- Home
- Technology
- Mobiles
- ಕೇವಲ 799 ರೂಗೆ ಜಿಯೋ ಭಾರತ್ ಫೋನ್ ಲಾಂಚ್, ಕುಟುಂಬ ಸದಸ್ಯರ ಸುರಕ್ಷತೆಗೆ ಕೆನೆಕ್ಟಿವಿಟಿ ಫೀಚರ್
ಕೇವಲ 799 ರೂಗೆ ಜಿಯೋ ಭಾರತ್ ಫೋನ್ ಲಾಂಚ್, ಕುಟುಂಬ ಸದಸ್ಯರ ಸುರಕ್ಷತೆಗೆ ಕೆನೆಕ್ಟಿವಿಟಿ ಫೀಚರ್
ಕೇವಲ 799 ರೂಗೆ ಜಿಯೋ ಭಾರತ್ ಫೋನ್ ಲಾಂಚ್, ಕುಟುಂಬ ಸದಸ್ಯರ ಸುರಕ್ಷತೆಗೆ ಕೆನೆಕ್ಟಿವಿಟಿ ಫೀಚರ್ ಸೇರಿದಂತೆ ಹಲವು ವಿಶೇಷತೆಗಳ ಫೋನ್ ಲಾಂಚ್ ಮಾಡಲಾಗಿದೆ. ಮಕ್ಕಳು, ಹಿರಿಯರು, ಪೋಷಕರು ಎಲ್ಲರೂ ಸುರಕ್ಷತೆಗೆ ಈ ಫೋನ್ ಹೇಗೆ ನೆರವಾಗುತ್ತದೆ?

ಹೊಸ ಕ್ರಾಂತಿಗೆ ಮುನ್ನಡಿ ಬರೆದ ಅಂಬಾನಿ
ಹೊಸ ಕ್ರಾಂತಿಗೆ ಮುನ್ನಡಿ ಬರೆದ ಅಂಬಾನಿ
ಟೆಲಿಕಾಂ ಹಾಗೂ ಫೋನ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಮುಕೇಶ್ ಅಂಬಾನಿ ಇದೀಗ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಭಾರತೀಯ ಕುಟುಂಬಗಳ ಡಿಜಿಟಲ್ ಸುರಕ್ಷತೆ, ಡಿಜಿಟಲ್ ಕೇರ್ ಹಾಗೂ ಕನೆಕ್ಟಿವಿಟಿಗಾಗಿ ಹೊಸ ಜಿಯೋ ಭಾರತ್ ಫೋನ್ ಅನಾವರಣ ಮಾಡಲಾಗಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಜಿಯೋ ಭಾರತ್ ಫೋನ್ ಅನಾವರಣ ಮಾಡಲಾಗಿದೆ. ಪ್ರತಿ ಭಾರತೀಯ ಕುಟುಂಬ ಇದರಿಂದಾಗಿ ಬೆಸೆದುಕೊಳ್ಳುತ್ತದೆ, ಸುರಕ್ಷಿತವಾಗಿ ಇರುತ್ತದೆ ಮತ್ತು ಚಿಂತೆಮುಕ್ತವಾಗುತ್ತದೆ. ಈ ನಾವೀನ್ಯತೆ ಮೂಲಕವಾಗಿ ಜಿಯೋ ಸ್ಮಾರ್ಟ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಕೇರ್ ಅನ್ನು ದೇಶದ ಬಹಳ ವಿಶ್ವಾಸಾರ್ಹ, ಕೈಗೆಟುಕುವ ಬೆಲೆಯ ಫೋನ್ ಮೂಲಕ ನೀಡುತ್ತಿದೆ.
ಸುರಕ್ಷತೆ ಮೊದಲು
ಸುರಕ್ಷತೆ ಮೊದಲು
ಈ ಸುರಕ್ಷತೆ ಮೊದಲು ಎಂಬ ಸಲ್ಯೂಷನ್ ನಿಂದಾಗಿ ಕುಟುಂಬಗಳು ಮನೆಯಲ್ಲಿನ ಮಕ್ಕಳು, ಹಿರಿಯ ಪೋಷಕರಿಗೆ ಮತ್ತು ಅವಲಂಬಿತರ ಜೊತೆಗೆ ನಿಕಟವಾಗಿ ಸಂಪರ್ಕದಲ್ಲಿರುವುದು ಸಾಧ್ಯವಾಗುತ್ತದೆ. ಅವರು ಎಲ್ಲೇ ಇದ್ದರೂ ಸರಳ, ಸುರಕ್ಷಿತವಾಗಿ ಮತ್ತು ಸದಾ ಜೊತೆಯಲ್ಲಿ ಇರುವ ಅನುಭವದೊಂದಿಗೆ ಇರಬಹುದು.
ಪ್ರೀತಿ ಪಾತ್ರರು ಎಲ್ಲೆ ತೆರಳಿದರೂ ಮಾಹಿತಿ
ಪ್ರೀತಿ ಪಾತ್ರರು ಎಲ್ಲೆ ತೆರಳಿದರೂ ಮಾಹಿತಿ
ಯಾವಾಗ ಪ್ರೀತಿಪಾತ್ರರು- ಆಪ್ತರು ದೂರದ ಸ್ಥಳಗಳಿಗೆ ತೆರಳಿದಾಗ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಸಿಗುತ್ತಾ ಇರುತ್ತದೆ. ಅವರಿಗೆ ಯಾರು ಕರೆ ಮಾಡಬಹುದು, ಮೆಸೇಜ್ ಮಾಡಬಹುದು ಅಂತ ನಿರ್ವಹಣೆ ಮಾಡಬಹುದು, ಇನ್ನು ಅಪರಿಚಿತ ಕರೆಗಳನ್ನು ಬ್ಲಾಕ್ ಮಾಡಬಹುದು. ಅನಗತ್ಯ ಕಿರಿಕಿರಿಗಳನ್ನು ನಿರ್ಬಂಧಿಸಬಹುದಾಗಿದೆ. ಇದಕ್ಕಾಗಿ “ಬಳಕೆ ನಿರ್ವಹಣೆ” ಮಾಡಬಹುದು. ಬಳಕೆ ಮಾಡುವ ಸಾಧನದ ಬ್ಯಾಟರಿ ಮತ್ತು ನೆಟ್ ವರ್ಕ್ ಗಳ ರಿಯಲ್ ಟೈಮ್ ಒಳನೋಟಗಳನ್ನು ಪಡೆಯಬಹುದು. ಹಾಗೇ ನೆಟ್ ವರ್ಕ್ ಪ್ರಬಲವಾಗಿದೆಯೇ ಎಂಬುದು ತಿಳಿದುಕೊಳ್ಳಬಹುದು. ಇದರಿಂದಾಗಿ ಅಡೆತಡೆಯಿಲ್ಲದ ಕನೆಕ್ಟಿವಿಟಿ ಖಾತ್ರಿಯಾಗುತ್ತದೆ. ಇದು ಫೋನ್ ಮತ್ತು ಸೇವಾ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಏಳು ದಿನಗಳ ಬ್ಯಾಟರಿ ಬ್ಯಾಕಪ್ ದೊರೆಯುವುದರಿಂದಾಗಿ ಜಿಯೋಭಾರತ್ ಬಳಕೆದಾರರು ಎಲ್ಲೇ ಇದ್ದರೂ ಹಾಗೂ ಯಾವುದೇ ಸಮಯದಲ್ಲಿ ತಮ್ಮ ಪ್ರೀತಿಪಾತ್ರರ ಸಂಪರ್ಕಕ್ಕೆ ಸಿಗುತ್ತಾರೆ.
ಮಕ್ಕಳ ಸಂಪರ್ಕ
ಮಕ್ಕಳ ಸಂಪರ್ಕ
ಯಾವುದೇ ಸಾಮಾಜಿಕ ಮಾಧ್ಯಮದ ಗಮನ ಸೆಳೆಯುವಿಕೆ ಇಲ್ಲದೆ ಮಕ್ಕಳು ಸಂಪರ್ಕದಲ್ಲಿ ಇರುತ್ತಾರೆ. ಇದರ ಜೊತೆಗೆ ಸ್ವಾರ್ಟ್ ಲೊಕೇಷನ್ ಹಾಗೂ ಕರೆ ನಿರ್ವಹಣೆ ಸಹ ಇದೆ. ಇದರಿಂದ ಮಕ್ಕಳಿಗೆ ದೊಡ್ಡ ಮಟ್ಟದ ಪ್ರಯೋಜನ ಇದೆ. ಇನ್ನು ಹಿರಿಯ ಪೋಷಕರಿಗೆ ಬಳಸಲು ಸುಲಭವಾದ ಫೋನ್ ಗಳು ಜೊತೆಗೆ ಆರೋಗ್ಯ ಮತ್ತು ಲೊಕೇಷನ್ ಬಗೆಗಿನ ಅಪ್ ಡೇಟ್ ಸಹ ಕುಟುಂಬ ಸದಸ್ಯರಿಗೆ ದೊರೆಯುತ್ತದೆ. ಮಹಿಳೆಯರಿಗೆ ತುಂಬ ನಂಬಿಕಸ್ಥ ಸಹಚರ್ಯ ಸಿಕ್ಕಂತೆ ಆಗುತ್ತದೆ. ಸುರಕ್ಷತೆ ಮತ್ತು ಕನೆಕ್ಟಿವಿಟಿ ಎಂಬ ಬಹಳ ಮುಖ್ಯವಾದದ್ದನ್ನು ಒದಗಿಸುತ್ತದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಈ ಎಲ್ಲ ಸಾಮರ್ಥ್ಯದಿಂದ ಹೇಗೆಲ್ಲ ಅನುಕೂಲ ಇದೆ, ಭಾರತೀಯ ಕುಟುಂಬಗಳ ಆರಾಮ, ಸುರಕ್ಷತೆ ಹಾಗೂ ಸಬಲೀಕರಣಕ್ಕೆ ಹೇಗೆ ನೆರವಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಲಾಯಿತು. ಪ್ರತಿ ಭಾರತೀಯರಿಗೆ ತಂತ್ರಜ್ಞಾನ ದೊರಕಿಸಬೇಕು ಎಂಬ ಜಿಯೋದ ಧ್ಯೇಯಕ್ಕೆ ಇದು ಪೂರಕವಾಗಿದೆ.
ಲಭ್ಯತೆ ಹಾಗೂ ಬೆಲೆ
ಲಭ್ಯತೆ ಹಾಗೂ ಬೆಲೆ
ಹೊಸ ಜಿಯೋಭಾರತ್ ಸೇಫ್ಟಿ- ಫಸ್ಟ್ ಫೋನ್ ಗಳು ಜಿಯೋ ಸ್ಟೋರ್ ಗಳಲ್ಲಿ ಎಲ್ಲ ಕಡೆ, ಮೊಬೈಲ್ ಮಾರಾಟ ಮಳಿಗೆಗಳಲ್ಲಿ, ಜಿಯೋ ಮಾರ್ಟ್, ಅಮೆಜಾನ್, ಸ್ವಿಗ್ಗಿ ಇನ್ ಸ್ಟಾಮಾರ್ಟ್ ಇಲ್ಲೆಲ್ಲ ದೊರೆಯುತ್ತದೆ. ಇದರ ಆರಂಭ ₹799 ರಿಂದ ಆಗುತ್ತದೆ. ಭಾರತದ ಪ್ರತಿ ಮನೆಯಲ್ಲಿ ಮಾನಸಿಕ ನೆಮ್ಮದಿ ದೊರೆಯುವಂತೆ ಮಾಡುತ್ತದೆ.
ಜಿಯೋ ತಂತ್ರಜ್ಞಾನ
ಜಿಯೋ ತಂತ್ರಜ್ಞಾನ
ಜಿಯೋದಲ್ಲಿ ನಾವು ತಂತ್ರಜ್ಞಾನ ಎಂಬುದು ಗಹನವಾದ ಉದ್ದೇಶವಾದ ಕನೆಕ್ಟ್, ಸುರಕ್ಷತೆ ಮತ್ತು ಪ್ರತಿ ಭಾರತೀಯರ ಸಬಲೀಕರಣ ಮಾಡಲ ಹೊಸ ಫೋನ್ ಲಾಂಚ್ ಮಾಡಿದ್ದೇವೆ ಎಂದು ಜಿಯೋ ಅಧ್ಯಕ್ಷ ಸುನಿಲ್ ದತ್ ಹೇಳಿದ್ದರೆ. ಕೇವಲ ಫೋನ್ ಫೀಚರ್ ಮಾತ್ರವಲ್ಲ, ಇದು ಜೀವನ ಸಬಲಗೊಳಿಸುವ ನಾವೀನ್ಯತೆ ಆಗಿದೆ. ಇದು ಕುಟುಂಬಗಳಿಗೆ ಮಾನಸಿಕ ನೆಮ್ಮದಿ, ನಂಬಿಕೆ ಹಾಗೂ ಕಾಳಜಿಯನ್ನು ಒದಗಿಸುತ್ತದೆ. ಅದು ಕೂಡ ಸುಲಭ ಹಾಗೂ ಕೈಗೆಟುಕುವ ಬೆಲೆ ಎಂದು ದತ್ ಹೇಳಿದ್ದಾರೆ.