- Home
- Entertainment
- TV Talk
- Bhoomika Ramesh: ಕಾಳಿಮಾತೆಯಾಗಿ ದರ್ಶನಕೊಟ್ಟ ಕಿರುತೆರೆಯ ಲಕ್ಷ್ಮೀ… ರೌದ್ರ ರೂಪ ತಾಳಿರುವ ಈ ನಟಿ ಯಾರು?
Bhoomika Ramesh: ಕಾಳಿಮಾತೆಯಾಗಿ ದರ್ಶನಕೊಟ್ಟ ಕಿರುತೆರೆಯ ಲಕ್ಷ್ಮೀ… ರೌದ್ರ ರೂಪ ತಾಳಿರುವ ಈ ನಟಿ ಯಾರು?
ಕಾಳಿ ಮಾತೆಯಾಗಿ ದರ್ಶನ ಕೊಟ್ಟಿದ್ದಾರೆ ಕನ್ನಡ ಕಿರುತೆರೆಯ ಲಕ್ಷ್ಮೀ. ನಟಿಯ ರೌದ್ರ ರೂಪ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಿಜಯದಶಮಿಯಂದು ರೌದ್ರ ರೂಪ ತಾಳಿದ ಆ ಮಹತಾಯಿ, ಕನ್ನಡ ಕಿರುತೆರೆಯ ಜನಪ್ರಿಯ ನಟಿ ಯಾರು ತಿಳಿಯೋಣ.

ಕನ್ನಡ ಕಿರುತೆರೆಯ ಲಕ್ಷ್ಮೀ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಎನ್ನುವ ಪಾತ್ರದಲ್ಲಿ ನಟಿಸುವ ಮೂಲಕ ಮನೆಮಾತಾದವರು ಈಕೆ. ಕಿರುತೆರೆಯಲ್ಲಿ ತನ್ನ ಸದ್ಗುಣಗಳಿಗೆ ತುಂಬಾ ಫೇಮಸ್. ಇದೀಗ ಆ ನಟಿ ವಿಜಯದಶಮಿಯಂದು ಕಾಳಿಯ ಅವತಾರ ತಾಳಿದ್ದಾರೆ. ಈಕೆ ಕಾಳಿಯ ರೂಪ ನೋಡಿ ಜನರು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಯಾರು ಈ ನಟಿ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮಿಯಾಗಿ ಲಕ್ಷ್ಮೀ ಬಾರಮ್ಮ ಲಚ್ಚಿ, ಲಕ್ಷ್ಮೀ ಬಾರಮ್ಮ ಹೊಸ ಅಧ್ಯಾಯದ ಮಹಾಲಕ್ಷ್ಮೀ , ಲಕ್ಷ್ಮೀ ನಿವಾಸದ ಅಮ್ಮ ಲಕ್ಷ್ಮೀ ಕೂಡ ನಟಿಸಿದ್ದಾರೆ. ಇಲ್ಲಿ ಕಾಳಿ ಮಾತೆಯ ರೂಪದಲ್ಲಿ ರೌದ್ರಾವತಾರ ದರ್ಶನ ನೀಡಿರುವುದು ಇತ್ತೀಚೆಗಷ್ಟೆ ಮುಗಿದಂತಹ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಲಕ್ಷ್ಮಿ.
ಭೂಮಿಕಾ ರಮೇಶ್
ವಿಜಯದಶಮಿಯ ದಿನದಂದು ಭೂಮಿಕಾ ರಮೇಶ್ ಕಪ್ಪು ಸೀರೆಯುಟ್ಟು, ಬುರುಡೆಗಳನ್ನು ಕೊರಳಿಗೆ ಹಾರವಾಗಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು, ಸಿಂಹದ ಮೇಲೆ ರಾರಾಜಿಸುತ್ತಿರುವ ಕಾಳಿ ಮಾತೆಯ ರೂಪದಲ್ಲಿ ಪೋಸ್ ಕೊಟ್ಟಿದ್ದು, ಫೋಟೊ ಜೊತೆ ಅಜ್ಞಾನದ ಮೇಲೆ ಸುಜ್ಞಾನದ ಬೆಳಕು ಚೆಲ್ಲುವ ಸಂಕೇತ ವಿಜಯದಶಮಿ... ಈ ಹಬ್ಬ ಎಲ್ಲರಿಗೂ ಒಳಿತನ್ನು ಮಾಡಲಿ."ವಿಜಯದಶಮಿಯ ದಸರಾ ಹಬ್ಬದ ಶುಭಾಶಯಗಳು ಎಂದು ನಾಡಿನ ಜನತೆಗೆ ಶುಭ ಕೋರಿದ್ದಾರೆ.
ಈಗೇನು ಮಾಡ್ತಿದ್ದಾರೆ ಭೂಮಿಕಾ
ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಗಿದ ಬಳಿಕ, ಭೂಮಿಕಾ ತೆಲುಗು ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಜೀ ತೆಲುಗಿನ ಮೇಘ ಸಂದೇಶಂ ಧಾರಾವಾಹಿಯಲ್ಲಿ ನಟಿಸುತ್ತಿರುವ ಭೂಮಿಕಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಮದುವೆ ನಡೆಯುವ ಸಂದರ್ಭದಲ್ಲಿ ವೈಷ್ಣವ್ ಜೊತೆ ಎಂಟ್ರಿ ಕೊಟ್ಟಿದ್ದರು.
ಮಿನಿ ಸೀರೀಸ್ ನಲ್ಲೂ ನಟನೆ
ಭೂಮಿಕಾ ಮೇಘ ಸಂದೇಶಂ ನಾಯಕ ಅಂದ್ರೆ ಅಭಿನವ್ ವಿಶ್ವನಾಥನ್ ಜೊತೆ ಆಟೋ ರಾಜಾ ಎನ್ನುವ ಮಿನಿ ಸೀರೀಸ್ ನಲ್ಲೂ ನಟಿಸಿದ್ದಾರೆ. ಈ ಸೀರೀಸ್ ಟ್ರೆಂಡಿಂಗ್ ನಲ್ಲಿತ್ತು. ಜನ ಮಾತ್ರ ಮತ್ತೆ ಯಾವಾಗ ಕನ್ನಡ ಕಿರುತೆರೆಯೆ ಎಂಟ್ರಿ ಎಂದು ಕೇಳುತ್ತಿದ್ದಾರೆ.