FD vs RD : ಐದು ವರ್ಷದ ನಂತರ ನೀವು ಯಾವುದರಲ್ಲಿ ಹೆಚ್ಚಿನ ಆದಾಯ ಗಳಿಸಬಹುದು?
ಸಾಮಾನ್ಯವಾಗಿ ಜನರು ಎರಡರಲ್ಲೂ ಬಡ್ಡಿದರ ಬಹುತೇಕ ಸಮಾನವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಆದ್ದರಿಂದ FD ಮತ್ತು RD ಯಲ್ಲಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ, ಐದು ವರ್ಷಗಳ ನಂತರ ನೀವು ಎಲ್ಲಿ ಹೆಚ್ಚಿನ ಆದಾಯ ಪಡೆಯುತ್ತೀರಿ? ನೋಡೋಣ ಬನ್ನಿ...

ಎಲ್ಲಿ ಹೆಚ್ಚಿನ ಆದಾಯ ಪಡೆಯುತ್ತೀರಿ?
ಹಣ ಉಳಿತಾಯ ಮಾಡಬೇಕೆನ್ನುವವರು ಹೆಚ್ಚಾಗಿ ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿ (Fixed Deposit) ಮತ್ತು ಮರುಕಳಿಸುವ ಠೇವಣಿ (Recurring Deposit) ಆಯ್ಕೆ ಮಾಡಿಕೊಳ್ಳುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ FDಯಲ್ಲಿ, ಒಂದು ದೊಡ್ಡ ಅಮೌಂಟನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಅಥವಾ ಠೇವಣಿ ಮಾಡಲಾಗುತ್ತದೆ. ಆದರೆ RDಯಲ್ಲಿ ಹಾಗಲ್ಲ, ಪ್ರತಿ ತಿಂಗಳು ಸಣ್ಣ ಕಂತುಗಳಲ್ಲಿ ಡೆಪಾಸಿಟ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಜನರು ಎರಡರಲ್ಲೂ ಬಡ್ಡಿದರ ಬಹುತೇಕ ಸಮಾನವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಆದ್ದರಿಂದ FD ಮತ್ತು RD ಯಲ್ಲಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ, ಐದು ವರ್ಷಗಳ ನಂತರ ನೀವು ಎಲ್ಲಿ ಹೆಚ್ಚಿನ ಆದಾಯ ಪಡೆಯುತ್ತೀರಿ? ನೋಡೋಣ ಬನ್ನಿ...
1.FD ಮತ್ತು RDಯಲ್ಲಿ ಹಣವನ್ನು ಹೇಗೆ ಡೆಪಾಸಿಟ್ ಮಾಡಲಾಗುತ್ತದೆ?
ಈ ಮೊದಲೇ ಹೇಳಿದ ಹಾಗೆ FD ಯಲ್ಲಿ ನೀವು ಬ್ಯಾಂಕಿನಲ್ಲಿ ಒಂದು ದೊಡ್ಡ ಅಮೌಂಟನ್ನು ಡೆಪಾಸಿಟ್ ಇಡುತ್ತೀರಿ. ನಂತರ ಅದರ ಮೇಲೆ ನಿಗದಿತ ಅವಧಿ(Fixed period)ಗೆ ಬಡ್ಡಿ ಪಡೆಯುತ್ತೀರಿ. ಆದರೆ RD ಯಲ್ಲಿ ಹಾಗಲ್ಲ, ನೀವು ಪ್ರತಿ ತಿಂಗಳು ನಿಗದಿತ ಮೊತ್ತ(Fixed amount)ವನ್ನು ಡೆಪಾಸಿಟ್ ಮಾಡ್ತೀರಿ. ಹಾಗಾಗಿ EMIಯಂತೆ ಪ್ರತಿ ಕಂತಿನ ಮೇಲೆ ವಿಭಿನ್ನ ಅವಧಿ(Different period)ಗಳಿಗೆ ಅನುಗುಣವಾಗಿ ಬಡ್ಡಿಯನ್ನು ಪಡೆಯುತ್ತೀರಿ.
2.ಬಡ್ಡಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
FDಯಲ್ಲಿ ಸಂಪೂರ್ಣ ಅವಧಿಗೆ ಸಂಪೂರ್ಣ ಮೊತ್ತದ (Full amount) ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಆದ್ದರಿಂದ ಗಳಿಕೆ ಹೆಚ್ಚು. RD ಯಲ್ಲಿ, ಪ್ರತಿ ಕಂತು ಬೇರೆ ಬೇರೆ ದಿನಾಂಕದಿಂದ ಬಡ್ಡಿ ಗಳಿಸಲು ಪ್ರಾರಂಭಿಸುತ್ತದೆ, ಇದರಿಂದಾಗಿ ಒಟ್ಟು ಬಡ್ಡಿ ಸ್ವಲ್ಪ ಕಡಿಮೆ ಇರುತ್ತದೆ.
3.ಐದು ವರ್ಷಗಳಲ್ಲಿ FD ಮತ್ತು RD ಯಿಂದ ಎಷ್ಟು ಲಾಭ ಸಿಗುತ್ತದೆ?
ವಾರ್ಷಿಕ ಬಡ್ಡಿದರ ಶೇಕಡ 7 ಎಂದು ಭಾವಿಸೋಣ. ಮತ್ತು ನೀವು 5 ವರ್ಷಗಳ ಕಾಲ ಒಂದು ಲಕ್ಷ ರೂಪಾಯಿಗಳನ್ನು FD ಯಲ್ಲಿ ಇಟ್ಟರೆ, ನಿಮಗೆ ಸುಮಾರು 1,40,255 ರೂ. ಸಿಗುತ್ತದೆ. ಆದರೆ ನೀವು 5 ವರ್ಷಗಳ ಕಾಲ RD ಯಲ್ಲಿ ಪ್ರತಿ ತಿಂಗಳು 1,666 ರೂ. (ಒಟ್ಟು 1 ಲಕ್ಷ) ಡೆಪಾಸಿಟ್ ಇಟ್ಟರೆ, ನೀವು ಸುಮಾರು 1,19,500 ರೂ. ಗಳಿಸುತ್ತೀರಿ. ಅಂದರೆ ನೀವು FD ಯಲ್ಲಿ ಸುಮಾರು 20,700 ರೂ. ಹೆಚ್ಚಿನ ಲಾಭ ಪಡೆಯುತ್ತೀರಿ.
4. FD ಅಥವಾ RD ಯಾವುದನ್ನು ಆಯ್ಕೆ ಮಾಡಬೇಕು?
ನೀವು ಒಂದೇ ಬಾರಿಗೆ ಹೆಚ್ಚು ಹಣ ಡೆಪಾಸಿಟ್ ಮಾಡಿದ್ರೆ ನಿಮಗೆ FD ಯಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಒಂದು ವೇಳೆ ನೀವು ಪ್ರತಿ ತಿಂಗಳು ಸ್ವಲ್ಪ ಉಳಿಸಲು ಸಾಧ್ಯವಾದರೆ RD ಸರಿ.
5. ತೆರಿಗೆಯಿಂದ ಏನು ವ್ಯತ್ಯಾಸವಾಗುತ್ತದೆ?
ಎರಡರ ಮೇಲೂ ಪಡೆಯುವ ಬಡ್ಡಿಯು ತೆರಿಗೆಗೆ ಒಳಪಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಮತ್ತು ಬಡ್ಡಿಯು ನಿಗದಿತ ಮಿತಿಯನ್ನು ಮೀರಿದರೆ ಬ್ಯಾಂಕ್ ಟಿಡಿಎಸ್ ಅನ್ನು ಸಹ ಕಡಿತಗೊಳಿಸಬಹುದು. ಹೆಚ್ಚಿನ ಆದಾಯದ ಮೇಲಿನ ತೆರಿಗೆ ಪರಿಣಾಮವು ಸ್ವಲ್ಪ ಹೆಚ್ಚಾಗಿರುತ್ತದೆ.