ಚಕ್ಕೋತ ಚಕ್ಕೋತ… To ಚಿಕು ಬುಕು ರೈಲು… ಬಿ ಜಯಶ್ರೀ ಹಾಡಿದ ಯಾವ ಹಾಡು ನಿಮಗಿಷ್ಟ?
ಕನ್ನಡ ಚಿತ್ರರಂಗ, ರಂಗಭೂಮಿಯಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ, ಗಾಯಕಿಯಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದವರು ಬಿ ಜಯಶ್ರೀ. ತಮ್ಮ ವಿಭಿನ್ನವಾದ ಧ್ವನಿಯ ಮೂಲಕವೇ ಕನ್ನಡಿಗರ ಮನಗೆದ್ದ ಗಾಯಕಿಯ ಹಾಡುಗಳಲ್ಲಿ ನಿಮಗಿಷ್ಟವಾದ ಹಾಡು ಯಾವುದು?

ಬಿ ಜಯಶ್ರೀ
ಬಿ ಜಯಶ್ರೀ (B Jayashree) ಕುರಿತು ಗೊತ್ತಿರದ ಕನ್ನಡಿಗರೇ ಇಲ್ಲ. ಗುಬ್ಬಿ ವೀರಣ್ಣನವರ ಮೊಮ್ಮಗಳು ಹೌದು ಅದರ ಜೊತೆಗೆ ರಂಗಭೂಮಿ ಕಲಾವಿದೆ, ಸಿನಿಮಾ ಕಿರುತೆರೆ ನಟಿ, ಗಾಯಕಿ ಅಷ್ಟೇ ಅಲ್ಲ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ಕನ್ನಡ ಚಿತ್ರರಂಗದಲ್ಲಿ ಇವರು ಹಾಡಿದ ಹಾಡು ಎಷ್ಟೊಂದು ಜನಪ್ರಿಯತೆ ಪಡೆದಿವೆ ಅಂದ್ರೆ, ಇಂದಿಗೂ ಜನರು ಈ ಹಾಡುಗಳನ್ನು ಗುನುಗುತ್ತಿರುತ್ತಾರೆ. ಇಲ್ಲಿ ಬಿ ಜಯಶ್ರೀ ಹಾಡಿದ ಟಾಪ್ ಹಾಡುಗಳು.
ಚಕ್ಕೋತ ಚಕ್ಕೋತ
ಯಾರೆ ನೀನು ಚೆಲುವೆ ಸಿನಿಮಾದ ಚಕ್ಕೋತ ಚಕ್ಕೋತ ಹಾಡು ಪಡ್ಡೆ ಹುಡುಗರು ಕೂಡ ಎದ್ದು ಹೆಜ್ಜೆ ಹಾಕುವಂತೆ ಮಾಡುತ್ತದೆ. ಇಂದಿಗೂ ಜನರು ಗುನುಗುತ್ತಿರುವ ಈ ಹಾಡನ್ನು ಹಾಡಿ, ತಮ್ಮ ಮಾದಕ ಧ್ವನಿಯ ಮೂಲಕ ಕನ್ನಡಿಗರ ಮನಗೆದ್ದ ನಟಿ ಬಿ ಜಯಶ್ರೀ.
ಕಾರ್ ಕಾರ್ ಎಲ್ನೋಡಿ ಕಾರ್
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿದ ಸೂಪರ್ ಹಿಟ್ ಸಿನೆಮಾ ನನ್ನ ಪ್ರೀತಿಯ ಹುಡುಗಿ ಸಿನಿಮಾದ ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್ ಹಾಡು ಅಂದು ಎಷ್ಟೊಂದು ಕ್ರೇಜ್ ಸೃಷ್ಟಿಸಿತ್ತು ಎಂದರೆ, ಬಸ್, ಕಾರು ಎಲ್ಲಾ ಕಡೆಗಳಲ್ಲೂ ಜನರ ಬಾಯಲ್ಲೂ ಇದೇ ಹಾಡು ಗುನುಗುತ್ತಿತ್ತು.
