- Home
- Entertainment
- Sandalwood
- 'ನನಗೆ ಕಾಮೆಂಟ್ ಮಾಡೋಕೂ ಮುನ್ನ 10 ಬಾರಿ ಸ್ನಾನ ಮಾಡಿ ಬನ್ನಿ': ದರ್ಶನ್ ಫ್ಯಾನ್ಸ್ ವಿರುದ್ಧ ಹರಿಹಾಯ್ದ ಸೋನು ಶೆಟ್ಟಿ
'ನನಗೆ ಕಾಮೆಂಟ್ ಮಾಡೋಕೂ ಮುನ್ನ 10 ಬಾರಿ ಸ್ನಾನ ಮಾಡಿ ಬನ್ನಿ': ದರ್ಶನ್ ಫ್ಯಾನ್ಸ್ ವಿರುದ್ಧ ಹರಿಹಾಯ್ದ ಸೋನು ಶೆಟ್ಟಿ
ನಟ ಕಿಚ್ಚ ಸುದೀಪ್ ವಿರುದ್ಧ ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಕಾಮೆಂಟ್ ಮಾಡುವುದಲ್ಲದೆ, ಟ್ರೋಲ್ ಮಾಡಿದ್ದರಂತೆ. ಹೀಗಾಗಿ ಮಾಡೆಲ್ ಆಗಿರುವ ಸೋನು ಶೆಟ್ಟಿ ಅವರು ದರ್ಶನ್ ಹಾಗೂ ಅವರ ಫ್ಯಾನ್ಸ್ ವಿರುದ್ಧ ಹರಿಹಾಯ್ದಿದ್ದಾರೆ. ಇದೀಗ ತಾರಕಕ್ಕೇರಿದೆ.

ದರ್ಶನ್ ಫ್ಯಾನ್ಸ್ ಹಾಗೂ ಕಿಚ್ಚ ಸುದೀಪ್ ಮಧ್ಯೆ ಸೋನು ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್ ಹಾಗೂ ಅವರ ಫ್ಯಾನ್ಸ್ ಕಂಡ್ರೆ ಇಷ್ಟ ಆಗೋದಿಲ್ಲ, ಅವರು ರೌಡಿ ಆಗೋ ಬದಲು ಹೀರೋ ಆಗಿದ್ದಾರೆ ಎಂದು ಕೂಡ ಸೋನು ಶೆಟ್ಟಿ ಹೇಳಿದ್ದಾರೆ. ಈ ಮಾತು ತಾರಕಕ್ಕೇರಿದ್ದು ಇಷ್ಟೆಲ್ಲ ಅವಾಂತರ ಸೃಷ್ಟಿಸಿದೆ.
ಸೋನು ಶೆಟ್ಟಿ ವಿಡಿಯೋ ನೋಡಿದ ಅಭಿಮಾನಿಗಳು ತುಂಬ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರಂತೆ. ಪದಗಳನ್ನು ಹೇಳಲು ಕೂಡ ಸಾಧ್ಯವಾಗದಷ್ಟರ ಮಟ್ಟಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರಂತೆ. ಆ ಬಳಿಕ ಸೋನು ಶೆಟ್ಟಿ ತಾಯಿಯ ಬಗ್ಗೆಯೂ ಮಾತನಾಡಿದ್ದರಂತೆ. ಇದನ್ನು ಸೋನು ಶೆಟ್ಟಿ ಸಹಿಸಲು ಆಗೋದಿಲ್ಲ ಎಂದಿದ್ದಾರೆ.
“ನೀನು ಸರಿಯಾಗಿ ಬಟ್ಟೆ ಹಾಕೋದು ಕಲಿತುಕೋ, ಆ ರೀತಿ ಬಟ್ಟೆ ಹಾಕಿ ಯಾಕೆ ವಿಡಿಯೋ ಮಾಡ್ತೀಯಾ” ಅಂತೆಲ್ಲ ಕಾಮೆಂಟ್ ಮಾಡ್ತಾರೆ. ನಾನು ಏನಾದರೂ ಬಟ್ಟೆ ಹಾಕಿಕೊಳ್ತೀನಿ, ನನ್ನ ಬಗ್ಗೆ ಕಾಮೆಂಟ್ ಮಾಡೋ ಮುನ್ನ ಹತ್ತು ಬಾರಿ ಸ್ನಾನ ಮಾಡಿ ಬನ್ನಿ ಎಂದು ಅವರು ಹೇಳಿದ್ದಾರೆ.
ಸೋನು ಶೆಟ್ಟಿ ಅವರು, ಈಗ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಹೀಗಾಗಿ ಕಾಮೆಂಟ್‌ನಲ್ಲಿ ಯಾರೂ ಕೂಡ ಏನೂ ಕಾಮೆಂಟ್ ಮಾಡಲಾಗೋದಿಲ್ಲ.
ಸೋನು ಶೆಟ್ಟಿ ಅವರು, “ನಾನು ಕಿಚ್ಚ ಸುದೀಪ್ ಅಭಿಮಾನಿ. ಹೀಗಾಗಿ ನನ್ನನ್ನು ದರ್ಶನ್ ಫ್ಯಾನ್ಸ್ ಟಾರ್ಗೆಟ್ ಮಾಡಿದ್ದಾರೆ. ಇದು ಯಾವ ಮಟ್ಟಕ್ಕೆ ಹೋದರೂ ಕೂಡ ಪರವಾಗಿಲ್ಲ, ನಾನು ಮಾತ್ರ ಸುಮ್ಮನೆ ಇರೋದಿಲ್ಲ. ನಾನು ಆ ಫ್ಯಾನ್ಸ್‌ಗೆ ಬುದ್ಧಿ ಕಲಿಸ್ತೀನಿ” ಎಂದು ಹೇಳಿದ್ದಾರೆ.