ಕೂದಲು ಉದುರುವಿಕೆ ತಡೆದು ದಟ್ಟವಾಗಿ ಬೆಳೆಯಲು ಸಹಾಯ ಮಾಡುವ ಐದು ಸೂಪರ್ ಫುಡ್‌ಗಳು
Foods to control hair Fall: ಇತ್ತೀಚೆಗೆ ಸಾಮಾನ್ಯವಾದ ಕೂದಲು ಉದುರುವಿಕೆ ಸಮಸ್ಯೆಯನ್ನು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಯಂತ್ರಿಸಬಹುದು. ಈ ಲೇಖನದಲ್ಲಿ ಕೂದಲು ಬೆಳವಣಿಗೆಗೆ ಸಹಕರಿಸುವ ಹಾಗೂ ಕೂದಲು ಉದುರುವುದನ್ನು ತಡೆಯುವ ಸೂಪರ್‌ಫುಡ್‌ಗಳ ಬಗ್ಗೆ ವಿವರಿಸಲಾಗಿದೆ.

ಕೂದಲು ಉದುರುವಿಕೆ ಸಮಸ್ಯೆ
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಇಂದು ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ದಿನನಿತ್ಯದ ಜೀವನಶೈಲಿಯಲ್ಲಿ ಕೆಲವೊಂದು ಆಹಾರಗಳನ್ನು ಅಳವಡಿಸಿಕೊಳ್ಳಬೇಕು. ಈ ಲೇಖನದಲ್ಲಿ ಐದು ಸೂಪರ್ ಫುಡ್‌ಗಳ ಮಾಹಿತಿಯನ್ನು ಈ ಲೇಖನದಲ್ಲಿದೆ.
ಹಸಿರು ತರಕಾರಿ & ನಟ್ಸ್ ಮತ್ತು ಸೀಡ್ಸ್
ಪಾಲಕ್ ಮತ್ತು ಇತರ ಹಸಿರು ಎಲೆ ತರಕಾರಿಗಳಲ್ಲಿ ಕಬ್ಬಿಣ ಮತ್ತು ಇತರ ಖನಿಜಾಂಶಗಳು ಹೇರಳವಾಗಿದೆ. ಇದು ಕೂದಲಿನ ಕಿರುಚೀಲಗಳನ್ನು ಆರೋಗ್ಯವಾಗಿಡುತ್ತದೆ. ಈ ಹಸಿರು ತರಕಾರಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತವೆ.
ನಟ್ಸ್ ಮತ್ತು ಸೀಡ್ಸ್
ಬಾದಾಮಿ, ವಾಲ್‌ನಟ್, ಅಗಸೆ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಇ ನೀಡಿ ಕೂದಲನ್ನು ಬಲಪಡಿಸುತ್ತವೆ ಮತ್ತು ನೆತ್ತಿಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಮೀನು ಮತ್ತು ಅವಕಾಡೊ
ಕೊಬ್ಬಿನ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಈ ಅಂಶಗಳುಯ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬಯೋಟಿನ್, ವಿಟಮಿನ್ ಇ, ವಿಟಮಿನ್ ಡಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಹೊಂದಿರುವ ಅವಕಾಡೊ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಅವಕಾಡೋವನ್ನು ಸೇರಿಸಿಕೊಳ್ಳಿ.
ಇದನ್ನೂ ಓದಿ: ತಲೆಹೊಟ್ಟು ನಿವಾರಣೆಗೆ ಈ 5 ಮನೆಮದ್ದನ್ನ ಬಳಸಿ, ನೆತ್ತಿ ಫುಲ್ ಕ್ಲೀನ್ ಆಗುತ್ತೆ
ಬೆರ್ರಿ ಹಣ್ಣುಗಳು
ಬ್ಲೂಬೆರ್ರಿ, ಸ್ಟ್ರಾಬೆರಿಯಂತಹ ಬೆರ್ರಿಗಳು ಕೂದಲನ್ನು ಬಲಪಡಿಸಲು ಮತ್ತು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯಕವಾಗಿವೆ. ಬೆರ್ರಿ ಹಣ್ಣುಗಳ ಸೇವನೆಯಿಂದ ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ: Chemical-free Hair Dye: ಕೆಮಿಕಲ್ ಹೇರ್ ಡೈ ಬಿಟ್ಬಿಡಿ, ಬಿಳಿ ಕೂದಲು ಕಪ್ಪಾಗ್ಬೇಕು ಅಂದ್ರೆ ಟೀ ಪೌಡರ್ ಟ್ರೈ ಮಾಡಿ