನಿಂದ ಹೊರಬಂದ್ರಾ Awez Darbar?, ಮೌನ ಮುರಿದ ಸೋಶಿಯಲ್ ಮೀಡಿಯಾ ಸ್ಟಾರ್
2 ಕೋಟಿ ಕೊಟ್ಟು ಶೋನಿಂದ ಹೊರಬಂದ್ರಾ Awez Darbar?, ಮೌನ ಮುರಿದ ಸೋಶಿಯಲ್ ಮೀಡಿಯಾ ಸ್ಟಾರ್
Bigg Boss latest updates: ಈ ಸೋಶಿಯಲ್ ಮೀಡಿಯಾ ಸ್ಟಾರ್ ಸ್ವಯಂಪ್ರೇರಣೆಯಿಂದ ಶೋನಿಂದ ಹೊರಬಂದಿದ್ದಾರೆ ಮತ್ತು ನಿರ್ಮಾಪಕರಿಗೆ 2 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂಬ ವರದಿಗಳು ಹರಡಲು ಪ್ರಾರಂಭಿಸಿದವು. ಈ ಹಿನ್ನೆಲೆಯಲ್ಲಿ ಸ್ವತಃ ಅವೇಜ್ ದರ್ಬಾರ್ ಇದರ ಸತ್ಯಾಸತ್ಯತೆ ರಿವೀಲ್ ಮಾಡಿದ್ದಾರೆ.

ಕಡಿಮೆ ವೋಟ್
ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 19 ಉತ್ತಮ ಆರಂಭ ಪಡೆದುಕೊಂಡಿದೆ. ಸ್ಪರ್ಧಿಗಳು ತಮ್ಮ ಪವರ್‌ಫುಲ್ ಆಟದೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಇತ್ತೀಚಿನ ವೀಕೆಂಡ್ ಕಾ ವಾರ್ ನಲ್ಲಿ, ಅವೇಜ್ ದರ್ಬಾರ್ ಕಡಿಮೆ ವೋಟ್ ಪಡೆದಿದ್ದಕ್ಕೆ ಶೋನಿಂದ ಎಲಿಮಿನೇಟ್ ಆಗಬೇಕಾಯ್ತು.
ಅಷ್ಟಕ್ಕೂ ನಡೆದಿದ್ದೇನು?
ಆದರೆ ಅವೇಜ್ ದರ್ಬಾರ್ ಶೋನಿಂದ ಹೊರಬರುತ್ತಿದ್ದಂತೆ ಈ ಸೋಶಿಯಲ್ ಮೀಡಿಯಾ ಸ್ಟಾರ್ ಸ್ವಯಂಪ್ರೇರಣೆಯಿಂದ ಶೋನಿಂದ ಹೊರಬಂದಿದ್ದಾರೆ ಮತ್ತು ನಿರ್ಮಾಪಕರಿಗೆ 2 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂಬ ವರದಿಗಳು ಹರಡಲು ಪ್ರಾರಂಭಿಸಿದವು. ಈ ಹಿನ್ನೆಲೆಯಲ್ಲಿ ಸ್ವತಃ ಅವೇಜ್ ದರ್ಬಾರ್ ಇದರ ಸತ್ಯಾಸತ್ಯತೆಯೇನು ಎಂಬುದನ್ನ ರಿವೀಲ್ ಮಾಡಿದ್ದಾರೆ.
ಎಲ್ಲಾ ರೂಮರ್ಸ್
ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಅವೇಜ್ ದರ್ಬಾರ್ ಎಲ್ಲಾ ರೂಮರ್ಸ್ ತಳ್ಳಿಹಾಕಿದರು, "ನಾನು ಎಂದಿಗೂ ಸ್ವಯಂಪ್ರೇರಣೆಯಿಂದ ಕಾರ್ಯಕ್ರಮವನ್ನು ತೊರೆದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಬಿಗ್ ಬಾಸ್ ಬಿಡಲು ಯಾವುದೇ ಹಣವನ್ನು ಪಾವತಿಸಿಲ್ಲ. ಈ ಸುಳ್ಳು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿವೆ" ಎಂದು ಹೇಳಿದರು.
ಸಂಪೂರ್ಣವಾಗಿ ಸುಳ್ಳು
"ನಾನು 50 ಲಕ್ಷ ರೂಪಾಯಿ, 2 ಕೋಟಿ ರೂಪಾಯಿ ಪಾವತಿಸಿದ್ದೇನೆ ಮತ್ತು ಸ್ವಯಂಪ್ರೇರಿತವಾಗಿ ಎಲಿಮಿನೇಟ್ ಆಗಿದ್ದೇನೆ ಎಂದು ಜನರು ಹೇಳುತ್ತಿದ್ದಾರೆ - ಇದೆಲ್ಲವೂ ಸಂಪೂರ್ಣವಾಗಿ ಸುಳ್ಳು. ನಾನು ಏನನ್ನೂ ಪಾವತಿಸಿಲ್ಲ. ಆದರೆ ಎಲಿಮಿನೇಷನ್‌ನಿಂದ ನನಗೆ ಶಾಕ್ ಆಯ್ತು ಎಂದು" ಅವೇಜ್ ದರ್ಬಾರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಿಕ್ಕಿ ಬಿಕ್ಕಿ ಅತ್ತ ತಾಯಿ
ಬಿಗ್ ಬಾಸ್ 19 ರಿಂದ ಎಲಿಮಿನೇಷನ್ ಆದ ಬಗ್ಗೆ ಮಾತನಾಡಿರುವ ಆವಾಜ್ ದರ್ಬಾರ್, "ನಾನು ಬಿಗ್ ಬಾಸ್ 19 ಗೆ ಸಿದ್ಧನಾಗಿರಲಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಬಂದಾಗ ನನಗೆ ಶಾಕ್ ಆಯ್ತು. ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ. ನನ್ನ ಮನೆಗೆ ಬಂದಾಗ ತಾಯಿಯೂ ಅಷ್ಟೇ ಆಘಾತಕ್ಕೊಳಗಾಗಿ ಅಳುತ್ತಿದ್ದರು. ಇಷ್ಟು ಬೇಗ ಎಲಿಮಿನೇಟ್ ಆಗಿದ್ದೇನೆ ಎಂದು ಅವರು ನಂಬಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.
ಕೇವಲ ಒಂದು ಆಟ
ತನ್ನ ಅತ್ತಿಗೆ ತನ್ನನ್ನು ಪ್ರೇರೇಪಿಸಲು ಬಂದ ಅದೇ ವಾರದಲ್ಲಿ ನಿರ್ಮಾಪಕರು ತನ್ನನ್ನು ಎಲಿಮಿನೇಟ್ ಮಾಡಿದ್ದು ಬೇಸರವಾಯಿತು. ಆದರೆ ಯಾರೂ ಏನು ಮಾಡಲು ಸಾಧ್ಯ. ಇದು ಕೇವಲ ಒಂದು ಆಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅವೇಜ್ ದರ್ಬಾರ್.