MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ರಾಜ್ಯದ ಮೊದಲ 'ವಿದೇಶ ಅಧ್ಯಯನ ಎಕ್ಸ್‌ಪೋ' ಯಶಸ್ವಿ- 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ರಾಜ್ಯದ ಮೊದಲ 'ವಿದೇಶ ಅಧ್ಯಯನ ಎಕ್ಸ್‌ಪೋ' ಯಶಸ್ವಿ- 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Study Abroad Expo 2025 Bengaluru: ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ಆಯೋಜಿಸಿದ್ದ ರಾಜ್ಯದ ಮೊದಲ 'ವಿದೇಶ ಅಧ್ಯಯನ ಎಕ್ಸ್‌ಪೋ'ಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು.

2 Min read
Author : Ravi Janekal
Published : Sep 19 2025, 08:37 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ವಿದೇಶ ಅಧ್ಯಯನ ಎಕ್ಸ್‌ಪೋ: ಪೋಷಕರಲ್ಲಿ ಹೊಸ ಭರವಸೆ:

65 ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿನ ಉನ್ನತ ಶಿಕ್ಷಣದ ಅವಕಾಶಗಳನ್ನು ತೆರದಿಟ್ಟಿದ್ದ ಎಕ್ಸ್‌ಪೋದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ತಮ್ಮ ಆಸಕ್ತಿಯ ವಿಭಾಗಗಳಲ್ಲಿ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದರು. ಭಾಗವಹಿಸಿದ್ದ ಎಲ್ಲರೂ ವಿದೇಶಿ ವಿ.ವಿ.ಗಳಿಗೆ ದಾಖಲಾಗುತ್ತಾರೆ ಎಂಬ ಖಾತ್ರಿ ಇಲ್ಲದಿದ್ದರೂ, ಕನಿಷ್ಠ ಶೇ.50ರಷ್ಟು ಮಂದಿಯಾದರೂ ಉತ್ತಮ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟಿರುವ ವಿಶ್ವವಿದ್ಯಾಲಯ ಪ್ರತಿನಿಧಿಗಳು,'ರಾಜ್ಯ ಸರ್ಕಾರದ ಈ ಉಪಕ್ರಮವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ,' ಎಂದಿದ್ದಾರೆ.

27
Image Credit : Asianet News

ಸಾಲುಗಟ್ಟಿ ನಿಂತಿದ್ದ ವಿದ್ಯಾರ್ಥಿಗಳು:

ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ನಡೆದ ಎಕ್ಸ್‌ಪೋದಲ್ಲಿ, ವಿದೇಶದಲ್ಲಿ ಅಧ್ಯಯನ ಮಾಡುವ ಕನಸು ಹೊತ್ತ ಸಾವಿರಾರು ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ವಿಶ್ವವಿದ್ಯಾಲಯದ ಪ್ರತಿನಿಧಿಗಳ ಜತೆಗಿನ ಸಂವಾದದ ಹೊರತಾಗಿ, ಅನೇಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಸೌಲಭ್ಯಗಳನ್ನು ಬಗ್ಗೆ ಮಾಹಿತಿ ಪಡೆಯಲು ಉತ್ಸುರಾಗಿದ್ದರು. ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗಾಗಿ ಇರುವ ವಿಶೇಷ ಸಾಲ ಸೌಲಭ್ಯದ ಆಯ್ಕೆಗಳನ್ನು ಕರ್ನಾಟಕ ಬ್ಯಾಂಕ್ ಪ್ರತಿನಿಧಿಗಳು ವಿವರಿಸಿದರು.

Related Articles

Related image1
ಬೆಂಗಳೂರಿನಲ್ಲಿ ಮೇ 3ರಂದು ಎಜುಕೇಷನ್ ಎಕ್ಸ್‌ಪೋ ಮತ್ತು ಉದ್ಯೋಗ ಮೇಳ
Related image2
Now Playing
ಮೇ.24-25ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮೆಗಾ ಎಜುಕೇಶನ್ ಎಕ್ಸ್‌ಪೋ!
37
Image Credit : Asianet News

ವಿದೇಶ ಅಧ್ಯಯನ ಎಕ್ಸ್‌ಪೋದಲ್ಲೇ ವಿದ್ಯಾರ್ಥಿವೇತನ ಘೋಷಣೆ:

ಹಲವಾರು ವಿಶ್ವವಿದ್ಯಾಲಯಗಳು ಎಕ್ಸ್‌ಪೋದಲ್ಲೇ ಕೆವಿಟಿಎಸ್‌ಡಿಸಿ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನವನ್ನು ಘೋಷಿಸಿದವು. ವಿಶ್ವದ ಅಗ್ರ 100 ವಿ.ವಿ.ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ (ಯುಡಬ್ಲ್ಯುಎ)ವು ಪದವಿಪೂರ್ವ ವಿದ್ಯಾರ್ಥಿಗಳಿಗೆ 48,000 ಆಸ್ಟ್ರೇಲಿಯಾ ಡಾಲರ್‌ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 24,000 ಆಸ್ಟ್ರೇಲಿಯಾ ಡಾಲರ್‌ವರೆಗೆ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಯನಿರ್ವಸಿಟಿ ಆಫ್‌ ಈಸ್ಟ್‌ ಆಂಗ್ಲಿಯಾ ಅರ್ಹ ಇಬ್ಬರು ವಿದ್ಯಾರ್ಥಿಗಳಿಗೆ ಶೇ.50ರಷ್ಟು ವಿದ್ಯಾರ್ಥಿ ವೇತನವನ್ನು ಘೋಷಿಸಿದೆ. 1884ರಲ್ಲಿ ಸ್ಥಾಪನೆಯಾದ ಬ್ಯಾಂಗೋರ್ ಯೂನಿವರ್ಸಿಟಿ ಸಹ ಇಬ್ಬರಿಗೆ ಶೇ.50 ವಿದ್ಯಾರ್ಥಿ ವೇತನವನ್ನು ಘೋಷಿಸಿದೆ.

47
Image Credit : Asianet News

ವಿದೇಶ ಅಧ್ಯಯನ ಎಕ್ಸ್‌ಪೋಗೆ ವಿದ್ಯಾರ್ಥಿಗಳಿಂದ ಮೆಚ್ಚುಗೆ:

ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳಿಗೆ ನೇರ ಪ್ರವೇವಾಕಶ ಕಲ್ಪಿಸುವ ಈ ಎಕ್ಸ್‌ಪೋ ಬಗ್ಗೆ ವಿದ್ಯಾರ್ಥಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. "ಈ ಎಕ್ಸ್‌ಪೋದಲ್ಲಿ ಭಾಗಿಯಾಗಿದ್ದರಿಂದ ವಿದೇಶದಲ್ಲಿರುವ ಶೈಕ್ಷಣಿಕ ಅವಕಾಶಗಳು ಹಾಗೂ ಆಯ್ಕೆಗಳ ಬಗ್ಗೆ ನನಗೆ ಸ್ಪಷ್ಟತೆ ಸಿಕ್ಕಿತು," ಎಂದು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಲಕ್ಷ್ಮಿ ಹೇಳಿದರು.

57
Image Credit : Asianet News

ವಿಶ್ವವಿದ್ಯಾಲಯ ಪ್ರತಿನಿಧಿಗಳಿಂದಲೇ ನೇರ ಮಾಹಿತಿ:

ಪಿಯು ವಿದ್ಯಾರ್ಥಿ ಹುಮೇರಾ ಮಾತನಾಡಿ, 'ವಿದ್ಯಾರ್ಥಿ ವೇತನ ಮತ್ತು ಸಾಲ ಸೌಲಭ್ಯದ ಕುರಿತು ಇಲ್ಲಿ ಮಾಹಿತಿ ದೊರೆತ ನಂತರ ವಿದೇಶಿ ಶಿಕ್ಷಣ ಸಾಧ್ಯ ಎಂಬ ವಿಶ್ವಾಸ ಮೂಡಿಸಿತು,'ಎಂದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿನೋದ್ , "ಅಧ್ಯಯನದ ನಂತರ ಉದ್ಯೋಗಾವಕಾಶಗಳ ಬಗ್ಗೆ ನನಗೆ ಹಲವು ಪ್ರಶ್ನೆಗಳಿದ್ದವು. ವಿಶ್ವವಿದ್ಯಾಲಯ ಪ್ರತಿನಿಧಿಗಳಿಂದಲೇ ನೇರ ಮಾಹಿತಿ ಪಡೆದದ್ದು ಖುಷಿ ಆಯಿತು," ಎಂದು ಸಂತಸ ಹಂಚಿಕೊಂಡರು.

67
Image Credit : Asianet News

ಎಐ ಕಲಿಕೆ ಬಗ್ಗೆ ಒಲವು:

ಹೆಚ್ಚಿನ ವಿದ್ಯಾರ್ಥಿಗಳು ಅಮೆರಿಕದಲ್ಲಿ ಇಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ (ಎಐ) ಮತ್ತು ಫಾರ್ಮಸಿ ಕಾರ್ಯಕ್ರಮಗಳ ಬಗ್ಗೆ ವಿಚಾರಿಸಿಕೊಂಡರು. ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಹಂತಗಳಲ್ಲಿನ ಕೋರ್ಸ್‌ಗಳು ಹಾಗೂ ನಮ್ಮ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವುದರಿಂದಾಗುವ ಅನುಕೂಲಗಳು ಮತ್ತು ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದರು" ಎಂದು ಅಮೆರಿಕದ ನಾರ್ತ್ ಟೆಕ್ಸಾಸ್ ವಿಶ್ವವಿದ್ಯಾಲಯದ ಪ್ರತಿನಿಧಿ ಗೀತಾ ಕುರುಬ ಹೇಳಿದರು.

77
Image Credit : Asianet News

ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಕೆವಿಟಿಎಸ್‌ಡಿಸಿ ಅಧ್ಯಕ್ಷೆ ಶಿವಕಾಂತಮ್ಮ ನಾಯಕ್ ಅವರು, ರಾಜ್ಯದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿದ ನಂತರವೂ ಉಚಿತ ಮಾರ್ಗದರ್ಶನ ಮತ್ತು ನಿರಂತರ ಬೆಂಬಲ ಒದಗಿಸುವ ಭರವಸೆ ನೀಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಬೆಂಗಳೂರು
ಶಿಕ್ಷಣ
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್; ಒಳಮೀಸಲಾತಿ ಬಗ್ಗೆ ಮಹತ್ವದ ಘೋಷಣೆ!
Recommended image2
ಒಳಮೀಸಲಾತಿ ಜಾರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ದಿಢೀರ್ ಮುಂದೂಡಿದ್ದೇಕೆ
Recommended image3
LPG vs Induction stove: ಗ್ಯಾಸ್ ಸಿಲಿಂಡರ್-ಇಂಡಕ್ಷನ್ ಸ್ಟೌ ಎರಡರಲ್ಲಿ ಯಾವುದು ಅಡುಗೆ ಮಾಡಲು ಕಡಿಮೆ ಖರ್ಚು?
Related Stories
Recommended image1
ಬೆಂಗಳೂರಿನಲ್ಲಿ ಮೇ 3ರಂದು ಎಜುಕೇಷನ್ ಎಕ್ಸ್‌ಪೋ ಮತ್ತು ಉದ್ಯೋಗ ಮೇಳ
Recommended image2
Now Playing
ಮೇ.24-25ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮೆಗಾ ಎಜುಕೇಶನ್ ಎಕ್ಸ್‌ಪೋ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved