ಮಳೆಗಾಲದಲ್ಲಿ ಅಡುಗೆಮನೆ ಕ್ಲೀನ್ ಮತ್ತು ಡ್ರೈ ಆಗಿ ಇಡ್ಕೊಳ್ಳೋದು ಹೇಗೆ?
ಮಳೆಗಾಲದಲ್ಲಿ ಅಡುಗೆಮನೆಯನ್ನ ಕ್ಲೀನ್ ಆಗಿ ಮತ್ತು ಒಣಗಿರೋ ಹಾಗೆ ಇಡ್ಕೊಳ್ಳೋಕೆ ಉಪಯುಕ್ತ ಸಲಹೆಗಳು ಇಲ್ಲಿವೆ.

Monsoon Kitchen tips
ಮಳೆಗಾಲದಲ್ಲಿ ಅಡುಗೆಮನೆ ತುಂಬಾ ಸಮಸ್ಯೆ ಕೊಡುತ್ತದೆ. ಅಡುಗೆಮನೆ ಕ್ಲೀನ್ ಆಗಿದ್ರೆ ನಾವು ಹೆಲ್ದಿ ಆಗಿರ್ತೀವಿ. ಮಳೆಗಾಲದಲ್ಲಿ ಅಡುಗೆಮನೆ ಕ್ಲೀನ್ ಮತ್ತು ಡ್ರೈ ಆಗಿ ಇಡ್ಕೊಳ್ಳೋದು ಹೇಗೆ ಎಂಬುದರ ಸೂಪರ್ ಮಾಹಿತಿ ಇಲ್ಲಿದೆ
1. ಕಸದ ಬುಟ್ಟಿಗಳ ನಿರ್ವಹಣೆ
ಕಸದ ಬುಟ್ಟಿಯಲ್ಲಿ ಹಣ್ಣಿನ ಸಿಪ್ಪೆ, ತರಕಾರಿ ಸಿಪ್ಪೆ ಎಲ್ಲಾ ಹಾಕ್ತಿವಿ. ಮಳೆಗಾಲದಲ್ಲಿ ಕಸ ಜಾಸ್ತಿ ಸೇರಿಸಿ ತುಂಬಾ ದಿನಗಳವಗರೆ ಇಡ್ಬೇಡಿ. ಆಗಾಗ ತೆಗೆದು ಹಾಕಬೇಕು. ಇಲ್ಲಾಂದ್ರೆ ಹುಳು, ಕ್ರಿಮಿ, ಕೀಟಗಳು ಬರುತ್ತದೆ. ಇನ್ಫೆಕ್ಷನ್ ಆಗೋ ಚಾನ್ಸಸ್ ಜಾಸ್ತಿ ಇರುತ್ತದೆ.
ಕಸದ ಬುಟ್ಟಿಗಳನ್ನು ಮನೆ ಹೊರಗೆ ಅಥವಾ ಗಾಳಿ-ಬೆಳಕು ಇರೋ ಪ್ರದೇಶದಲ್ಲಿ ಇರಿಸಿಕೊಳ್ಳಿ. ಹಸಿ ಮತ್ತು ಒಣ ಕಸ ಎರಡನ್ನೂ ಪ್ರತ್ಯೇಕವಾಗಿ ವಿಂಗಡಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು.
2. ನೀರು ಬಳಕೆ
ಅಡುಗೆಮನೆಯಲ್ಲಿ ನೀರು ಜಾಸ್ತಿ ಉಪಯೋಗಿಸ್ತೀವಿ. ಮಳೆಗಾಲದಲ್ಲಿ ಒದ್ದೆ ಇದ್ರೆ ಕ್ರಿಮಿಗಳು ಬೆಳೆಯುತ್ತವೆ. ವಾಸನೆ ಬರುತ್ತದೆ. ಫಂಗಸ್ ಬೆಳೆಯುತ್ತದೆ. ಕೆಲಸ ಮುಗಿದ ತಕ್ಷಣ ಒರೆಸಿ ಒಣಗಿಸಿ. ಸಿಂಕ್‌ನಲ್ಲಿ ಹೆಚ್ಚು ಸಮಯ ಪಾತ್ರೆಗಳನ್ನು ಇರಿಸದೇ ಆಗಾಗ ತೊಳೆದಿಟ್ಟುಕೊಳ್ಲಿ.
3. ವಾಸನೆ
ಮಳೆಗಾಲದಲ್ಲಿ ಎಷ್ಟೇ ಒರೆಸಿದ್ರೂ ವಾಸನೆ, ಒದ್ದೆ ಇರುತ್ತೆ. ಒಂದು ಬಟ್ಟಲಲ್ಲಿ ಬೇಕಿಂಗ್ ಸೋಡಾ, ಉಪ್ಪು, ನೀರು ಹಾಕಿ ಇಡಿ. ಒದ್ದೆ, ವಾಸನೆ ಹೀರಿಕೊಳ್ಳುತ್ತದೆ. ಇದರಿಂದ ಅಡುಗೆಮನೆಯಲ್ಲಿ ಯಾವುದೇ ರೀತಿಯ ದುರ್ವಾಸನೆ ಇರಲ್ಲ.
4. ಕಿಟಕಿ ತೆರೆಯಿರಿ
ಅಡುಗೆಮನೆ ಕಿಟಕಿ ಯಾವಾಗ್ಲೂ ಮುಚ್ಚಿರ್ತೀರಾ? ಗಾಳಿ ಆಡೋದಿಲ್ಲ, ಒದ್ದೆ ಇರುತ್ತದೆ, ಫಂಗಸ್ ಬೆಳೆಯುತ್ತದೆ. ಅಡುಗೆ ಆದ್ಮೇಲೆ ಒಂದು ಗಂಟೆ ಕಿಟಕಿ, ಬಾಗಿಲು ತೆಗೆದಿಡಿ. ಇದರಿಂದ ಅಡುಗೆಮನೆ ಡ್ರೈ ಆಗಿರುತ್ತದೆ.
5. ಆಹಾರ ಸಂಗ್ರಹ
ಮಳೆಗಾಲದಲ್ಲಿ ಊಟ ಬೇಗ ಹಾಳಾಗುತ್ತೆ. ಅಡುಗೆ ಆದ್ಮೇಲೆ ಹೊರಗೆ ಇಡ್ಬೇಡಿ. ಫ್ರಿಡ್ಜ್ ನಲ್ಲಿಡಿ. ಹಾಳಾದ ಊಟ ತಿನ್ನಬೇಡಿ.