- Home
- Business
- ಪೋಸ್ಟ್ ಆಫೀಸ್‌ನಲ್ಲಿ ಹೆಂಡ್ತಿ ಹೆಸರಲ್ಲಿ ₹1,00,000 ಎಫ್‌ಡಿ ಮಾಡಿದ್ರೆ 24 ತಿಂಗಳ ನಂತ್ರ ಎಷ್ಟು ಹಣ ಸಿಗುತ್ತೆ?
ಪೋಸ್ಟ್ ಆಫೀಸ್‌ನಲ್ಲಿ ಹೆಂಡ್ತಿ ಹೆಸರಲ್ಲಿ ₹1,00,000 ಎಫ್‌ಡಿ ಮಾಡಿದ್ರೆ 24 ತಿಂಗಳ ನಂತ್ರ ಎಷ್ಟು ಹಣ ಸಿಗುತ್ತೆ?
ಇಂದಿಗೂ ಸಹ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಪತ್ನಿಯ ಹೆಸರಿನಲ್ಲಿ ಹೂಡಿಕೆ ಮಾಡುತ್ತಾರೆ. ತೆರಿಗೆ ಉಳಿಸಲು ಹೀಗೆ ಮಾಡಲಾಗುತ್ತದೆಯಾದರೂ ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡೋಣ...

FD interest in wife’s name: ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ ವಿವಿಧ ಉಳಿತಾಯ ಯೋಜನೆಗಳ ಮೇಲೆ ಭಾರಿ ಬಡ್ಡಿ ನೀಡುತ್ತಿದೆ. ಸರಳ ಉಳಿತಾಯ ಖಾತೆಗಳ ಹೊರತಾಗಿ, ಟಿಡಿ (ಎಫ್‌ಡಿ), ಎಂಐಎಸ್, ಆರ್‌ಡಿ, ಕಿಸಾನ್ ವಿಕಾಸ್ ಪತ್ರದಂತಹ ಹಲವು ರೀತಿಯ ಖಾತೆಗಳನ್ನು ಅಂಚೆ ಕಚೇರಿಯಲ್ಲಿ ತೆರೆಯಬಹುದು. ಆದರೆ ಇಂದು ನಾವು ಅಂಚೆ ಕಚೇರಿಯ ಟಿಡಿ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ಇದು ಬ್ಯಾಂಕುಗಳ ಎಫ್‌ಡಿ ಯೋಜನೆಯಂತೆಯೇ ಇರುತ್ತದೆ.
ಸರಳವಾಗಿ ಹೇಳುವುದಾದರೆ ಅಂಚೆ ಕಚೇರಿಯು FD ಯನ್ನು TD ಅಂದರೆ ಟೈಮ್ ಡೆಪಾಸಿಟ್ ಎಂದು ಹೆಸರಿಸಿದೆ. FDಯಂತೆ, ಅಂಚೆ ಕಚೇರಿಯ TD ಕೂಡ ನಿಗದಿತ ಸಮಯದ ನಂತರ ಮೆಚ್ಯೂರಿಟಿಯಾಗುತ್ತದೆ ಮತ್ತು ಮುಕ್ತಾಯದ ನಂತರ ಗ್ರಾಹಕರು ಸ್ಥಿರ ಬಡ್ಡಿ (Fixed Interest)ಯೊಂದಿಗೆ ಸಂಪೂರ್ಣ ಹಣವನ್ನು ಮರಳಿ ಪಡೆಯುತ್ತಾರೆ.
ಇಂದು ಭಾರತದಲ್ಲಿ ತಮ್ಮ ಹೆಂಡತಿಯ ಹೆಸರಿನಲ್ಲಿ ಹೂಡಿಕೆ ಮಾಡುವ ಜನರ ದೊಡ್ಡ ವರ್ಗವೇ ಇದೆ. ಆಸ್ತಿಯನ್ನು ಖರೀದಿಸುವುದರಿಂದ ಹಿಡಿದು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರೆಗೆ ಜನರು ತಮ್ಮ ಹೆಂಡತಿಯನ್ನೇ ಆಯ್ಕೆ ಮಾಡುತ್ತಾರೆ. ಅದೇ ರೀತಿ, ನೋಂದಣಿ ಶುಲ್ಕ ಮತ್ತು ಸ್ಟಾಂಪ್ ಡ್ಯೂಟಿಯಲ್ಲಿ ವಿನಾಯಿತಿ ಪಡೆಯಲು ಜನರು ತಮ್ಮ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುತ್ತಾರೆ. ಈ ರೀತಿಯಾಗಿ ತೆರಿಗೆ ಉಳಿಸಲು ಜನರು ತಮ್ಮ ಹೆಂಡತಿಯ ಹೆಸರಿನಲ್ಲಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಂದಹಾಗೆ 1 ವರ್ಷದಿಂದ 5 ವರ್ಷಗಳವರೆಗೆ ಅಂಚೆ ಕಚೇರಿಯಲ್ಲಿ ಎಫ್‌ಡಿ ಮಾಡಬಹುದು.
ಅಂಚೆ ಕಚೇರಿಯಲ್ಲಿ 1 ವರ್ಷದಿಂದ 5 ವರ್ಷಗಳ ಅವಧಿಗೆ FD ಮಾಡಬಹುದು. ಅಂಚೆ ಕಚೇರಿಯು 1 ವರ್ಷದ FD ಗೆ ಶೇಕಡ 6.9 ರಷ್ಟು, 2 ವರ್ಷದ FD ಗೆ ಶೇಕಡ 7.0 ರಷ್ಟು, 3 ವರ್ಷದ FD ಗೆ ಶೇಕಡ 7.1 ರಷ್ಟು ಮತ್ತು 5 ವರ್ಷದ FD ಗೆ ಶೇಕಡ 7.5 ರಷ್ಟು ಬಡ್ಡಿಯನ್ನು ನೀಡುತ್ತಿದೆ.
ಅಂಚೆ ಕಚೇರಿಯು ತನ್ನ ಎಲ್ಲಾ ಗ್ರಾಹಕರು, ಸಾಮಾನ್ಯ ನಾಗರಿಕರು ಮತ್ತು ಮಹಿಳಾ ಹಿರಿಯ ನಾಗರಿಕರಿಗೆ FD ಖಾತೆಗಳ ಮೇಲೆ ಸಮಾನ ಬಡ್ಡಿಯನ್ನು ನೀಡುತ್ತದೆ. ಒಂದು ವೇಳೆ ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ 100000 ರೂ.ಅನ್ನು ಅಂಚೆ ಕಚೇರಿಯಲ್ಲಿ 2 ವರ್ಷಗಳವರೆಗೆ ಅಂದರೆ 24 ತಿಂಗಳವರೆಗೆ FD ರೂಪದಲ್ಲಿ ಠೇವಣಿ ಇಟ್ಟರೆ ಮುಕ್ತಾಯದ ನಂತರ ಒಟ್ಟು 113900 ರೂ .ನಿಮ್ಮ ಹೆಂಡತಿಯ ಖಾತೆಗೆ ಬರುತ್ತದೆ.
ಇದರಲ್ಲಿ ನೀವು ಠೇವಣಿ ಇಟ್ಟಿರುವ 1,00,000 ರೂ.ಗಳ ಜೊತೆಗೆ 7185 ರೂ.ಗಳ ಸ್ಥಿರ ಬಡ್ಡಿ(Fixed interest)ಯೂ ಸೇರಿದೆ. ಹೆಂಡತಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಎಫ್‌ಡಿ ಪಡೆಯಲು, ನಿಮ್ಮ ಹೆಂಡತಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವುದು ಅವಶ್ಯಕ.