- Home
- Entertainment
- News
- ಅಪ್ಪು ಸಾಯುವ ಹಿಂದಿನ ದಿನ ರಮೇಶ್-ಪುನೀತ್ ಮಾತನಾಡಿದ್ದು 'ಈ ವಿಷಯದ ಬಗ್ಗೆ...' ಫ್ಯಾನ್ಸ್ ಭಾವುಕ
ಅಪ್ಪು ಸಾಯುವ ಹಿಂದಿನ ದಿನ ರಮೇಶ್-ಪುನೀತ್ ಮಾತನಾಡಿದ್ದು 'ಈ ವಿಷಯದ ಬಗ್ಗೆ...' ಫ್ಯಾನ್ಸ್ ಭಾವುಕ
Appu last conversation: ಇದೇ ಸಂದರ್ಭದಲ್ಲಿ ನಿರೂಪಕಿ ಅನುಶ್ರಿ ನಟ ರಮೇಶ್ ಅರವಿಂದ್ ಅವರಿಗೆ ನೀವು ಅಪ್ಪು ಜೊತೆ ಕಳೆದ ಕ್ಷಣಗಳನ್ನು ಹೇಳುವಂತೆ ಕೇಳಿಕೊಂಡಾಗ ರಮೇಶ್ ಅಪ್ಪು ಬಗ್ಗೆ ಮಾತನಾಡಿರುವುದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತು.

ಎಲ್ಲರ ಕಣ್ಣಂಚಲ್ಲಿ ನೀರು
ಜೀ ಕನ್ನಡ ವಾಹಿನಿಯಲ್ಲಿ ಮಹಾನಟಿ & ಹಳ್ಳಿ ಪವರ್ 'ಮಹಾಸಂಗಮ' ಪ್ರಸಾರವಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ರತ್ನ, ಅಭಿಮಾನಿಗಳ ಪರಮಾತ್ಮ ಅಪ್ಪು ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಎಲ್ಲರೂ ದೀಪ ಬೆಳಗಿಸಿ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಿರೂಪಕಿ ಅನುಶ್ರಿ ನಟ ರಮೇಶ್ ಅರವಿಂದ್ ಅವರಿಗೆ ನೀವು ಅಪ್ಪು ಜೊತೆ ಕಳೆದ ಕ್ಷಣಗಳನ್ನು ಹೇಳುವಂತೆ ಕೇಳಿಕೊಂಡಾಗ ರಮೇಶ್ ಅಪ್ಪು ಬಗ್ಗೆ ಮಾತನಾಡಿರುವುದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತು.
ಹೀ ಈಸ್ ಲಾಫಿಂಗ್....
ರಮೇಶ್, "ಮೊನ್ನೆ ಮೊನ್ನೆಯಷ್ಟೇ ಅಪ್ಪು ಜೊತೆ ಮಾತನಾಡಿದ ಹಾಗಿದೆ. ಹೀಗೆ ಖುಷಿ ಖುಷಿಯಾಗಿ ಮಾತಾಡಿದ್ದೇವೆ. ನಕ್ಕಿದ್ದೇವೆ. ಮರುದಿನ ಬೆಳಗ್ಗೆ ಅವರು ಇಲ್ಲ ಎಂಬ ನ್ಯೂಸ್ ಕೇಳ್ತೇವೆ. ಅಪ್ಪು ಸಾಯುವ ಮುನ್ನ ನಾವು ಮಾತನಾಡಿದ್ದು ಏನೆಂದರೆ ಬುದ್ಧ ಹೇಳ್ತಾನೆ ಅಪ್ಪು, ನೀನು ಏನೇನು ಇಷ್ಟಪಡ್ತಿಯೋ ಅದನ್ನೆಲ್ಲಾ ಒಂದು ದಿನ ಕಳಕೊಬೇಕಾಗುತ್ತೆ. ಅದೇ ಜೀವನ. ನಿನಗೆ ಕೂದಲು ಇಷ್ಟ ಅಲ್ವಾ ಅದು ಒಂದು ದಿನ ಹೋಗುತ್ತೆ. ನಿನಗೆ ಯೌವ್ವನ ಅಂತ ಜಂಭ ಅಲ್ವಾ ಅದು ಒಂದು ದಿನ ಹೋಗಿಬಿಡುತ್ತೆ. ನಗ್ತಾ ಇರ್ತಿಯಾ ಅಲ್ವಾ ಹಲ್ಲು ಅದು ಒಂದು ದಿನ ಹೋಗಿಬಿಡುತ್ತೆ ಅಂದ್ರೆ ಅಪ್ಪು ಬಂದು ಅದನ್ನೆಲ್ಲಾ ಕೇಳಿಸಿಕೊಂಡು ಹೀ ಈಸ್ ಲಾಫಿಂಗ್. ಏನೇನೋ ಮಾತಾಡಿದ್ದೇವೆ ಸಂಬಂಧನೆ ಇಲ್ಲದೆ ಅಂದು ನಾವು" ಎಂದು ಹೇಳಿದ್ದಾರೆ.
"ಸೋ ವೆಲ್ ಡಿಸರ್ವರ್ಡ್"
ಮರುದಿನ ಬೆಳಗ್ಗೆ ಅಪ್ಪು ಸಾವಿನ ಸುದ್ದಿನ ಕೇಳಿದಾಗ ನನಗನಿಸಿದ್ದು.."ನಿನ್ನೆ ಈ ತರಹವೆಲ್ಲಾ ಮಾತನಾಡಿದ್ದೇವೆ ಎಂದು ನಮಗೆ ನಾವೇ ಬೇರೆ ಅರ್ಥಗಳನ್ನೆಲ್ಲಾ ಕಟ್ಟಿಕೊಳ್ತೀವಿ. ಅಪ್ಪು 100 ನೇ ದಿನ ಕಾರ್ಯಕ್ರಮದಲ್ಲಿ ನಾನಿದನ್ನ ಮಾತನಾಡಿದ್ದೇನೆ. ವೀಕೆಂಡ್ ವಿಥ್ ರಮೇಶ್ ಕುರ್ಚಿಯಲ್ಲಿ ಫಸ್ಟ್ ಅತಿಥಿ ಅವರು. ಡಾನ್ಸ್, ಫೈಟ್ ಅದನ್ನೆಲ್ಲಾ ದಾಟಿ ಆ ವ್ಯಕ್ತಿಯಲ್ಲಿ ಇದೆಯಲ್ಲ ಒಳ್ಳೆತನ. ಅದು ಅವರನ್ನ ಕರ್ನಾಟಕ ರತ್ನ ಮಾಡಿದ್ದು. ಸೋ ವೆಲ್ ಡಿಸರ್ವರ್ಡ್" ಎಂದು ಪ್ರಶಂಸೆ ವ್ಯಕ್ತಪಡಿದ್ದಾರೆ ರಮೇಶ್.
ಬಹಳ ಇಷ್ಟವಾಗುತ್ತೆ ಅವರ ವ್ಯಕ್ತಿತ್ವ
"ಇವತ್ತಿಗೂ ಅಪ್ಪು ಅವರನ್ನ ನೆನಪು ಮಾಡಿಕೊಂಡ್ರೆ ಒಂದು ಕಹಿಯಾದ ಭಾವನೆ ಬರಲ್ಲ. ಯಾರೇ ಆಗಲಿ, ಒಂದಲ್ಲ ಒಂದು ಸಾರಿ ಒಬ್ರ ಬಗ್ಗೆ ತಪ್ಪಾಗಿ ಮಾತಾಡ್ತಾರೆ. ತಪ್ಪಾಗಿ ಕೆಲವು ವಿಷಯಗಳನ್ನ ಹೇಳ್ತಾರೆ. ಆ ತರಹ ಅಪ್ಪು ಜೊತೆ ಎಂದೂ ಆಗಿಲ್ಲ. ನನಗಂತೂ ಪರ್ಸನಲಿ. ಅದಕ್ಕೆ ಬಹಳ ಇಷ್ಟವಾಗುತ್ತೆ ಅವರ ವ್ಯಕ್ತಿತ್ವ" ಎಂದಿದ್ದಾರೆ ರಮೇಶ್.
