ಸಕ್ರೆಬೈಲು ಶಾಂತಿ ಸೊಸೆಗೆ 24ರ ಸಂಭ್ರಮ…Meena ರಿಯಲ್ ಅವತಾರ ನೋಡಿ ಫ್ಯಾನ್ಸ್ ಶಾಕ್
Aase Serial Actress: ಆಸೆ ಧಾರಾವಾಹಿಯಲ್ಲಿ ಹೂವು ಮಾರುವ ಮೀನಾ ಪಾತ್ರದಲ್ಲಿ ಭರ್ಜರಿ ಅಭಿನಯ ನೀಡುತ್ತಿರುವ ನಟಿ ಪ್ರಿಯಾಂಕ ಡಿಎಸ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪ್ರಿಯಾಂಕಾ ಅವರು 24ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದು, ಸ್ಪೆಷಲ್ ಬರ್ತ್ ಡೇ ವಿಡಿಯೋ ಶೇರ್ ಮಾಡಿದ್ದಾರೆ.

ಆಸೆ ಸೀರಿಯಲ್
ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಸೆ ಧಾರಾವಾಹಿಯಲ್ಲಿ ನಾಯಕಿ ಮೀನಾ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಡಿಎಸ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಬರ್ತ್ ಡೇ ಹಿನ್ನೆಲೆಯಲ್ಲಿ ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದಾರೆ.
ಪ್ರಿಯಾಂಕಾ ಡಿಎಸ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬೆಡಗಿ ಪ್ರಿಯಾಂಕ (Priyanka DS) ಇಂದು 24ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಬ್ಯಾಕ್ ಲೆಸ್ ಗೌನ್ ಧರಿಸಿ ಪ್ರಿಯಾಂಕಾ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ನಟಿಯ ಬೋಲ್ಡ್ ಲುಕ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಹ್ಯಾಪಿ ಬರ್ತ್ ಡೇ ಟು ಮಿ
ಪ್ರಿಯಾಂಕ ತಮ್ಮ ಬರ್ತ್ ಡೇ ಸ್ಪೆಷಲ್ ವಿಡಿಯೋ ಜೊತೆಗೆ ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ, ನನ್ನ ಪ್ರಯಾಣವು ಬುದ್ಧಿವಂತಿಕೆ ಮತ್ತು ಸಂತೋಷವನ್ನು ಅಪ್ಪಿಕೊಳ್ಳುತ್ತದೆ.... ನನಗೆ ಹುಟ್ಟುಹಬ್ಬದ ಶುಭಾಶಯಗಳು! (A new chapter unfolds, my journey embraces wisdom and joy….happy birthday to me) ಎಂದು ಬರೆದುಕೊಂಡಿದ್ದಾರೆ.
ಸೀರಿಯಲಲ್ಲಿ ಮಾತ್ರ ಸಾವಿತ್ರಿ
ಆಸೆ ಧಾರಾವಾಹಿಯಲ್ಲಿ ಸಕ್ರೆಬೈಲು ಶಾಂತಿಯ ಸೊಸೆಯಾಗಿ ಹೂ ಮಾರುವ ಮೀನಾ ಆಗಿ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಪ್ರಿಯಾಂಕಾ, ಇದೀಗ ಬ್ಯಾಕ್ ಲೆಸ್ ಗೌನಲ್ಲಿ ಸಖತ್ ಬೊಲ್ಡ್ ಆಗಿ ಕಾಣಿಸಿಕೊಂಡಿರುವುದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದು, ಧಾರಾವಾಹಿಯಲ್ಲಿ ಮಾತ್ರ ಸಾವಿತ್ರಿ, ರಿಯಲ್ ಆಗಿ ಹೀಗೆನಾ ಎನ್ನುತ್ತಿದ್ದಾರೆ.
ಇದು ನೀನೇನಾ
ಇನ್ನೊಬ್ಬ ಅಭಿಮಾನಿ, ಅಯ್ಯೋ ಮೀನಾ ನಿನ್ನ ಮೇಲೆ ಬಹಳ ನಂಬಿಕೆ ಇತ್ತು. ನಿಜವಾಗಿಯೂ ಇದು ನೀನೇನಾ ಎಂದಿದ್ದಾರೆ. ಇನ್ನೂ ಕೆಲವರು ತುಂಬಾನೆ ಹಾಟ್ ಎಂದಿದ್ದಾರೆ. ಒಟ್ಟಲ್ಲಿ ಪ್ರಿಯಾಂಕಾ ಲುಕ್ ಮಾತ್ರ ಗಮನ ಸೆಳೆದಿದೆ.ಜೊತೆಗೆ ಅಭಿಮಾನಿಗಳು ನಟಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಪುಣ್ಯವತಿಯಾಗಿ ಎಂಟ್ರಿ
ಇನ್ನು ಪ್ರಿಯಾಂಕ ಬಗ್ಗೆ ಹೇಳೋದಾದರೆ ಕಲರ್ಸ್ ಕನ್ನಡದ ಪುಣ್ಯವತಿ (Punyavathi) ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ಈ ಧಾರಾವಾಹಿಯಲ್ಲಿ ಡ್ಯಾನ್ಸರ್ ಆಗಿ ಇವರು ಕಾಣಿಸಿಕೊಂಡಿದ್ದರು. ಆ ಸೀರಿಯಲ್ ಮುಗಿದ ಬಳಿಕ ಪ್ರಿಯಾಂಕ ಆಸೆ ಧಾರಾವಾಹಿಗೆ ನಾಯಕಿಯಾಗಿ ಆಯ್ಕೆಯಾಗಿದ್ದರು.