- Home
- Entertainment
- Sandalwood
- ರಾಧಿಕಾ ಪಂಡಿತ್ Before and After ಫೋಟೋ ವೈರಲ್; ಯಶ್ ಜೊತೆ ಫೋಟೋ ಹಾಕಿಲ್ಲವೆಂದರೆ ಇನ್ ಸ್ಟಾಗ್ರಾಮ್ ಬಿಡ್ತೀನಿ ಎಂದ ಫ್ಯಾನ್ಸ್
ರಾಧಿಕಾ ಪಂಡಿತ್ Before and After ಫೋಟೋ ವೈರಲ್; ಯಶ್ ಜೊತೆ ಫೋಟೋ ಹಾಕಿಲ್ಲವೆಂದರೆ ಇನ್ ಸ್ಟಾಗ್ರಾಮ್ ಬಿಡ್ತೀನಿ ಎಂದ ಫ್ಯಾನ್ಸ್
ವೈರಲ್ ಆಯ್ತು ಸ್ವತಃ ರಾಧಿಕಾ ಪಂಡಿತ್ ಶೇರ್ ಮಾಡಿರುವ Before and After ಫೋಟೋ. ಯಾಕೆ ಮೇಡಂ ಅಣ್ಣ ಕಾಣಿಸುತ್ತಿಲ್ಲ ಎಂದ ನೆಟ್ಟಿಗರು....

ಕನ್ನಡ ಚಿತ್ರರಂಗದ ಮನೆ ಮಗಳು ಅಂತ ಕರೆಸಿಕೊಂಡಿರುವ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ Before and After ಫೋಟೋ ಅಪ್ಲೋಡ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ರಾಧಿಕಾ ಸಿಂಪಲ್ ಆಗಿ ಮಿಂಚುತ್ತಿದ್ದಾರೆ.
After ಫೋಟೋದಲ್ಲಿ ಐರಾ ಮತ್ತು ಯಥರ್ವ್ ಬಂದು ಫೋಟೋ ಬಾಂಬ್ ಮಾಡಿದ್ದಾರೆ. ಮೂವರು ಕೂಲಿಂಗ್ ಗ್ಲಾಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.
ಅತ್ತಿಗೆ ದಯವಿಟ್ಟು ಅಣ್ಣನ ಫೋಟೋ ಅಪ್ಲೊಡ್ ಮಾಡಿ. ಇದೇ ಕೊನೇ ಸಲ ನಾನು ಕೇಳುತ್ತಿರುವುದು ಇಲ್ಲ ಅಂದ್ರೆ ನಾನು ಇನ್‌ಸ್ಟಾಗ್ರಾಂ ಡಿಲೀಟ್ ಮಾಡ್ತೀನಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಐರಾ ಮತ್ತು ಯಥರ್ವ್‌ಗೆ ಡಿಫರೆಂಟ್ ಫ್ಯಾನ್ ಬೇಸ್ ಇದೆ. ಇಬ್ಬರು ಹುಟ್ಟಿದ ಮರು ಕ್ಷಣವೇ ಫ್ಯಾನ ಪೇಜ್ ಕ್ರಿಯೇಟ್ ಆಗಿ ಸ್ಟಾರ್ ಕಿಡ್ ಪಟ್ಟ ಪಡೆದುಕೊಂಡಿದ್ದಾರೆ.
ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2ರ ನಂತರ ಯಶ್ ಮುಂದಿನ ಸಿನಿಮಾ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಇನ್ನೂ ಮಾಡಿಲ್ಲ ಎಂದು ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ.