- Home
- Entertainment
- TV Talk
- ನಟಿ ಶ್ವೇತಾ ಪ್ರಸಾದ್ ದಾಂಪತ್ಯ ಜೀವನದಲ್ಲಿ ಬಿರುಕು! ಪ್ರಶ್ನಿಸಿದವರಿಗೆ ಸ್ವೀಟ್ ರಿಪ್ಲೈ ಕೊಟ್ಟ ರಾಧಾ ಮಿಸ್
ನಟಿ ಶ್ವೇತಾ ಪ್ರಸಾದ್ ದಾಂಪತ್ಯ ಜೀವನದಲ್ಲಿ ಬಿರುಕು! ಪ್ರಶ್ನಿಸಿದವರಿಗೆ ಸ್ವೀಟ್ ರಿಪ್ಲೈ ಕೊಟ್ಟ ರಾಧಾ ಮಿಸ್
ಕನ್ನಡ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಬಿಗ್ ಬಾಸ್ ಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿರುವ ನಡುವೆ, ನಟಿ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದು ವೈರಲ್ ಆಗಿದೆ. ಇದನ್ನ ನೋಡಿ ಜನ ನಿಮ್ಮ ದಾಂಪತ್ಯದಲ್ಲಿ ಎಲ್ಲಾ ಸರಿಯಾಗಿದೆ ಅಲ್ವ ಎಂದು ಪ್ರಶ್ನಿಸುತ್ತಿದ್ದಾರೆ.

ಶ್ವೇತಾ ಪ್ರಸಾದ್
ಕನ್ನಡ ಕಿರುತೆರೆಯ ಜನಒರಿಯ ನಟಿ ಶ್ವೇತಾ ಪ್ರಸಾದ್ (Shwetha Prasad) ಬಿಗ್ ಬಾಸ್ ಸೀಸನ್ 12 ರಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇದರ ಮಧ್ಯೆ ಇದೀಗ ನಟಿಯ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ಯಾ ಎನ್ನುವ ಸಂಶಯವೂ ಕಾಡುತ್ತಿದೆ.
ಶ್ವೇತಾ ಪೋಸ್ಟ್ ನಲ್ಲಿ ಏನಿದೆ?
ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿರುವ ಶ್ವೇತಾ, ಇದರ ಜೊತೆ ಕ್ಯಾಪ್ಶನ್ ನಲ್ಲಿ ಪ್ರೀತಿ, ಲೈಫ್, ಪ್ರೀತಿಯನ್ನು ಬಿಟ್ಟು ಕೊಡುವ ಬಗ್ಗೆ ತುಂಬಾನೆ ಭಾವನಾತ್ಮಕವಾಗಿ ಬರೆದಿದ್ದಾರೆ. ಇವರ ಪೋಸ್ಟ್ ನೋಡಿದ ಜನರಲ್ಲಿ ನಟಿಯ ದಾಂಪತ್ಯ ಜೀವನ ಸರಿಯಾಗಿಲ್ಲವೇನೋ ಎನ್ನುವ ಸಂಶಯ ಮೂಡಿದೆ. ಅಷ್ಟಕ್ಕೂ ನಟಿಯ ಪೋಸ್ಟ್ ನಲ್ಲಿ ಏನಿದೆ ನೋಡಿ
Art of letting go ಅಂದ್ರೆ ಏನು?
ಜನ ಹೇಳುತ್ತಾರೆ, "ಬಿಟ್ಟು ಬಿಡಿ” ಎಂದು ನನ್ನ ಅಭಿಪ್ರಾಯದಲ್ಲಿ, ಬಿಟ್ಟುಬಿಡುವ ಕಲೆಯ (Art of letting go) ಬಗ್ಗೆ ನಾನು ನಿಮಗೆ ಹೇಳುತ್ತೇನೆ. ಅದು ಅರ್ಧದಾರಿಯಲ್ಲೇ ದೂರ ಹೋಗುವುದರ ಬಗ್ಗೆ ಅಲ್ಲ. ಪ್ರೀತಿ ಕಷ್ಟವಾದಾಗ ಬಿಟ್ಟುಕೊಡುವುದರ ಬಗ್ಗೆ ಅಲ್ಲ. ನಿಜವಾಗಿ ಬಿಟ್ಟುಕೊಡುವುದು ಪ್ರೀತಿಯ ಅಂತಿಮ ಹಂತ, ನಿಜವಾಗಿಯೂ ಕೊನೆಯ ಹಂತ, ನೀವು ನಿಮ್ಮ ಎಲ್ಲವನ್ನೂ ನೀಡಿದ ನಂತರವೂ, ಮುಂದೆ ಯಾವುದೇ ದಾರಿ ಇಲ್ಲ ಎಂದು ನಿಮ್ಮ ಆತ್ಮಕ್ಕೂ ತಿಳಿದಾಗ, ಅದನ್ನು ಬಿಡುವುದೇ ಉತ್ತಮ.