ಅಪ್ಪು ಫೋಟೋ ಇಂದಿಗೂ ತೆಗೆದಿಲ್ಲ. ತೆಗೆಯೊಲ್ಲ
ಇದೇ ಸಂದರ್ಭದಲ್ಲಿ ನಟಿ ನಿಶ್ವಿಕಾ ನಾಯ್ಡು ಕೂಡ ಅಪ್ಪು ಬಗ್ಗೆ ಮಾತನಾಡಿದ್ದು, ಪ್ರತಿ ಸಾರಿ ಅವರ ಬಗ್ಗೆ ಮಾತನಾಡುವಾಗ ಮನಸ್ಸು ಭಾರವಾಗುತ್ತೆ. ಕಣ್ಣು ಒದ್ದೆಯಾಗುತ್ತೆ. ಯಾವತ್ತು ಅವರ ಜೊತೆ ಸ್ಕ್ರೀನ್ ಶೇರ್ ಮಾಡೋಕೆ ಆಗ್ಲಿಲ್ಲ, ಆ ಅವಕಾಶ ಹೊರಟು ಹೋಯ್ತಲ್ಲ ಎಂಬುದು ನನಗೊಂದು ಕೊರಗಾದರೆ, ಅವರು ನನ್ನ ಎರಡು ಸಿನಿಮಾಗಳಿಗೆ ಹಾಡಿದ್ದಾರೆ ಎಂಬುದೇ ಬಿಗ್ ಅಚೀವ್‌ಮೆಂಟ್ ಎಂದಿದ್ದಾರೆ. ನಾವು ಯಾವಾಗ್ಲೂ ಅವರನ್ನ ಖುಷಿ ಖುಷಿಯಾಗಿ ಸೆಲೆಬ್ರೇಟ್ ಮಾಡಬೇಕು ಅಂದಿದ್ದಾರೆ. ನನ್ನ ಡಿಪಿಯಲ್ಲಿ ಅಪ್ಪು ಫೋಟೋ ಹಾಕಿದ್ದು, ಇಂದಿಗೂ ತೆಗೆದಿಲ್ಲ. ತೆಗೆಯೊಲ್ಲ ಎಂದು ಹೇಳಿದ್ದಾರೆ ನಿಶ್ವಿಕಾ.
ಅಪ್ಪು ಮಗ್ಧತನ, ಒಳ್ಳೆತನ
ಈ ಸಂಚಿಕೆ ನಿನ್ನೆ ಶನಿವಾರ ಜೀ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಮತ್ತೆ ಅಪ್ಪು ನೆನೆದ ಅಭಿಮಾನಿಗಳು ಕಣ್ಣೀರು ಹಾಕಿದ್ದು, ಅಪ್ಪು ಕಾರ್ಯವನ್ನ ಸ್ಮರಿಸಿಕೊಂಡಿದ್ದಾರೆ. ಶೋನಲ್ಲಿ ನಿಶ್ವಿಕಾ ನಾಯ್ಡು, ರಮೇಶ್ ಅರವಿಂದ್ ಮಾತ್ರವಲ್ಲದೆ ಅನುಶ್ರೀ ಹಾಗೂ ಅಕುಲ್ ಕೂಡ ಮಾತನಾಡಿದ್ದು, ಅಪ್ಪುವಿನ ಮಗ್ಧತನವನ್ನ, ಒಳ್ಳೆತನವನ್ನ ಸಾರಿ ಸಾರಿ ಹೊಗಳಿದ್ದಾರೆ.