- Home
- Entertainment
- TV Talk
- ಮಾಡಿದ ತಪ್ಪಿಗೆ ಅಪ್ಪುಗೆಯೇ ದಂಡ! ಗೌತಮ್ - ಭೂಮಿ ದೂರ ಮಾಡಲು ಇನ್ನೇನು ಮಾಡ್ತಾರೆ ಕೇಡಿಗಳು
ಮಾಡಿದ ತಪ್ಪಿಗೆ ಅಪ್ಪುಗೆಯೇ ದಂಡ! ಗೌತಮ್ - ಭೂಮಿ ದೂರ ಮಾಡಲು ಇನ್ನೇನು ಮಾಡ್ತಾರೆ ಕೇಡಿಗಳು
ಅಮೃತಧಾರೆ ಧಾರಾವಾಹಿಯಲ್ಲಿ ಇನ್ನೇನು ಭೂಮಿಕಾ ಮತ್ತು ಗೌತಮ್ ದಿವಾನ್ ದಾಂಪತ್ಯದಲ್ಲಿ ಬಿರುಕು ಕಾಣುತ್ತೆ ಎಂದು ನೀರೀಕ್ಷಿಸಿದ್ದ ವೀಕ್ಷಕರಿಗೆ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಇನ್ನೇನು ಮಾಡ್ತಾರೆ ರೌಡಿಗಳು ನೋಡಬೇಕು.

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ತನ್ನ ವೇಗದ ಕಥೆ ಮತ್ತು ಟ್ವಿಸ್ಟ್ ಮೂಲಕ ಜನಮನ ಗೆಲ್ಲುತ್ತಾ ಸಾಗುತ್ತಿದೆ. ಇತ್ತೀಚಿನ ಎಪಿಸೋಡಲ್ಲಿ ಇನ್ನೇನು ಭೂಮಿಕಾ ಮತ್ತು ಗೌತಮ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತಿದೆ ಎಂದು ಜನ ಅಂದುಕೊಳ್ಳುತ್ತಿರುವಾಗಲೇ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ.
ಕಥೆಯ ಪ್ರಕಾರ ಗೌತಮ್ ದಿವಾನ್ ಬಿಸಿನೆಸ್ ಮೀಟಿಂಗ್ ಗಾಗಿ ವಿದೇಶಕೆ ತೆರಳಬೇಕಿತ್ತು. ಆದರೆ ಭೂಮಿಕಾಗೆ ಇದು ಇಷ್ಟವಿರಲಿಲ್ಲ. ನೀವು ಫಾರಿನ್ ಹೋಗೋದು ಬೇಡ ಎಂದೇ ಭೂಮಿ ಹೇಳುತ್ತಾಳೆ. ಗೌತಮ್ ಸಾಧ್ಯ ಇಲ್ಲ ಎಂದಾಗ, ಭೂಮಿ ನಿಮ್ಮ ಪಾಸ್ ಪೋರ್ಟ್ ಕದ್ದಿಟ್ಟರೆ ಹೇಗೆ ಹೋಗ್ತೀರಾ ಎಂದು ಹೇಳಿ ನಗುತ್ತಾಳೆ.
ಗೌತಮ್ ಕಾರು ಏರಿ ಏರ್ ಪೋರ್ಟ್ ಗೆ ಹೊರಡುತ್ತಿರುವಾಗ ಬ್ಯಾಗಲ್ಲಿ ಪಾಸ್ ಪೋರ್ಟ್ ಇಲ್ಲದೇ ಇರೋದು ಗೊತ್ತಾಗಿದೆ ಅರ್ಧ ದಾರಿಯಿಂದಲೇ ವಾಪಾಸ್ ಬರುವ ಗೌತಮ್, ಪಾಸ್ ಪೋರ್ಟ್ ತೆಗೆದಿಟ್ಟಿರೋದು ಭೂಮಿ ಎಂದು ಆಕೆಯ ಮೇಲೆ ರೇಗಾಡುತ್ತಾನೆ. ಭೂಮಿಕಾ ಪಾಸ್ ಪೋರ್ಟ್ ಬ್ಯಾಗಲ್ಲೇ ಇಟ್ಟಿದ್ದೀನಿ ಅಂದ್ರೂನು ಗೌತಮ್ ಕೇಳೋದಿಲ್ಲ.
ರೊಚ್ಚಿಗೆದ್ದ ಗೌತಮ್, ‘ನಿಮಗೆ ಇತ್ತೀಚೆಗೆ ಹುಚ್ಚು ಹಿಡಿದಿದೆ. ಅದಕ್ಕಾಗಿ ಈ ರೀತಿ ಆಡುತ್ತಿದ್ದೀರಾ’ ಎಂದದಾಗ. ‘ನಾನು ಅದನ್ನು ಎತ್ತಿಟ್ಟಿಲ್ಲ. ನೀವು ನಂಬೋದಾದರೆ ನಂಬಿ ಬಿಡೋದಾದರೆ ಬಿಡಿ’ ಎಂದು ಹೇಳುತ್ತಲೇ ಭೂಮಿಕಾ ಹೊರಟು ಹೋಗುತ್ತಾಳೆ. ಅಷ್ಟರಲ್ಲಿ ಗೌತಮ್ ಗೆ ತಾನು ಮೀಟಿಂಗ್ ಗೆ ಹೋಗಬೇಕಾದ ಜಾಗದಲ್ಲಿ ಬೆಂಕಿ ಬಿದ್ದು, ಹಲವರು ಸಾವನ್ನಪ್ಪಿರೋದು ಗೊತ್ತಾಗುತ್ತೆ.
ಮನೆಯಲ್ಲಿ ಅಜ್ಜಿ, ನೀನು ಇವತ್ತು ಉಳಿದುಕೊಂಡಿರೋದಕ್ಕೆ ಕಾರಣವೇ ಭೂಮಿಕಾ. ಅವಳು ಮಾಡಿದ್ರಲ್ಲಿ ತಪ್ಪೇನಿಲ್ಲ ಎನ್ನುತ್ತಾರೆ. ಈವಾಗ ಗೌತಮ್, ಭೂಮಿಕಾ ಬಳಿ ಹೋಗಿ, ನಿಮ್ಮ ಪ್ರೀತಿ ಎಷ್ಟಿದೆ ಅನ್ನೋದು ಗೊತ್ತು. ನನ್ನನ್ನು ಕ್ಷಮಿಸಿ, ಸಾರಿ, ನಿಮ್ಮಿಂದಾಗಿ ನಾನು ಇವತ್ತು ಬದುಕುಳಿದೆ ಎನ್ನುತ್ತಾರೆ.
ಭೂಮಿ ಕೂಡ, ಗೌತಮ್ ನನ್ನು ತಬ್ಬಿ ಹಿಡಿಯುತ್ತಾಳೆ. ಇದೀಗ ಈ ಸಲವೂ ತನ್ನ ಪ್ಲ್ಯಾನ್ ಉಲ್ಟಾ ಹೊಡೆದಿರುವುದಕ್ಕೆ ಕೋಪಗೊಂಡಿರುವ ಶಾಕುಂತಲಾ, ತನ್ನ ಮುದ್ದಿನ ಮಗ ಜೈ ದೇವ್ ಬಳಿ ಹೋಗಿ ಎಲ್ಲವನ್ನೂ ಹೇಳುತ್ತಾಳೆ. ಆದಷ್ಟು ಬೇಗ ಮಗುವನ್ನು ಸಾಯಿಸಬೇಕು ಎನ್ನುತ್ತಾಳೆ. ಮುಂದೆ ಈ ಕೇಡಿಗಳಿಂದ ಗೌತಮ್ -ಭೂಮಿ ಬಾಳಲ್ಲಿ ಏನೆಲ್ಲಾ ಆಗುತ್ತೆ ಅನ್ನೋದನ್ನು ನೋಡಬೇಕು.