ಪ್ರೀತಿ ಎಂದರೆ ಬಿಟ್ಟು ಬಿಡೋದು ಅಲ್ಲ
ನಿಜವಾಗಿಯೂ ಪ್ರೀತಿಸುವುದು ಹೇಗೆಂದು ತಿಳಿಯದೆ ಬಿಟ್ಟುಬಿಡುವುದರ ಬಗ್ಗೆ ಅನೇಕರು ಮಾತನಾಡುತ್ತಾರೆ, ಅವರೆಲ್ಲಾ, ಅರ್ಧ ತಿಳಿದ, ಹೇಡಿಗಳು. ಅವರು ದೂರವಾಗೋದು ಅಥವಾ ಪ್ರತ್ಯೇಕವಾಗಿರೋದನ್ನು ಬುದ್ಧಿವಂತಿಕೆ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಪ್ರೀತಿಯಲ್ಲಿ ಸಂಪೂರ್ಣವಾಗಿ ಬದುಕುವ ಮೊದಲು ಬಿಟ್ಟುಬಿಡುವುದು ಕಲೆಯಲ್ಲ, ಅದು ಪಲಾಯನ. ಘನತೆಯಿಂದ ಬಿಟ್ಟುಬಿಡಲು, ನೀವು ಮೊದಲು ಸಂಪೂರ್ಣವಾಗಿ ಪ್ರೀತಿಸಿರಬೇಕು. ಅಲ್ಲಿಯೇ ಸೌಂದರ್ಯ ಅಡಗಿದೆ ಎಂದು ಹೇಳಿದ್ದಾರೆ.
ಸಂಶಯ ಮೂಡಿಸಿದ ನಟಿಯ ಮಾತು
ಶ್ವೇತಾ ಪ್ರಸಾದ್ ಈ ಮಾತು ಕೇಳಿ ಹಲವು ಜನರಿಗೆ ಸಂಶಯ ಮೂಡಿದೆ, ನಟಿಯ ಬಾಳಲ್ಲಿ ಏನಾದ್ರು ಸಮಸ್ಯೆ ಆಗುತ್ತಿದ್ಯಾ? ಎಂದು ಸಹ ಅಂದುಕೊಂಡಿದ್ದಾರೆ. ಇನ್ನೂ ಕೆಲವರು ನಟಿ ಬೋಲ್ಡ್ ಫೋಟೊಸ್ ನೋಡಿ ಶಾಕ್ ಅಗಿದ್ದಾರೆ.
ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ?
ಅಭಿಮಾನಿ ಒಬ್ಬರು ನಟಿಯ ಪೋಸ್ಟ್ ಗೆ ಕಾಮೆಂಟ್ ಮಾಡಿ ನೀವು ಗಂಡನಿಂದ ಬೇರೆಯಾಗುತ್ತಿದ್ದೀರಾ? ನಿಮ್ಮ ಕ್ಯಾಪ್ಶನ್ ತುಂಬಾ ಆಳವಾದ ಅರ್ಥವನ್ನು ಹೊಂದಿದೆ. ನಿರ್ಧಾರದ ಹಿಂದಿನ ಪರಿಸ್ಥಿತಿ ಏನೇ ಇರಲಿ, ನಿಮ್ಮ ಜೀವನ ಹೆಚ್ಚು ಶಕ್ತಿಯಿಂದ ತುಂಬಿರಲಿ ಎಂದಿದ್ದಾರೆ.
ಸ್ವೀಟ್ ರಿಪ್ಲೈ ಕೊಟ್ಟ ಶ್ವೇತಾ ಪ್ರಸಾದ್
ಈ ಪ್ರಶ್ನೆಗೆ ಉತ್ತರಿಸಿದ ಶ್ವೇತಾ ಪಸಾದ್. ಹಾಯ್. ಇಲ್ಲ, ಟಚ್ ವುಡ್. ನಾವಿಬ್ಬರು ಚೆನ್ನಾಗಿದ್ದೇವೆ. ನೀವು ಪ್ರೀತಿ ಮತ್ತು ಬೆಂಬಲದಿಂದ ಈ ರೀತಿ ಹೇಳಿದಾಗ ಖುಷಿಯಾಗುತ್ತೆ. ಧನ್ಯವಾದಗಳು. ಈ ಮಾತುಗಳು ನನ್ನ ಅಭಿಪ್ರಾಯ. ನನ್ನ ಸ್ವಂತ ವೈಯಕ್ತಿಕ ಜೀವನವನ್ನು ಪ್ರತಿಬಿಂಬಿಸುವುದಿಲ್ಲ. ನಮ್ಮ ಮೇಲೆ ನಿಮ್ಮ ಪ್ರೀತಿ ಹೀಗೆ ಇರಲಿ ಎನ್ನುವ ಮೂಲಕ ಸಂಶಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.