- Home
- Entertainment
- Sandalwood
- ಜೈಲಿನಲ್ಲಿದ್ದುಕೊಂಡೇ ಗುಡ್ ನ್ಯೂಸ್ ಕೊಟ್ಟ Darshan Thoogudeepa; ಮಾಹಿತಿ ಕೊಟ್ಟ ಪತ್ನಿ ವಿಜಯಲಕ್ಷ್ಮೀ!
ಜೈಲಿನಲ್ಲಿದ್ದುಕೊಂಡೇ ಗುಡ್ ನ್ಯೂಸ್ ಕೊಟ್ಟ Darshan Thoogudeepa; ಮಾಹಿತಿ ಕೊಟ್ಟ ಪತ್ನಿ ವಿಜಯಲಕ್ಷ್ಮೀ!
ನಟ ದರ್ಶನ್ ತೂಗುದೀಪ ನಟನೆಯ ʼದಿ ಡೆವಿಲ್ʼ ಸಿನಿಮಾದ ʼಇದ್ರೆ ನೆಮ್ಮದಿಯಾಗ್ ಇರ್ಬೇಕ್ʼ ಎಂಬ ಹಾಡು ರಿಲೀಸ್ ಆಗಬೇಕಿತ್ತು. ಆದರೆ ದರ್ಶನ್ ಜೈಲಿಗೆ ಹೋಗುತ್ತಿದ್ದಂತೆ ಹಾಡು ರಿಲೀಸ್ ಮುಂದಕ್ಕೆ ಹೋಗಿದೆ. ಈಗ ಮತ್ತೆ ಗುಡ್‌ನ್ಯೂಸ್ ಸಿಕ್ಕಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ತೂಗುದೀಪ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ಹಿಂದೆಯೇ ರಿಲೀಸ್ ಆಗಬೇಕಿದ್ದು ದರ್ಶನ್ ನಟನೆಯ ʼದಿ ಡೆವಿಲ್ʼ ಸಿನಿಮಾ ಹಾಡು ಈಗ ರಿಲೀಸ್ ದಿನಾಂಕವನ್ನು ಘೋಷಿಸಿದೆ.
ಆಗಸ್ಟ್ 24 ಭಾನುವಾರ ಬೆಳಗ್ಗೆ 10.05 ಕ್ಕೆ ʼದಿ ಡೆವಿಲ್ʼ ಸಿನಿಮಾದ ಮೊದಲನೆ ಹಾಡು ಬಿಡುಗಡೆಯಾಗಲಿದೆ. ಈ ಬಗ್ಗೆ ದರ್ಶನ್ ತೂಗುದೀಪ ಅವರು ಪತ್ನಿ ವಿಜಯಲಕ್ಷ್ಮೀ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ದರ್ಶನ್ ಸೋಶಿಯಲ್ ಮೀಡಿಯಾ ಖಾತೆಯನ್ನು ತಾನೇ ಹ್ಯಾಂಡಲ್ ಮಾಡೋದಾಗಿ ವಿಜಯಲಕ್ಷ್ಮೀ ಹೇಳಿದ್ದರು.
ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಎನ್ನುವ ಹಾಡು ರಿಲೀಸ್ ಆಗುತ್ತಿದೆ. ಈ ಹಾಡು ರಿಲೀಸ್ ಆಗಬೇಕಿದ್ದ ಹಿಂದಿನ ದಿನವೇ ದರ್ಶನ್ ಅವರ ಜಾಮೀನು ರದ್ದಾಗಿ ಜೈಲು ಸೇರಿದ್ದರು. ಹೀಗಾಗಿ ಈ ಹಾಡು ರಿಲೀಸ್ ಮಾಡೋದನ್ನು ಮುಂದಕ್ಕೆ ಹಾಕಲಾಗಿತ್ತು.
ʼದಿ ಡೆವಿಲ್ʼ ಸಿನಿಮಾಕ್ಕೆ ಒಟ್ಟೂ 40 ಕೋಟಿ ರೂಪಾಯಿ ಬಜೆಟ್ ಹಾಕಲಾಗಿದೆಯಂತೆ. ದರ್ಶನ್ ಜೈಲಿಗೆ ಹೋದ ಕಾರಣಕ್ಕೆ ಈ ಸಿನಿಮಾ ರಿಲೀಸ್ ತಡವಾಗಿದೆ. ದರ್ಶನ್ ಅವರಿಗೆ ಜಾಮೀನು ಸಿಕ್ಕ ಬಳಿಕ, ಅವರು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದರು. ಜಾಮೀನು ವಿಷಯ ಏನು ಬೇಕಿದ್ರೂ ಆಗಬಹುದು ಎಂದು ಅವರು ರಾಜಸ್ಥಾನದಲ್ಲಿ 24/7 ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರಂತೆ.
ʼದಿ ಡೆವಿಲ್ʼ ಸಿನಿಮಾ ರಿಲೀಸ್ ಡೇಟ್ ತಡವಾಗುತ್ತಿದೆ. ಈ ಸಿನಿಮಾ ನಿರ್ಮಾಪಕ ಪ್ರಕಾಶ್ ಅವರು ಕೂಡ ತಲೆ ಕೆಡಿಸಿಕೊಂಡಿದ್ದಾರೆ ಎಂದು ಇನ್ನುಳಿದ ನಿರ್ಮಾಪಕರು ಅಭಿಪ್ರಾಯಪಟ್ಟಿದ್ದರು. ಈ ವರ್ಷ ದರ್ಶನ್ ಅನುಪಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆಯಾ? ಇಲ್ಲವೇ ಎಂದು ಕಾದು ನೋಡಬೇಕಿದೆ.