ಗಟ್ಟಿಮೇಳದ ಆದ್ಯಾ ಆಗಿ ಬದಲಾದ Amruthadhaare ಮಲ್ಲಿ... ವೀಕ್ಷಕರು ಫುಲ್ ಖುಷ್
ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಮಲ್ಲಿ ಪಾತ್ರದಲ್ಲಿ ತುಂಬಾನೆ ಬದಲಾವಣೆ ಕಾಣಿಸುತ್ತಿದೆ. ಮೊದಲಿಗೆ ಡ್ರೆಸ್ಸಿಂಗ್ ಬದಲಾಯಿತು, ಈಗ ಆಕೆಯ ತುಂಟಾಟ, ಮಾತು ಎಲ್ಲಾ ನೋಡುತ್ತಿದ್ದರೆ ಗಟ್ಟಿಮೇಳ ಧಾರಾವಾಹಿಯ ಆದ್ಯಾ ಪಾತ್ರ ನೆನಪಾಗುತ್ತಿದೆ ಎನ್ನುತ್ತಿದ್ದಾರೆ ಜನ.

ಅಮೃತಧಾರೆ ಸೀರಿಯಲ್
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಮೃತಧಾರೆ, ಈ ಧಾರಾವಾಹಿಯ ಆರಂಭದಲ್ಲಿ ಮಲ್ಲಿ ಪಾತ್ರ ತುಂಬಾನೆ ಸಾಪ್ಟ್ ಆಗಿತ್ತು. ಆದರೆ ಗಂಡನ ನಿಜವಾದ ಮುಖ ಬಯಲಾದ ಮೇಲೆ ಮಲ್ಲಿ ಪೂರ್ತಿಯಾಗಿ ಬದಲಾಗಿದ್ದಳು, ಜೊತೆಗೆ ವಿದ್ಯಾಭ್ಯಾಸ ಕಲಿತು, ಬ್ಯುಸಿನೆಸ್ ಸಹ ನೋಡಿಕೊಳ್ಳುತ್ತಿದ್ದಳು.
ಬದಲಾದ ಮಲ್ಲಿ
ಭೂಮಿಕಾ ಮನೆ ಬಿಟ್ಟು ಹೋದ ಬಳಿಕ ಮಲ್ಲಿ ಕೂಡ ಎಲ್ಲವನ್ನೂ ಬಿಟ್ಟು ಅಕ್ಕಾರ ಜೊತೆಗೆ ತಾನೂ ಬೇರೆ ಊರು ಸೇರಿದ್ದಳು. ಚಿಕ್ಕಿ ಮತ್ತು ಅಪ್ಪು ಕಾಂಬಿನೇಶನ್ ಅನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.ದಿನಕಳೆದಂತೆ ಬದಲಾಗುತ್ತಿರುವ ಮಲ್ಲಿಯ ಪಾತ್ರವನ್ನು ಜನರು ಇಷ್ಟಪಡುತ್ತಿದ್ದಾರೆ.
ಗಟ್ಟಿಮೇಳದ ಆದ್ಯಾ
ಇದೀಗ ಮಲ್ಲಿ ಸಲ್ವಾರ್ ಧರಿಸಲು ಶುರು ಮಾಡಿದ್ದಾಳೆ, ಜೊತೆಗೆ ಅಕ್ಕ-ಭಾವನನ್ನು ಹೇಗಾದ್ರು ಮಾಡಿ ಒಂದು ಮಾಡಲೇಬೇಕು ಎನ್ನುವ ಪ್ಲ್ಯಾನ್ ಕೂಡ ಮಾಡುತ್ತಿದ್ದಾಳೆ. ಅದಕ್ಕಾಗಿ ಭೂಮಿಕಾಗೆ ಕೋಪ ಬರುವಂತೆ ಮಾಡಿದರೂ, ತನ್ನ ತುಂಟ ಐಡಿಯಾಗಳಿಂದಲೇ ಒಂದಲ್ಲ ಒಂದು ಕೆಲಸ ಮಾಡುತ್ತಾ ಇದೀಗ ಗಟ್ಟಿಮೇಳ ಧಾರಾವಾಹಿಯ ಆದ್ಯಾಳನ್ನು ನೆನಪಿಸುತ್ತಿದ್ದಾಳೆ ಮಲ್ಲಿ.
ಏನು ಗಟ್ಟಿಮೇಳ ಕಥೆ
ಗಟ್ಟಿಮೇಳ ಧಾರಾವಾಹಿಯಲ್ಲಿ ಆದ್ಯಾ ಪಾತ್ರದಲ್ಲಿ ಮಲ್ಲಿ ಅಂದ್ರೆ ಅನ್ವಿತಾ ಸಾಗರ್ ನಟಿಸಿದ್ದರು. ಇದು ಅಣ್ಣಂದಿರ ಮುದ್ದಿನ ತಂಗಿಯ ಪಾತ್ರ. ಯಾವಾಗ್ಲೂ ತನ್ನ ತುಂಟ ಗುಣದಿಂದ, ಮುದ್ದು ಮಾತಿನಿಂದ, ಅಣ್ಣ ಅತ್ತಿಗೆಯರ ಫೇವರಿಟ್ ಆಗಿದ್ದ ಆದ್ಯಾಳನ್ನು ವೀಕ್ಷಕರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದರು.
ಗಟ್ಟಿಮೇಳದಿಂದ ಜನಪ್ರಿಯತೆ
ಗಟ್ಟಿಮೇಳ ಧಾರಾವಾಹಿಯಲ್ಲಿ ಆದ್ಯಾ ಪಾತ್ರವನ್ನು ಮಾಡೋದಕ್ಕೂ ಮುನ್ನ ಅನ್ವಿತಾ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಆದ್ಯಾ ಪಾತ್ರ ನಟಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿತ್ತು. ಜನ ಅನ್ವಿತಾಕ್ಕಿಂತ ಹೆಚ್ಚಾಗಿ ಅವರನ್ನು ಆದ್ಯಾ ಎಂದೇ ಗುರುತಿಸುತ್ತಿದ್ದರು.
ಮಲ್ಲಿ ಪಾತ್ರದಲ್ಲಿ ಕಾಣಿಸಿದ ಆದ್ಯಾ
ಇದೀಗ ಅಮೃತಧಾರೆ ಧಾರಾವಾಹಿಯ ಮಲ್ಲಿ ಪಾತ್ರದಲ್ಲಿ ಹಳೆಯ ಆದ್ಯಾಳ ಗುಣ, ನಡತೆ, ಮಾತು ಕಾಣಿಸುತ್ತಿದ್ದು, ಜನರಿಗೆ ಈ ಪಾತ್ರ ಸಖತ್ ಇಷ್ಟವಾಗುತ್ತಿದೆ. ಅಕ್ಕ -ಭಾವರನ್ನು ಒಂದು ಮಾಡುವ ಅವರ ಪ್ಲ್ಯಾನ್ ಗೆ ಜನ ಕೂಡ ಸಾತ್ ನೀಡುತ್ತಿದ್ದಾರೆ.
ಏನಾಗುತ್ತಿದೆ ಅಮೃತಧಾರೆಯಲ್ಲಿ?
ಕುಶಾಲನಗರ ಬಿಟ್ಟು ಬೆಂಗಳೂರು ಸೇರಿಕೊಂಡಿರುವ ಭೂಮಿಕಾಳನ್ನು ಗೌತಮ್ ಜೊತೆ ಸೇರಿಸಲು ಮಲ್ಲಿ ಮತ್ತು ಕಾವೇರಿ ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಗೌತಮ್ ಇರುವ ಕಾಲನಿಗೆ ಭೂಮಿ ಶಿಫ್ಟ್ ಆಗಲಿದ್ದಾರೆ. ಇಬ್ಬರು ಮುಖಾಮುಖಿಯಾದಾಗ ಮುಂದೆ ಏನಾಗಬಹುದು ಕಾದು ನೋಡಬೇಕು.