ಗೌರಿ ಹಬ್ಬದ ಸಡಗರ ಬಲು ಜೋರು… ಸಂಭ್ರಮದಲ್ಲಿ ಮಿಂಚಿದ ಕನ್ನಡದ ತಾರೆಯರು
ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಜೋರಾಗಿಯೇ ಇದೆ. ಇಂದು ಗೌರಿ ಹಬ್ಬದ ದಿನ ನಟಿಯರು ಯಾವ ರೀತಿ ಹಬ್ಬ ಆಚರಿಸಿದರು ನೋಡಿ.

ಗೌರಿ ಗಣೇಶ ಹಬ್ಬದ ಸಂಭ್ರಮ
ದೇಶಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಇಂದು ಗೌರಿ ಹಬ್ಬವನ್ನು ಮನೆಯಲ್ಲಿ ಆಚರಿಸಿ ಹೆಂಗಳೆಯರು ಸಂಭ್ರಮಿಸುತ್ತಿದ್ದಾರೆ. ಕನ್ನಡದ ನಟಿಯರು ಸಹ ಸಂಭ್ರಮದಿಂದ ಹಬ್ಬ ಆಚರಿಸಿ, ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.
ಪ್ರಣೀತಾ ಸುಭಾಷ್ :
ಚಂದನವನದ ಮುದ್ದು ಸುಂದರಿ ಪ್ರಣೀತಾ ಸುಭಾಷ್, ತಮ್ಮ ಮುದ್ದಿನ ಮಗಳ ಜೊತೆಗೆ ಸಾಂಪ್ರಾದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ನನ್ನ ಸಿರಿ ಗೌರಿಯಿಂದ ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.
ಸಾನ್ಯಾ ಅಯ್ಯರ್ :
ಬಿಳಿ, ಹಳದಿ ಬಣ್ಣದ ಸೀರೆಯುಟ್ಟು ಉದ್ದಕ್ಕೆ ಜಡೆ ಬಿಟ್ಟು, ಜಡೆ ತುಂಬಾ ಹೂವು ಮುಡಿದು, ಹೂವಿನ ರಂಗೋಲಿ ಹಾಕುತ್ತಿರುವ ಫೋಟೊ ಶೇರ್ ಮಾಡಿರುವ ಸಾನ್ಯಾ ಅಯ್ಯರ್ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಪ್ರಿಯಾಂಕ ಉಪೇಂದ್ರ :
ಕನ್ನಡದ ನಟಿ ಪ್ರಿಯಾಂಕಾ ಉಪೇಂದ್ರ ಎಲ್ಲಾ ಹಬ್ಬಗಳನ್ನು ಸಹ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಗೌರಿ ಹಬ್ಬದ ದಿನವೂ ಕೂಡ ಸಿಂಪಲ್ ಆಗಿ ರೆಡಿಯಾಗಿ ಹಬ್ಬದ ಸಂಭ್ರಮವನ್ನು ಸವಿದು, ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಖುಷಿ ರವಿ :
ಕೆಂಪು ಸೀರೆ ಧರಿಸಿರುವ ದಿಯಾ ಸಿನಿಮಾ ನಟಿ ಖುಷಿ ರವಿ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.
ಜಾಹ್ನವಿ :
ಕನ್ನಡ ನಿರೂಪಕಿ ಹಾಗೂ ಸಿನಿಮಾ ನಟಿ ಜಾಹ್ನವಿ ಅವರು ಮಣ್ಣಿನಿಂದ ಗಣೇಶನ ಮೂರ್ತಿಯನ್ನು ಮಾಡುತ್ತಿರುವ ಪಾರ್ವತಿಯಂತೆ ತಯಾರಾಗಿ ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದಿದ್ದಾರೆ.
ಗೌತಮಿ ಜಾದವ್ :
ಹಬ್ಬದ ದಿನ ಮನೆಗೆ ಗಿಡ ತಂದಿರುವ ನಟಿ ಗೌತಮಿ ಜಾದವ್, ಈ ಗೌರಿ ಹಬ್ಬ,ನಾವು ಮನೆಗೆ ಶಾಂತತೆ ಮತ್ತು ಸೌಂದರ್ಯದ ಜೀವಂತ ಜ್ಞಾಪನೆಯನ್ನು ತರಲು ಈ ಗಿಡವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವು ಅವಳಿಗೆ "ಗೌರಿ" ಎಂದು ಹೆಸರಿಸಿದ್ದೇವೆ - ಸಂಪ್ರದಾಯದಲ್ಲಿ ಬೇರೂರಿದೆ, ಪ್ರೀತಿಯಿಂದ ಬೆಳೆಯುತ್ತಿದೆ. ಎಂದು ಬರೆದುಕೊಂಡಿದ್ದಾರೆ.
ರಾಗಿಣಿ ದ್ವಿವೇದಿ :
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಕಡು ನೀಲಿ ಬಣ್ಣದ ಸೀರೆಯುಟ್ಟು, ಚಿನ್ನಾಭರಣಗಳನ್ನು ಧರಿಸಿ, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಅರ್ಚನಾ ಕೊಟ್ಟಿಗೆ :
ಇನ್ನು ಹೊಸದಾಗಿ ಮದುವೆಯಾಗಿರುವ ನಟಿ ಅರ್ಚನಾ ಕೊಟ್ಟಿಗೆ, ತಮ್ಮ ಗಂಡನ ಮನೆಯಲ್ಲಿ ಅತ್ತೆಯ ಜೊತೆ ಗೌರಿ ಹಬ್ಬವನ್ನು ಆಚರಿಸುತ್ತಿರುವ ಫೋಟೊ ಶೇರ್ ಮಾಡಿ, ಅತ್ತೆಯನ್ನು ಇಂಪ್ರೆಸ್ ಮಾಡುತ್ತಿದ್ದೇನೆ ಎಂದಿದ್ದಾರೆ.
ಶರಣ್ಯ ಶೆಟ್ಟಿ :
ಹಬ್ಬದ ಪ್ರಯುಕ್ತ ನಟಿ ಶರಣ್ಯ ಶೆಟ್ಟಿ ಈಶಾ ಪೌಂಡೇಶನ್ ಗೆ ತೆರಳಿದ್ದು, ಅಲ್ಲಿ ಶಿವನ ಮುಂದೆ ಕುಳಿತಿರುವ ಫೋಟೊಗಳನ್ನು ಶೇರ್ ಮಾಡಿ ಗೌರಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.