ಶ್ರೀಕೃಷ್ಣ ಜನ್ಮಾಷ್ಟಮಿಯಂದು ಯಶೋದೆಯಾದ ನಟಿ ಪ್ರಣಿತಾ ಸುಭಾಷ್
ಚಂದನವನದ ಜನಪ್ರಿಯ ನಟಿ ಪ್ರಣಿತಾ ಸುಭಾಷ್ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ತಮ್ಮ ಮುದ್ದು ಮಗ ಜೈಗೆ ಕೃಷ್ಣನ ವೇಷ ಧರಿಸಿ, ತಾವು ಯಶೋದೆಯಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

ಪೊರ್ಕಿ ಸಿನಿಮಾ ಮೂಲಕ ಕನ್ನಡ ಚಲನಚಿತ್ರ ಇಂಡಷ್ಟ್ರಿಗೆ ಎಂಟ್ರಿ ಕೊಟ್ಟು ಬಳಿಕ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ನಟಿ ಪ್ರಣಿತಾ ಸುಭಾಷ್ (Pranitha Subhassh), ಸದ್ಯ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ, ಆದಾರೂ ತಮ್ಮ ಗ್ಲಾಮರ್ ಮೂಲಕ ಸದ್ದು ಮಾಡುತ್ತಿರುತ್ತಾರೆ.
ಇದೀಗ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಪ್ರಣಿತಾ ತಮ್ಮ ಮುದ್ದಿನ ಮಗ ಜೈ ಜೊತೆಗೆ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಈ ಸುಂದರವಾದ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಮ್ಮ -ಮಗ ಥೇಟ್ ಯಶೋದೆ-ಕೃಷ್ಣನಂತೆಯೇ ಕಾಣುತ್ತಿದ್ದಾರೆ.
ಆಗಸ್ಟ್ 15ರಂದು ದೇಶಾದ್ಯಂತ ಹಲವೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಣಿತಾ ಕೂಡ, ಯಶೋದೆಯಂತೆ ರೆಡಿಯಾಗಿ, ಮಗನನ್ನು ಕೃಷ್ಣನಂತೆ ರೆಡಿ ಮಾಡಿ, ಮುದ್ದಾದ ಫೋಟೊ ಶೂಟ್ ಮಾಡಿಸಿದ್ದಾರೆ. ಮಗುವಿನ ತುಂಟಾಟ, ಪ್ರಣಿತಾ ಕಣ್ಣೋಟ ಎಲ್ಲವೂ ಮುದ್ದಾಗಿ ಕಂಡು ಬಂದಿದೆ.
ಈ ಫೋಟೊಗಳ ಜೊತೆಗೆ ಪ್ರಣಿತಾ ಕೃಷ್ಣ ಜನ್ಮಾಷ್ಟಮಿ, ನನ್ನ ಫೇವರಿಟ್ ಫೆಸ್ಟಿವಲ್, ಫೇವರಿಟ್ ದೇವರು, ನನ್ನ ಮಗ ಮೊದಲ ಬಾರಿ ಶ್ರೀಕೃಷ್ಣನಾಗಿ ತಯಾರಾಗಿದ್ದು ಎಂದು ಬರೆದುಕೊಂಡಿದ್ದಾರೆ. ಪ್ರಣಿತಾ ಕೆಂಪು ಬಣ್ಣದ ಸೀರೆಯುಟ್ಟಿದ್ದರೆ, ಮಗನಿಗೆ ಪಂಚೆ ತೊಡಿಸಿದ್ದಾರೆ.
ಪ್ರಣಿತಾ ಸುಭಾಷ್ ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿರುವಾಗಲೇ 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2022ರಲ್ಲಿ ಮೊದಲ ಮಗುವಿಗೂ, ಕಳೆದ ವರ್ಷ ಎರಡನೇ ಮಗು ಜೈಗೂ ಜನ್ಮ ನೀಡಿದರು. ಇದೇ ಆಗಸ್ಟ್ 18ರಂದು ಜೈ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈ ಎರಡರ ಸಂಭ್ರಮದಲ್ಲಿರುವ ಬ್ಯೂಟಿ ಪ್ರಣಿತಾ ಸುಭಾಷ್, ಸದ್ಯ ಸಿನಿಮಾದಿಂದ ದೂರವಿದ್ದು, ಆದರೆ ಫ್ಯಾಷನ್ ಶೋ, ಫ್ಯಾಷನ್ ಈವೆಂಟ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಇತ್ತೀಚೆಗೆ ಕೇನ್ಸ್ ಫಿಲಂ ಫೆಸ್ಟಿವಲ್ ನಲ್ಲೂ ಭಾಗಿಯಾಗಿದ್ದರು.
ಪ್ರಣಿತಾ ಸುಭಾಷ್ ಕೊನೆಯದಾಗಿ ಕನ್ನಡದಲ್ಲಿ ರಾಮನ ಅವತಾರ ಸಿನಿಮಾದಲ್ಲಿ ನಟಿಸಿದ್ದರು. ಅದಕ್ಕೂ ಮೊದಲು ತಂಗಮನಿ ಎನ್ನುವ ಮಲಯಾಲಂ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಮುಂದೆ ಯಾವಾಗ ಬಿಗ್ ಸ್ಕ್ರೀನ್ ಮೇಲೆ ನಟಿಸಲಿದ್ದಾರೆ ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ.