- Home
- Entertainment
- TV Talk
- Annayya Serial: ವೀರಭದ್ರ, ಸೀನನ ಕಣ್ಣಮುಚ್ಚಾಲೆಯಾಟ ಬಯಲು… ಮುಂದಿದೆ ಇಬ್ಬರಿಗೂ ಮಾರಿ ಹಬ್ಬ!
Annayya Serial: ವೀರಭದ್ರ, ಸೀನನ ಕಣ್ಣಮುಚ್ಚಾಲೆಯಾಟ ಬಯಲು… ಮುಂದಿದೆ ಇಬ್ಬರಿಗೂ ಮಾರಿ ಹಬ್ಬ!
ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲಕ್ವ ಬಡಿದಂತೆ ನಾಟಕ ಮಾಡುತ್ತಿರುವ ವೀರಭದ್ರ ಪಾರು ಮುಂದೆ ಹಾಗೂ ಪಿಂಕಿ ಜೊತೆ ಲಲ್ಲೆ ಹೊಡೆಯುತ್ತಿರುವ ಸೀನಾ ಮಾವನ ಮುಂದೆ ಸಿಕ್ಕಿ ಬಿದ್ದಿದ್ದಾರೆ. ಇನ್ನು ಮುಂದೆ ಇಬ್ಬರಿಗೂ ಇದೆ ಮಾರಿ ಹಬ್ಬ.

ಅಣ್ಣಯ್ಯ ಸೀರಿಯಲ್
ಜೀ ವಾಹಿನಿಯ ಅಣ್ಣಯ್ಯ ಧಾರಾವಾಹಿ (Annayya serial) ದಿನಕ್ಕೊಂದು ತಿರುವು ಪಡೆಯುತ್ತಾ ಸಾಗುತ್ತಿದೆ. ಈಗಂತೂ ಎರಡು ಕಡೆಗಳಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದ್ದು, ಸತ್ಯ ಬಯಲಾದರೆ ಯಾರಿಗೆ ಉಳಿಗಾಲ ಇಲ್ಲ ಅನ್ನೋದು ಗೊತ್ತಾಗಿದೆ.
ವೀರಭದ್ರನ ಮೋಸದಾಟ
ಒಂದು ಕಡೆ ಶಿವು ಅಮ್ಮ, ಶಿವು ಕೈಯಲ್ಲಿ ಸಿಕ್ಕಿ ಎಲ್ಲಾ ನಾಟಕ ಬಯಲಾಗುತ್ತದೆ ಎನ್ನುವ ಭಯದಲ್ಲಿ ವೀರಭದ್ರ ಪ್ಯಾರಲೈಸ್ ಆದಂತೆ ನಾಟಕವಾಡುತ್ತಿದ್ದಾನೆ. ನಿಜವಾಗಿಯೂ ಲಕ್ವ ಹೊಡೆದಿದೆ ಎಂದು ಮನೆಯವರೆಲ್ಲಾ ಬೇಸರದಲ್ಲಿದ್ದಾರೆ.
ಪರೀಕ್ಷೆ ಮಾಡಿದ ಪಾರು
ಪಾರುಗೆ ಯಾಕೋ ಅಪ್ಪನ ಮೇಲೆ ಡೌಟ್ ಬಂದು, ಟ್ಯಾಬ್ಲೆಟ್ ಚೆಕ್ ಮಾಡಿದ್ಲು, ಅಲ್ಲದೇ ಬಿಸಿ ಕಾಫಿಯನ್ನು ಮಲಗಿರುವ ವೀರಭದ್ರನ ಮೇಲೆ ಸುರಿಯುವಂತೆ ನಾಟಕ ಕೂಡ ಮಾಡಿದ್ಲು. ಆದರೆ ಅಪ್ಪ ಮಲಗಿರೋದನ್ನು ನೋಡಿ, ನಿಜವಾಗಿಯೂ ಹೀಗಾಯ್ತಲ್ಲ ಎಂದು ಕೊರಗಿದ್ದಾಳೆ ಪಾರು.
