Namma Karnataka: ಕರ್ನಾಟಕದ ಕುರಿತು ಅಚ್ಚರಿಯ ವಿಷಯಗಳು… ಕನ್ನಡಿಗರಾಗಿ ನಿಮಗಿದು ಗೊತ್ತಾ?
ಕರ್ನಾಟಕದ ಕುರಿತಾದ 7 ಅಚ್ಚರಿಯ ವಿಷಯಗಳು ಇಲ್ಲಿವೆ. ಇವುಗಳ ಬಗ್ಗೆ ನೀವು ತಿಳಿದುಕೊಂಡರೆ ಶಾಕ್ ಆಗೋದು ಖಚಿತಾ. ಕನ್ನಡಿಗರಾಗಿ ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು.
- FB
- TW
- Linkdin
Follow Us

ನೀವು ಹೆಮ್ಮೆಯ ಕನ್ನಡಿಗರೇ… ಹಾಗಿದ್ರೆ ನಿಮಗೆ ಕರ್ನಾಟಕದ ಈ ಅಚ್ಚರಿಯ ವಿಷ್ಯಗಳು ತಿಳಿದಿರಲೇಬೇಕು. ದೇಶದ ಬಾವುಟದಿಂದ ಹಿಡಿದು, ಇಸ್ರೋದವರೆಗೂ ದೇಶಕ್ಕೆ ಹಲವು ಕೊಡುಗೆಗಳನ್ನು ಕೊಟ್ಟ ನಾಡು ಕರ್ನಾಟಕ.
ಎಲ್ಲಾ ಭಾರತೀಯ ಬಾವುಟಗಳು (Indian flags) ಹಾಗೂ ಎಲೆಕ್ಷನ್ ಗೆ ಬಳಸಲಾಗುವಂತಹ ಇಂಕ್ ತಯಾರಾಗುವುದು ಕರ್ನಾಟಕದಲ್ಲಿ ಅನ್ನೋದು ನಿಮಗೆ ಗೊತ್ತಿದೆಯೆ?
ಪ್ರಪಂಚದ ಮೊದಲ ಫ್ಯಾಮಿಲಿ ಪ್ಲ್ಯಾನಿಂಗ್ ಕ್ಲಿನಿಕ್ ಮತ್ತು ಭಾರತದ ಮೊದಲ ಖಾಸಗಿ ರೇಡಿಯೋ ಸ್ಟೇಷನ್ ಆರಂಭವಾದುದು ಕೂಡ ನಮ್ಮ ಕರ್ನಾಟಕದಲ್ಲಿಯೇ.
ದೇಶದಲ್ಲಿ ಕಾಫಿ, ಸಿಲ್ಕ್, ಸ್ಯಾಂಡಲ್ ವುಡ್(sandalwood) ಜೊತೆಗೆ ಚಿನ್ನದ ಅತಿ ದೊಡ್ಡ ಉತ್ಪಾದಕರು ಅಂದ್ರೆ ನಮ್ಮ ಕರ್ನಾಟಕ ರಾಜ್ಯ. ಮೈಸೂರ್ ಸಿಲ್ಕ್ ಸೀರೆ, ಗಂಧದ ಗುಡಿ, ಕೋಲಾರ ಚಿನ್ನದ ಗಣಿ… ಇವೆಲ್ಲಾ ಕರ್ನಾಟಕದ್ದೇ ಅಲ್ವಾ?
ಅತಿ ಹೆಚ್ಚು ಜಲಪಾತಗಳಿರುವ (falls of Karnataka) ಹಾಗೂ ಅತಿ ಹೆಚ್ಚು ಆನೆಗಳಿರುವ ಭಾರತದ ರಾಜ್ಯ ಅಂದರೆ ಅದು ಕರ್ನಾಟಕ ರಾಜ್ಯ. ಉತ್ತರ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ಜಲಪಾತಗಳಿವೆ.
ಕರ್ನಾಟಕ ರಾಜ್ಯದಲ್ಲಿ ಬರೋಬ್ಬರಿ 13ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಅಷ್ಟೇ ಅಲ್ಲ ದೇಶದ ಅತ್ಯಂತ ದೊಡ್ಡದಾದ ರೈಲ್ವೇ ಪ್ಲಾಟ್ ಫಾರ್ಮ್ (Railway Platform) ಇರೋದು ಕೂಡ ಕರ್ನಾಟಕದಲ್ಲೇ.
ಏಷ್ಯಾ ಖಂಡದ ಅತ್ಯಂತ ದೊಡ್ಡದಾದ ಮಾನವ ನಿರ್ಮಿತ ಸರೋವರ (largest lake) ದಾವಣಗೆರೆಯ ಶಾಂತಿ ಸಾಗರ ಹಾಗೂ ದೊಡ್ಡದಾದ ನೌಕಾನೆಲೆ ಇರುವುದು ಸಹ ಕರ್ನಾಟಕದಲ್ಲಿ. ಕಾರಾವಾರದಲ್ಲಿದೆ ನೌಕಾ ನೆಲೆ.
ಜನರ ಜೀವನವನ್ನೇ ಬದಲಾಯಿಸಿದ ರುಚಿ ಮತ್ತು ಟೆಕ್ನೋಲಾಜಿಗಳಾದ ರವಾ ಇಡ್ಲಿ, ಸಿಂಪಲ್ ಕಂಪ್ಯೂಟರ್, ಬಯೋಕಾನ್ ಹಾಗೂ ಇಸ್ರೋ ಇದೆಲ್ಲವನ್ನೂ ದೇಶಕ್ಕೆ ಕೊಟ್ಟಿದ್ದು, ಕರ್ನಾಟಕ.
ಲೆಜೆಂಡರಿ ಕಿಂಗ್ ಶ್ರೀಕೃಷ್ಣ ದೇವರಾಯ (Shrikrishnadevaraya) ಹಾಗೂ ಮನೆಮನೆಯೂ ನೆನೆಯುವಂತಹ ಕರುನಾಡ ಮಾಣಿಕ್ಯ ಪುನೀತ್ ರಾಜಕುಮಾರ್ ಅವರು ಹುಟ್ಟಿರುವ ನಾಡು ಕೂಡ ನಮ್ಮ ಕರ್ನಾಟಕ.