ಬರ್ತಾಳ್ ನೋಡು
ಕನ್ನಡದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ (Malashree) ಅಭಿನಯದ ಆಕ್ಷನ್ ಥ್ರಿಲ್ಲರ್ ಸಿನಿಮಾದ ಬರ್ತಾಳ್ ನೋಡು ದುರ್ಗಿ ಹಾಡು ಟ್ರೆಂಡು ಸೃಷ್ಟಿಸಿ, ಕಿಚ್ಚು ಹಚ್ಚಿದ ಹಾಡು. ಈ ಹಾಡಿನ ಮೂಲಕ ಮಲಾಶ್ರೀಯವರ ಪಾತ್ರವೂ ಮತ್ತಷ್ಟು ಹೈಲೈಟ್ ಆಗಲು ಸಾಧ್ಯವಾಯಿತು. ಈ ಹಾಡಿನ ಮೂಲಕ ತನ್ನ ಕಂಠಸಿರಿಯ ಕಿಚ್ಚು ಹಚ್ಚಿದವರು ಬಿ ಜಯಶ್ರೀ.
ಚುಕು ಬುಕು ರೈಲು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಅಭಿನಯದ ಸೂಪರ್ ಹಿಟ್ ಸಿನಿಮಾ ಜೋಗಿಯಲ್ಲಿ ನಟಿ ಜೆನಿಫರ್ ಚುಕು ಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಆಡುತೈತೋ ಎಂದು ಹಾಡುತ್ತಾ ಶಿವಣ್ಣನ ಹಿಂದೆ ಸುತ್ತಿದ್ದು ನೆನಪಿದ್ಯಾ? ಈ ಹಾಡು ಹಾಡಿರೋದು ಸಹ ಜಯಶ್ರೀಯವರು.
ರಂಭೆ ನೀ ವಯ್ಯಾರದ ರಂಭೆ
ಈ ಹಾಡು 90 ದಶಕದಲ್ಲಿ ಸಂಚಲನ ಸೃಷ್ಟಿಸಿದ ಹಾಡಾಗಿತ್ತು. ಆದಿತ್ಯ ಸಿನಿಮಾದ ಈ ಹಾಡು , ಬಿ ಜಯಶ್ರೀಯವರ ಮಾದಕ ಧನಿಯಲ್ಲಿ ಎಷ್ಟೊಂದು ಅದ್ಭುತವಾಗಿ ಮೂಡಿ ಬಂದಿತ್ತು ಅಂದ್ರೆ ಪಡ್ಡೆಗಳು ಪ್ರೀತಿಯ ಮತ್ತೇರಿಸಿಕೊಂಡು ನಟಿಸುತ್ತಿದ್ದರು.
ಹಠ ಹಠ
ವಿ ರವಿಚಂದ್ರನ್ ನಟಿಸಿರುವ ಹಠವಾದಿ ಸಿನಿಮಾದ ಹಠ ಹಠ ಹಠ ಹಠ, ಗೆಲ್ಲೋನಿಗೆ ಬೇಕು ಹಠ , ದಿಟ ದಿಟ ದಿಟ ದಿಟ, ಗೆಲುವು ಆಗ ದಿಟ ದಿಟ ಹಾಡು ಕೂಡ ಜನಪ್ರಿಯತೆ ಪಡೆದಿತ್ತು. ಬಿ ಜಯಶ್ರಿಯವರ ಮ್ಯಾಜಿಕಲ್ ವಾಯ್ಸಲ್ಲಿ ಈ ಹಾಡು ಜನರಲ್ಲಿ ಗೆಲ್ಲುವ ಛಲವನ್ನು ಮೂಡಿಸಿದ್ದು.
ಬಂದಾ ನೋಡಮ್ಮ
ಡಾ. ವಿಷ್ಣುವರ್ಧನ್ ಅಭಿನಯದ ಕದಂಬ ಸಿನಿಮಾದ ಬಂದಾ ನೋಡಮ್ಮ ಬಂದಾ ನೋಡಮ್ಮ ನಮ್ಮ ಕಂಬ ಈ ಕದಂಬ ಬಂದ ನೋಡಮ್ಮ ಹಾಡು ಜಯಶ್ರೀಯವರ ಧನಿಯಲ್ಲಿ ಪವರ್ ಫುಲ್ ಆಗಿ ಮೂಡಿ ಬಂದಿದ್ದು, ವಿಷ್ಣುವರ್ಧನ್ ಎಂಟ್ರಿಗೆ ಫೈರ್ ನೀಡಿದ್ದು ಸುಳ್ಳಲ್ಲ. ,