ಕೊನೆಗೂ ವೀರಭದ್ರನ ಮೋಸದಾಟ ಬಯಲು
ಶಿವು ಮಾವನನ್ನು ಈ ಪರಿಸ್ಥಿತಿಯಲ್ಲಿ ನೋಡಿ ಕೊರಗುತ್ತಿದ್ದಾನೆ. ಶಿವು ಜೊತೆ ಬಂದ ಪಾರು ಮತ್ತೆ ಅಪ್ಪನ ಮೇಲೆ ಸಣ್ಣ ಸಂಶಯ ಬಂದು, ಪರೀಕ್ಷೆ ಮಾಡಲೆಂದು ಅಪ್ಪನ ಪಾದವನ್ನು ಸ್ಪರ್ಶಿಸುತ್ತಾಳೆ. ಪಾರು ಕಲಿತಿರುವಂತೆ ಪ್ಯಾರಲೈಸ್ ಆದ ವ್ಯಕ್ತಿಯ ಪಾದ ಸ್ಪರ್ಶಿಸಿದ್ರೆ ಅವರ ಬೆರಳುಗಳು ಹಿಂದಕ್ಕೆ ಮಡಚಿಕೊಳ್ಳಬೇಕು. ಆದರೆ ಇಲ್ಲಿ ಉಲ್ಟಾ ಆಗಿದೆ.
ಪಿಂಕಿ ಜೊತೆ ಸೀನಾ ಕಳ್ಳಾಟ
ಇನ್ನೊಂದು ಕಡೆ ಸೀನಾ, ಪಿಂಕಿ ಜೊತೆ ಲಲ್ಲೆ ಹೊಡೆಯುತ್ತಿದ್ದಾನೆ. ಆ ಡುಮ್ಮಿ ಒಬ್ಬಳು ಇಲ್ಲದಿರುತ್ತಿದ್ದರೆ ಪಿಂಕಿಗೆ ಇಷ್ಟೊತ್ತಿಗೆ ಬೇಬಿ ಆಗ್ತಿತ್ತು. ಶಿವಣ್ಣ ಪಾರು ಅತ್ತಿಗೆ ಮಾತು ಕೇಳಿ ತಲೆ ಮಂಕು ಬಡಿದಿತ್ತು ಎನ್ನುತ್ತಾನೆ.
ಶಂಕರನೆದುರು ಸಿಕ್ಕಿಹಾಕಿಕೊಂಡ ಸೀನಾ-ಪಿಂಕಿ
ಇಬ್ಬರು ತೋಟದ ಮಧ್ಯೆ ಲಲ್ಲೆ ಹೊಡೆಯುತ್ತಿರುವಾಗ ಅಲ್ಲಿ ಕುಡಿದು ತೂರಾಡುತ್ತಾ ಬರುವ ಶಿವಣ್ಣನ ಅಪ್ಪ ಶಂಕರನ ಕೈಯಲ್ಲಿ ಇಬ್ಬರೂ ಸಿಕ್ಕಿ ಬೀಳುತ್ತಾರೆ. ಶಂಕರ ಸೀನಾ ವಿರುದ್ಧ ಕಿಡಿ ಕಾರುತ್ತಾನೆ.
ಮುಂದೇನಾಗುತ್ತೆ?
ಎರಡು ಕಡೆ ಮೋಸದಾಟ ಮತ್ತು ಕಳ್ಳಾಟ ರಿವೀಲ್ ಆಗಿರೋದರಿಂದ ಮುಂದೆ ಏನಾಗಬಹುದು ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ರೌಡಿ ಬೇಬಿ ಪಾರು ಅಂತೂ ಅಪ್ಪನನ್ನು ಸುಮ್ಮನೆ ಬಿಡುವ ಮಾತೆ ಇಲ್ಲ. ಇನ್ನೂ ಸೀನಾ ಕಥೆ ಏನಾಗುತ್ತೆ ಗೊತ್ತಿಲ್ಲ.