- Home
- Entertainment
- Sandalwood
- ಚಿಂಟು ಅಣ್ಣನ ಜೊತೆ ಕಾಣಿಸಿಕೊಂಡ ರಿಷಬ್ ಪತ್ನಿಗೆ ಥ್ಯಾಂಕ್ಸ್ ಹೇಳಿದ ಫ್ಯಾನ್ಸ್… ವೈರಲ್ ಫೋಟೊದ ಗುಟ್ಟೇನು?
ಚಿಂಟು ಅಣ್ಣನ ಜೊತೆ ಕಾಣಿಸಿಕೊಂಡ ರಿಷಬ್ ಪತ್ನಿಗೆ ಥ್ಯಾಂಕ್ಸ್ ಹೇಳಿದ ಫ್ಯಾನ್ಸ್… ವೈರಲ್ ಫೋಟೊದ ಗುಟ್ಟೇನು?
ಚಂದನವನದಿಂದ ತುಂಬಾ ದಿನದಿಂದ ಕಣ್ಮರೆಯಾಗಿರುವ ರಕ್ಷಿತ್ ಶೆಟ್ಟಿ, ಇದೀಗ ರಿಷಬ್ ಶೆಟ್ಟಿ ಮನೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ರಿಷಬ್ ಪತ್ನಿ ಪ್ರಗತಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆದರೆ ಇದು ಹಳೆ ಫೋಟೊ ಅಂತಿದ್ದಾರೆ ಜನ.

ಸಹೋದರತೆಯನ್ನು ಸಾರುವ ರಾಖಿ ಹಬ್ಬ ಅಂದರೆ ರಕ್ಷಾ ಬಂಧನ ಸಡಗರ ಸಂಭ್ರಮದಿಂದ ಆಗಸ್ಟ್ 9ನೇ ತಾರೀಕಿನಂದು ನಡೆದಿದೆ. ಈ ಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಫೊಟೊಗಳು ವೈರಲ್ ಆಗುತ್ತಿದ್ದು, ಜನರಂತೂ ಇದು ಹೊಸ ಫೋಟೊ ಎಂದು ಕೊಂಡು ರಕ್ಷಿತ್ ದರ್ಶನ ಮಾಡಿಸಿದ್ದಕ್ಕೆ ಪ್ರಗತಿಗೆ ಥ್ಯಾಂಕ್ಸ್ ಹೇಳ್ತಿದ್ದಾರೆ.
ಅಂದ ಹಾಗೇ ರಕ್ಷಿತ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಮೊದಲಿನಿಂದಲೇ ಸ್ನೇಹಿತರು. ರಿಷಬ್ ಶೆಟ್ಟಿ ಪರಿಚಯವಾಗಿದ್ದೇ, ರಕ್ಷಿತ್ ಮೂಲಕ. ಪ್ರಗತಿ ಅವರು ರಕ್ಷಿತ್ ಗೆ ಅಣ್ಣನ ಸ್ಥಾನ ಕೊಟ್ಟಿದ್ದಾರೆ ಹಾಗೂ ಅವರು ಚಿಂಟು ಅಣ್ಣ ಎಂದೇ ಕರೆಯುತ್ತಾರೆ, ಪ್ರತಿ ವರ್ಷ ರಕ್ಷಾ ಬಂಧನದಂದು ರಕ್ಷಿತ್ ಶೆಟ್ಟಿಗೆ ರಾಖಿ ಕಟ್ಟಿ ಆರತಿ ಮಾಡಿ, ಆಶೀರ್ವಾದ ಪಡೆದುಕೊಳ್ಳುವುದು ಪ್ರಗತಿ ಶೆಟ್ಟಿ ಸಂಪ್ರದಾಯ.
ಕಳೆದ ವರ್ಷ ಪ್ರಗತಿ ತಮ್ಮ ಪ್ರೀತಿಯ ಚಿಂಟು ಅಣ್ಣನಿಗೆ ರಕ್ಷಾಬಂಧನದ ದಿನ ರಾಖಿ ಕಟ್ಟಿದ ಫೋಟೊಗಳನ್ನು ಜನ ಸೋಶಿಯಲ್ ಮೀಡಿಯಾದಲ್ಲಿ ಈ ವರ್ಷವು ಶೇರ್ ಮಾಡಿದ್ದು, ಜನರು ಇದು ಈ ವರ್ಷದ ಫೋಟೊ ಅಂದುಕೊಂಡು ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಕಾರಣ, ಹಲವು ಸಮಯದಿಂದ ಮುಖ ದರ್ಶನವೇ ಸಿಗದೇ ಮರೆಯಾಗಿದ್ದ ರಕ್ಷಿತ್ ಅವರ ಮುಖ ಕೊನೆಗೂ ದರ್ಶನ ಆಯ್ತಲ್ಲಾ, ಎಂದು ಸಂಭ್ರಮಿಸಿ, ಪ್ರಗತಿ ಶೆಟ್ಟಿಗೆ ಥ್ಯಾಂಕ್ಯೂ ಹೇಳುತ್ತಿದ್ದಾರೆ.
ಒಬ್ಬರು ಅಭಿಮಾನಿ ಫೈನಲಿ ಶೆಟ್ರು ಕಾಣಿಸಿಕೊಂಡ್ರು ಅಂದ್ರೆ, ಮತ್ತೊಬ್ಬರು ಶೆಟ್ಟಿ ಬದುಕಿದ್ದಾರೆ ಅಭಿಮಾನಿಗಳು ಶಾಂತ ರೀತಿಯಿಂದ ವರ್ತಿಸಬೇಕು ಎನ್ನುತ್ತಿದ್ದಾರೆ. ಇನ್ನೂ ಒಬ್ಬರು ಶೆಟ್ರು ದರ್ಶನ ಕೊಡೊ ತರ ಮಾಡಿದ ಅಕ್ಕಾಗೆ ಧನ್ಯವಾದಗಳು, ಅಂದ್ರೆ , ಮಗದೊಬ್ಬರು ಶೆಟ್ರು ಕಾಣೆ ಆಗಿದ್ರು ಈವಾಗ ಸಿಕ್ಕಿದ್ದಾರೆ.. ಕೊನೆಯದಾಗಿ ಸಪ್ತ ಸಾಗರದಾಚೆಗೆ ಸಿನಿಮಾ ಮಾಡಿದ್ದು,.. ಅಲ್ಲಿಂದ ಕಂಡೆ ಇಲ್ಲ ಎನ್ನುತ್ತಿದ್ದಾರೆ. ಈವಾಗ ನೋಡಿ ಖುಷಿಯಾಯ್ತು ಎಂದು ಸಹ ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಹಲವು ಜನರು ಇದು ಓಲ್ಡ್ ಫೋಟೋ.....ಎನ್ನುತ್ತಿದ್ದಾರೆ, ಮತ್ತೊಬ್ಬರು. ನಮ್ ಶೆಟ್ರು ಪೆರ್ಡೂರ್ ಜೋಗಿಬೆಟ್ಟು ಹತ್ರ ಅವ್ರದ್ದೇ ರೆಸಾರ್ಟ್ ಇದೆ, ಅಲ್ಲಿ ಇರ್ತಾರೆ. ಈಗ ಇನ್ನೊಂದು ಮೂವಿ ಸ್ಟೋರಿ ರೆಡಿ ಆಗ್ತಾ ಇದೆ.. ಹಾಗಾಗಿ ಜಾಸ್ತಿ ಟೈಮ್ ರೆಸಾರ್ಟ್ ಅಲ್ಲಿ ಇರ್ತಾರೆ ಎನ್ನುವ ಕ್ಲಾರಿಫಿಕೇಶನ್ ಕೂಡ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಚಂದನವನದಿಂದ ಕಣ್ಮರೆಯಾಗಿರುವ ರಕ್ಷಿತ್ ಶೆಟ್ಟಿಯವರನ್ನು ನೋಡೋದಕ್ಕೆ, ಅವರ ರಿಚರ್ಡ್ ಆಂಟನಿ ಸಿನಿಮಾ ನೋಡೋದಕ್ಕೆ ಜನರು ಕಾಯುತ್ತಿದ್ದಾರೆ.